ಬುಗಾಟಿ ಕಾರಿನ ಚಕ್ರ ಬದಲಾಯಿಸೋ ಹಣದಲ್ಲಿ BMW ಕಾರು ಖರೀದಿಸಬಹುದು!

Published : Jul 29, 2018, 03:29 PM ISTUpdated : Jul 30, 2018, 12:16 PM IST
ಬುಗಾಟಿ ಕಾರಿನ ಚಕ್ರ ಬದಲಾಯಿಸೋ ಹಣದಲ್ಲಿ BMW ಕಾರು ಖರೀದಿಸಬಹುದು!

ಸಾರಾಂಶ

ವಿಶ್ವದ ದುಬಾರಿ ಕಾರು ಬುಗಾಟಿ ವೆಯ್ರಾನ್ ಕಾರಿನ ಬೆಲೆ 20 ಕೋಟಿಯಿಂದ ಪ್ರಾರಂಭವಾಗಲಿದೆ. ಆಧರೆ ಈ ಕಾರಿನ ಮೈಂಟೇನೆನ್ಸ್ ಕೇಳಿದರೆ ನೀವು ದಂಗಾಗಿ ಬಿಡುತ್ತೀರಿ. ಅಷ್ಟಕ್ಕೂ ಬುಗಾಟಿ ವೆಯ್ರಾನ್ ಕಾರಿನ ಆಯಿಲ್ ಚೇಂಜ್, ಟಯರ್ ಚೇಂಜ್ ಹಾಗೂ ಸರ್ವೀಸ್‌ ಬೆಲೆ ಎಷ್ಟು ಗೊತ್ತಾ? ಇಲ್ಲಿದೆ ವಿವರ.

ಬೆಂಗಳೂರು(ಜು.29): ವಿಶ್ವದ ದುಬಾರಿ ಕಾರುಗಳಲ್ಲಿ ಬುಗಾಟಿ ಅಗ್ರಸ್ಥಾನದಲ್ಲಿದೆ. 18 ಕೋಟಿ ರೂಪಾಯಿಂದ ಆರಂಭವಾಗೋ ಈ ಕಾರು ಹೊಸ ಸಂಚಲನ ಮೂಡಿಸಿದೆ. ಅದರಲ್ಲೂ ಬುಗಾಟಿ ಸಂಸ್ಥೆಯ 20 ಕೋಟಿಗೂ ಅಧಿಕ ಮೌಲ್ಯದ ವೆಯ್ರಾನ್ ಕಾರು, ನಿಮ್ಮನ್ನ ಮೋಡಿ ಮಾಡದೇ ಇರೋದಿಲ್ಲ.

ದುಬಾರಿ ಕಾರುಗಳು ಜನಸಾಮ್ಯನರಿಗೆ ಖರೀದಿಸಲು ಸಾಧ್ಯವಿಲ್ಲ. ಇಷ್ಟೇ ಅಲ್ಲ ಈ ಕಾರುಗಳ ಮೈಂಟೇನೆನ್ಸ್ ಕೂಡ ಸಾಧ್ಯವಿಲ್ಲ. ಇದೇ ಬುಗಾಟಿ ವೆಯ್ರಾನ್ ಕಾರಿನ ಆಯಿಲ್ ಬದಲಾಯಿಸೋ ಹಣದಲ್ಲಿ ನೀವು ಮಹೀಂದ್ರ XUV500 ಕಾರು ಖರೀದಿಸಬಹುದು.

ಬುಗಾಟಿ ವೆಯ್ರಾನ್ ಕಾರಿಗೆ ಎಲ್ಲಾ ಕಾರುಗಳಂತೆ ಪ್ರತಿ ವರ್ಷ ಸರ್ವೀಸ್ ಮಾಡಿಸಬೇಕು. ಕೇವಲ ಇದರ ಆಯಿಲ್ ಬದಲಾವಣೆ ಬೆಲೆ ಬರೋಬ್ಬರಿ 14 ಲಕ್ಷ ರೂಪಾಯಿ. ಈ ಹಣದಲ್ಲಿ ಮಹೀಂದ್ರ  XUV500 ನಿಮ್ಮ ಕೈಸೇರುತ್ತೆ.

ಪ್ರತಿ 4000 ಕೀಮಿಗೆ ಬುಗಾಟಿ ಸಂಸ್ಥೆ ಪ್ರಕಾರ ಕಾರಿನ ಟಯರ್ ಬದಲಾಯಿಸಬೇಕು. ನಾಲ್ಕು ಟಯರ್ ಬದಲಾಯಿಸಲು 19.63 ಲಕ್ಷ ರೂಪಾಯಿ ವೆಚ್ಚವಾಗಲಿದೆ. ಇನ್ನು ಇದರ ಆಲೋಯ್ ವೀಲ್ಸ್ ಬದಲಾಯಿಸಲು ಬರೋಬ್ಬರಿ 78.5 ಲಕ್ಷ ರೂಪಾಯಿ ನೀಡಬೇಕು.

ಆಲೋಯ್ ವೀಲ್ಸ್ ಬದಲಾಯಿಸೋ ಹಣದಲ್ಲಿ  BMW 7 ಸೀರಿಸ್ ಕಾರು ಖರೀದಿಸಬಹುದು. ಇನ್ನು ಚಿಕ್ಕ ಚಿಕ್ಕ ಪಾರ್ಟ್‌ಗಳ ಬೆಲೆ ಕನಿಷ್ಠ 10 ಲಕ್ಷ ರೂಪಾಯಿ. ಈ ಬೆಲೆಯಲ್ಲಿ ಭಾರತದಲ್ಲಿ SUV,ಅಥವಾ ಸೆಡಾನ್ ಕಾರು ಕೊಳ್ಳಬಹುದು.

ಇದನ್ನು ಓದಿ: ನಟ ಶಾರುಖ್ ಬಳಿ ಇದೆಯಾ 20 ಕೋಟಿ ಮೌಲ್ಯದ ಬುಗಾಟಿ ವೆಯ್ರಾನ್ ಕಾರು?

ಇದನ್ನು ಓದಿ: ಹೊಂಡಾ ಏವಿಯೇಟರ್ ಸ್ಕೂಟರ್ ಬಿಡುಗಡೆ-ಬೆಲೆ, ಮೈಲೇಜ್ ಎಷ್ಟು?

PREV
click me!