ವಾಟ್ಸಪ್'ನಲ್ಲಿ ಬಂತು ಒಂದು ಅದ್ಭುತ ಹೊಸ ಆಪ್ಷನ್ : ಇದು ಎಲ್ಲರಿಗೂ ಅನುಕೂಲ

By Suvarna Web DeskFirst Published Mar 4, 2018, 3:26 PM IST
Highlights

68 ನಿಮಿಷ ಅಂದರೆ ಒಟ್ಟು 4096 ಸೆಕೆಂಡ್'ಗಳ ಕಾಲದೊಳಗೆ ನೀವು ವ್ಯಕ್ತಿಗತವಾಗಿ ಅಥವಾ ಗ್ರೂಪಿನಲ್ಲಿ ಕಳಿಸಿದ ಸಂದೇಶವನ್ನು ಅಳಿಸಿಹಾಕಬಹುದು.

ವಿಶ್ವದ ಪ್ರಬಲ ಸಾಮಾಜಿಕ ಮಾಧ್ಯಮವಾಗಿರುವ ವಾಟ್ಸಪ್ ನೂತನ ಆಪ್ಷನ್ ಒಂದನ್ನು ಪರಿಚಯಿಸಿದೆ. ಈ ಮೊದಲು ಒಬ್ಬಬ್ಬರಿಗಾಗಿ ಅಥವಾ ಗ್ರೂಪ್'ನಲ್ಲಿ ನೀವು ಕಳಿಸಿದ ಮೆಸೇಜ್'ಅನ್ನು 7 ನಿಮಿಷದ ಒಳಗಾಗಿ ಡಿಲೀಟ್ ಮಾಡಲು ಅವಕಾಶವಿತ್ತು. ಅಷ್ಟರೊಳಗೆ ಮೆಸೇಜ್ ಡಿಲೀಟ್ ಮಾಡಿದರೆ ಕಳಿಸಿದ ಸಂದೇಶ ಶಾಶ್ವತವಾಗಿ ಅಳಿಸಿಹೋಗುತ್ತಿತ್ತು.

ಶೀಘ್ರದಲ್ಲೇ ಹೆಚ್ಚು ಅವಧಿಯ ನಂತರವೂ ನೀವು ಕಳಿಸಿದ ಮೆಸೇಜ್ ಡೆಲೀಟ್ ಮಾಡುವ ಅವಕಾಶವನ್ನು ವಾಟ್ಸಪ್ ಪರಿಚಯಿಸಲಿದೆ. 68 ನಿಮಿಷ ಅಂದರೆ ಒಟ್ಟು 4096 ಸೆಕೆಂಡ್'ಗಳ ಕಾಲದೊಳಗೆ ನೀವು ವ್ಯಕ್ತಿಗತವಾಗಿ ಅಥವಾ ಗ್ರೂಪಿನಲ್ಲಿ ಕಳಿಸಿದ ಸಂದೇಶವನ್ನು ಅಳಿಸಿಹಾಕಬಹುದು.

ಈ ಹೊಸ ಆಯ್ಕೆ ವಾಟ್ಸಪ್'ನ  2.18.69 ಬೀಟಾ ವರ್ಷನ್'ನಲ್ಲಿ ಲಭ್ಯವಿರಲಿದೆ. ಕಳೆದ ನವೆಂಬರ್'ನಲ್ಲಿ ಮೆಸೇಜ್'ಅನ್ನು ಅಳಿಸಿ ಹಾಕುವ ಆಯ್ಕೆಯನ್ನು ಪರಿಚಯಿಸಲಾಗಿತ್ತು. ನೀವು ಕಳಿಸಿದ ಮೆಸೇಜ್'ಅನ್ನು ಒತ್ತಿ ಹಿಡಿದು ವಾಟ್ಸ'ಪ್'ನಲ್ಲಿರುವ ಡೆಲೀಟ್ ಒತ್ತಿದರೆ 'ಡೆಲೀಟ್ ಫಾರ್ ಮಿ, ಕ್ಯಾನ್ಸ್'ಲ್ ಹಾಗೂ ಡೆಲಿಟ್ ಫಾರ್ ಎವರಿಒನ್' ಆಯ್ಕೆಗಳು ಬರುತ್ತವೆ. ನೀವು  ಡೆಲಿಟ್ ಫಾರ್ ಎವರಿಒನ್ ಒತ್ತಿದರೆ ಶಾಶ್ವತವಾಗಿ ಡಿಲೀಟ್ ಆಗುತ್ತದೆ.

click me!