ಇನ್ನೂ ವರ್ಕಿಂಗ್ ಕಂಡಿಶನ್: ಸಿಕ್ತು 2018ರಲ್ಲಿ ನದಿಯಲ್ಲಿ ಬಿದ್ದ ಐಫೋನ್!

By Web DeskFirst Published Oct 1, 2019, 4:54 PM IST
Highlights

2018ರಲ್ಲಿ ನದಿಯಲ್ಲಿ ಬಿದ್ದ ಐಫೋನ್ ಸಿಕ್ಕಾಗ..| ಇನ್ನೂ ವರ್ಕಿಂಗ್ ಕಂಡಿಶನ್’ನಲ್ಲಿರುವ ಐಫೋನ್ ಕಂಡು ದಂಗು| ನದಿಯಲ್ಲಿ ಬಿದ್ದ ಐಫೊನ್ ಪತ್ತೆ ಹಚ್ಚಿದ ಸೌಥ್ ಕರೋಲಿನಾನ ಯುಟ್ಯೂಬರ್ ಮೈಕೆಲ್ ಬೆನೆಟ್| ಎಡಿಸ್ಟೋ ನದಿಯಲ್ಲಿ ಐಫೋನ್ ಕಳೆದುಕೊಂಡಿದ್ದ ಎರಿಕಾ ಬೆನೆಟ್| 15 ತಿಂಗಳ ಬಳಿಕವೂ ವಾಟರ್ ಪ್ರೂಫ್ ಕವರ್’ನಲ್ಲಿ ಐಫೋನ್ ಸುರಕ್ಷಿತ|

ಸೌಥ್ ಕರೋಲಿನಾ(ಅ.01): ವಿಶ್ವದಾದ್ಯಂತ ಮೊಬೈಲ್ ಪ್ರಿಯರ ಮನ ಗೆದ್ದಿರುವ ಐಫೋನ್, ತಾನು ಪ್ರತಿಪಾದಿಸುವ ಎಲ್ಲ ಫೀಚರ್’ಗಳನ್ನು ನಿಜಕ್ಕೂ ಕಾರ್ಯರೂಪಕ್ಕೆ ತರುತ್ತದೆ ಎಂಬುಕ್ಕೆ ಈ ಘಟನೆ ಸಾಕ್ಷಿ.

ಸೌಥ್ ಕರೋಲಿನಾನ ಯುಟ್ಯೂಬರ್ ಮೈಕೆಲ್ ಬೆನೆಟ್ 2018ರಲ್ಲಿ ಎಡಿಸ್ಟೋ ನದಿಯಲ್ಲಿ ಬಿದ್ದಿದ್ದ ಐಪೋನ್’ ಸುರಕ್ಷಿತವಾಗಿರುವುದನ್ನು ಪತ್ತೆ ಹಚ್ಚಿದ್ದಾರೆ. ನಜೆಟ್ ನಾಗಿನ್ ಎಂಬ ಯಟ್ಯೂಬ್ ಚಾನೆಲ್ ನಡೆಸುವ ಮೈಕೆಲ್ ಬೆನೆಟ್, ನದಿಯಲ್ಲಿ ಬಿದ್ದಿರುವ ವಸ್ತುಗಳನ್ನು ಪತ್ತೆ ಹಚ್ಚುವ ಹವ್ಯಾಸವನ್ನೂ ಹೊಂದಿದ್ದಾರೆ.

Latest Videos

ಅದರಂತೆ ಕಳೆದ ವಾರ ಎಡಿಸ್ಟೋ ನದಿಯಲ್ಲಿ ವಸ್ತುಗಳ ಹುಡುಕಾಟದಲ್ಲಿ ನಿರತರಾಗಿದ್ದಾಗ ವಾಟರ್ ಪ್ರೂಫ್ ಕವರ್ ನಲ್ಲಿ ಐಫೋನ್ ಸಿಕ್ಕಿದೆ. ಅದನ್ನು ಮರಳಿ ತಂದು ಚಾರ್ಜ್ ಮಾಡಿ ನೈಜ ಮಾಲೀಕರಿಗೆ ಕರೆ ಮಾಡಿ ಫೋನ್ ತಲುಪಿಸಿದ್ದಾರೆ ಮೈಕೆಲ್.

ಈ ಫೋನ್ ಎರಿಕಾ ಬೆನೆಟ್ ಎಂಬುವವರಿಗೆ ಸೇರಿದ್ದಾಗಿದ್ದು, 2018ರಲ್ಲಿ ಎರಿಕಾ ಈ ಫೋನ್’ನ್ನು ಎಡಿಸ್ಟೋ ನದಿಯಲ್ಲಿ ಕಳೆದುಕೊಂಡಿದ್ದರು. ಐಫೋನ್’ನ ವಾಟರ್ ಪ್ರೂಫ್ ಕವರ್ ನಿಜಕ್ಕೂ ನೀರನ್ನು ಫೋನ್ ಒಳಗಡೆ ಹೋಗುವುದನ್ನು ತಡೆದಿದ್ದು, ಎರಿಕಾ ಇದೀಗ ತಮ್ಮ ಹಳೆಯ ಫೋಟೋಗಳನ್ನೆಲ್ಲಾ ಮರಳಿ ಪಡೆದಿದ್ದಾರೆ.

ಈ ಕುರಿತು ಮೈಕೆಲ್ ಯುಟ್ಯೂಬ್’ನಲ್ಲಿ ವಿಡಿಯೋ ಶೇರ್ ಮಾಡಿದ್ದು, ಐಫೋನ್ ಕಾರ್ಯಕ್ಷಮತೆಗೆ ವಿಶ್ವದಾದ್ಯಂತ ಪ್ರಶಂಸೆಗಳ ಮಹಾಪೂರ ಹರಿದು ಬರುತ್ತಿದೆ.

click me!