ಚಿನ್ನ ಸಾಧಕಿಗೆ ಬಾಲಿವುಡ್ ಅಭಿನಂದನೆ.. ಕಂಗನಾ, ಅಕ್ಷಯ್ ಕೊಂಡಾಡಿದ್ದು ಹೀಗೆ!

By Suvarna News  |  First Published Aug 30, 2021, 11:03 PM IST

* ಟೋಕಿಯೋ ಪ್ಯಾರಾಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಸೋಮವಾರ ಭಾರತಕ್ಕೆ ಡಬಲ್ ಧಮಾಕಾ

* ಡಿಸ್ಕಸ್‌ ಥ್ರೋನಲ್ಲಿ ರಜತ ಪದಕ ಗೆದ್ದ ಯೋಗೇಶ್ ಕಥುನಿಯಾ

* ಟೋಕಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಒಲಿದ 5ನೇ ಪದಕ 


ಟೊಕಿಯೋ (ಆ.30): ಟೋಕಿಯೋ ಪ್ಯಾರಾಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಸೋಮವಾರ(ಆ.30) ಭಾರತ ಮತ್ತೆರಡು ಪದಕಗಳನ್ನು ಜಯಿಸಿದ್ದು ಸಾರ್ವಕಾಲಿಕ ಗರಿಷ್ಠ ಪದಕಗಳ ಸಾಧನೆ ಮಾಡಿದೆ. ಶೂಟಿಂಗ್‌ನಲ್ಲಿ ಅವನಿ ಲೆಖಾರಾ ಚಿನ್ನ ಗೆದ್ದು ಇತಿಹಾಸ ನಿರ್ಮಿಸಿದ ಕೆಲವೇ ನಿಮಿಷಗಳಲ್ಲಿ ಡಿಸ್ಕಸ್‌ ಥ್ರೋನಲ್ಲಿ ಯೋಗೇಶ್ ಕಥುನಿಯಾ ಬೆಳ್ಳಿ ಪದಕ ಜಯಿಸಿದ್ದಾರೆ. 

ಈ ಸಾಧನೆಯನ್ನು ಪ್ರಧಾನಿ ನರೇಂದ್ರ  ಮೋದಿ ಆದಿಯಾಗಿ ಎಲ್ಲರೂ ಕೊಂಡಾಡಿದ್ದಾರೆ.  ಬಾಲಿವುಡ್ ನ ಅಕ್ಷಯ್ ಕುಮಾರ್, ಅಭಿಷೇಕ್ ಬಚ್ಚನ್, ಕರೀನಾ ಕಪೂರ್ ಕಂಗನಾ ರಣಾವತ್ ಕೊಂಡಾಡಿದ್ದಾರೆ. 

Latest Videos

undefined

ಅವನಿ ಲೆಖಾರಾ ಪೋಟೋ ಶೇರ್ ಮಾಡಿಕೊಂಡಿರುವ ಅಕ್ಷಯ್ ಕುಮಾರ್ ಅಭಿನಂದನೆ ತಿಳಿಸಿದ್ದಾರೆ. ಅಭಿಷೇಕ್ ಇದನ್ನು ಚಿನ್ನದ ಘಳಿಗೆ ಎಂದು ಬಣ್ಣಿಸಿದ್ದಾರೆ. ದೇಶದ ಹೆಮ್ಮೆಯನ್ನು ಸಾರಿದ್ದಕ್ಕೆ ಅಭಿನಂದನೆ ಎಂದು ಕಂಗನಾ ತಿಳಿಸಿದ್ದಾರೆ. ಒಂದು ಒಳ್ಳೆಯ ಸುದ್ದಿಯಿಂದ ದಿನ ಆರಂಭವಾಯಿತು ಎಂದು ತಾಪ್ಸಿ ಪನ್ನು  ಹೇಳಿದ್ದಾರೆ.

ದಾಖಲೆಗಳನ್ನು ಮುರಿದು ಪದಕ ಸಾಧನೆ ಮಾಡಿದ ಭಾರತ

ವಿಕ್ಕಿ ಕೌಶಲ್, ರಣದೀಪ್ ಹೂಡಾ ಸಹ  ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಪೋಟೋ ಶೇರ್‌ ಮಾಡಿಕೊಂಡು ಅಭಿನಂದನೆ ತಿಳಿಸಿದ್ದಾರೆ.  ಇದು ನನ್ನ ಜೀವನದ ಅತ್ಯಂತ ಖುಷಿಯ ಘಳಿಗೆ. ಎಂದಿಗೂ ಈ ದಿನ ಮರೆಯಲು ಸಾಧ್ಯವಿಲ್ಲ ಎಂದು ಪದಕ ಸಾಧನೆ ಮಾಡಿದ ಅವನಿ ತಿಳಿಸಿದ್ದಾರೆ. 

ಹರ್ಯಾಣದ ಬಹುದುರ್ಗಾ ಮೂಲದ 24 ವರ್ಷದ ಯೋಗೇಶ್ ಕಥುನಿಯಾ ಫೈನಲ್‌ನಲ್ಲಿ ಆರನೇ ಹಾಗೂ ಕೊನೆಯ ಯತ್ನದಲ್ಲಿ ಶ್ರೇಷ್ಠ ಪ್ರದರ್ಶನ(44.38 ಮೀ) ದೂರ ಎಸೆಯುವ ಮೂಲಕ ರಜತ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. 

 

First ever women’s in bravo 👏🏽👏🏽👏🏽 😎😎 pic.twitter.com/lsnIj9YZzE

— Randeep Hooda (@RandeepHooda)

A gold-en moment for India! Hats off on becoming the first Indian woman to win gold at pic.twitter.com/tsWoApdUzk

— Abhishek Bachchan (@juniorbachchan)
click me!