Fact Check !ಎರಡು ಸೂರ್ಯ ಉದಯ: ಭಾಸ್ಕರನೆಂದ ಸರಿಯಾಗಿ ನೋಡು ಮಾರಾಯ!

By Web DeskFirst Published Sep 30, 2019, 6:00 PM IST
Highlights

ಏಕಕಾಲದಲ್ಲಿ ಆಗಸದಲ್ಲಿ ಎರಡು ಸೂರ್ಯ ಉದಯ| ಸಾಮಾಜಿಕ ಜಾಲತಣದಲ್ಲಿ ಹರಿದಾಡುತ್ತಿದೆ ವೈರಲ್ ಫೋಟೋ| ಅಮೆರಿಕ-ಕೆನಡಾ ಗಡಿಭಾಗದಲ್ಲಿ ಏಕ ಕಾಲದಲ್ಲಿ ಎರಡು ಸೂರ್ಯ| ಮೂನ್ ಹಂಟರ್ ಖಗೋಳ ವಿದ್ಯಮಾನ ಕ್ಯಾಮರಾದಲ್ಲಿ ಸೆರೆ| ಸೂರ್ಯನ ಬೆಳಕನ್ನು ಪ್ರತಿಫಲಿಸುವ ಚಂದ್ರ|

ವಾಷಿಂಗ್ಟನ್(ಸೆ.30): ಅಮೆರಿಕ ಹಾಗೂ ಕೆನಡಾದ ಗಡಿಭಾಗದಲ್ಲಿ ಒಂದೇ ಕಾಲದಲ್ಲಿ ಎರಡು ಸೂರ್ಯ ಉದಯಿಸಿದ ಸುದ್ದಿ ವಿಶ್ವದಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಆದರೆ ಅಸಲಿಗೆ ಸೂರ್ಯೋದಯದ ವೇಳೆಯೇ ಉದಯಿಸುವ ಚಂದ್ರ ಸೂರ್ಯನ ಬೆಳಕನ್ನು ಪ್ರತಿಫಲಿಸುವ ಮೂನ್ ಹಂಟರ್ ಎಂಬ ಖಗೋಳ ವಿದ್ಯಮಾನ ಘಟಿಸಿದ್ದು, ಇದನ್ನೇ ಏಕಕಾಲದಲ್ಲಿ ಎರಡು ಸೂರ್ಯ ಉದಯಿಸಿವೆ ಎಂಬ ಸುದ್ದಿ ಸಾಮಾಜಿಕ ಜಾಲತಣದಲ್ಲಿ ಹರಿಬಿಡಲಾಗಿದೆ.

ಭೂಮಿ ತನ್ನ ಅಕ್ಷ ಬದಲಿಸಿದಾಗ ಸೂರ್ಯ ಮತ್ತು ಚಂದ್ರ ಎರಡೂ ಒಂದೇ ಸಮಯಕ್ಕೆ ಉದಯಿಸುತ್ತವೆ. ಈ ವೇಳೆ ಚಂದ್ರ ಸೂರ್ಯನ ಬೆಳಕನ್ನು ಪ್ರತಿಫಲಿಸುತ್ತದೆ. ಈ  ಖಗೋಳ ವಿದ್ಯಮಾನವನ್ನು ಮೂನ್ ಹಂಟರ್ ಎಂದು ಕರೆಯಕಲಾಗುತ್ತದೆ.

ಏನಿದು ಮೂನ್ ಹಂಟರ್: ಭೂಮಿ ತನ್ನ ಅಕ್ಷ ಬದಲಿಸಿದಾಗ ಸೂರ್ಯ ಮತ್ತು ಚಂದ್ರ ಎರಡೂ ಒಂದೇ ಸಮಯಕ್ಕೆ ಉದಯಿಸುತ್ತವೆ. ಈ ವೇಳೆ ಚಂದ್ರ ಸೂರ್ಯನ ಬೆಳಕನ್ನು ಪ್ರತಿಫಲಿಸುತ್ತದೆ. ಈ  ಖಗೋಳ ವಿದ್ಯಮಾನವನ್ನು ಮೂನ್ ಹಂಟರ್ ಎಂದು ಕರೆಯಕಲಾಗುತ್ತದೆ.

ಈ ವೇಳೆ ಚಂದ್ರ ಸೂರ್ಯನಷ್ಟೇ ಪ್ರಕಾಶಮಾನವಾಗಿ ಕಾಣುವ ಕಾರಣದಿಂದ ಆಗಸದಲ್ಲಿ ಎರಡು ಸೂರ್ಯ ಉದಯಿಸಿದಂತೆ ಭಾಸವಾಗುತ್ತದೆ. ಈ ವಿದ್ಯಮಾನವೇ ಇದೀಗ ಸಾಮಾಜಿಕ ಜಾಲತಾನದಲ್ಲಿ ವೈರಲ್ ಆಗಿದೆ.

ಮತ್ತಷ್ಟು ಫ್ಯಾಕ್ಟ್ ಚೆಕ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

click me!