ಬಂದಿದೆ ಎಸ್ ಕ್ಲಾಸ್ ಮರ್ಸಿಡಿಸ್ ಬೆಂಝ್ : ಇದರಲ್ಲಿದೆ ಬೆರಗಾಗುವ ತಂತ್ರಜ್ಞಾನ

By Suvarna Web DeskFirst Published Mar 2, 2018, 4:20 PM IST
Highlights

ಇದು ತನ್ನಆವೃತ್ತಿಯಲ್ಲಿಯೇ ಅತ್ಯಂತ ಶಕ್ತಿಶಾಲಿಡೀಸಲ್ ಇಂಜಿನ್ ಆಗಿದೆ.ಹೊಸ ಪೀಳಿಗೆಯ ರಡಾರ್-ಆಧರಿತ ಡ್ರೈವಿಂಗ್ ಅಸಿಸ್ಟೆನ್ಸ್ಸಿಸ್ಟಂಗಳಿಂದ ಅಪಘಾತ ಪ್ರಮಾಣಕಡಿಮೆಯಾಗುತ್ತದೆ.

ಭಾರತದ ಅತಿ ದೊಡ್ಡ ಲಕ್ಷುರಿ ಕಾರ್ ಬ್ರ್ಯಾಂಡ್ ಮರ್ಸಿಡಿಸ್ ಬೆಂಝ್, ಇಂದು ತನ್ನ ಎಸ್-ಕ್ಲಾಸ್‌ನ ಉನ್ನತ ಆವೃತ್ತಿಯನ್ನು ಬಿಡುಗಡೆ ಮಾಡಿದೆ. ಹೊಸ ಎಸ್-ಕ್ಲಾಸ್ 350ಡಿ ಪ್ರಥಮ ಬಿಎಸ್6 ಕಾರ್ ಭಾರತಕ್ಕಾಗಿಯೇ ತಯಾರಾದ ವಾಹನ ಎಂಬ ಖ್ಯಾತಿಗೆ ಪಾತ್ರವಾಗಿದೆ.

ವಿಶ್ವ ದರ್ಜೆಯ ಅತ್ಯಾಧುನಿಕವಾದ ಡೀಸಲ್ ಇಂಜಿನ್, ಹೊಸ ಎಸ್ 350ಡಿ'ನಲ್ಲಿ ಬಳಸಿರುವ ತಾಂತ್ರಿಕ ಕ್ರಮಗಳಿಂದಾಗಿ ವಾಯುಮಾಲಿನ್ಯದ ಪ್ರಮಾಣ ತೀರಾ ಕಡಿಮೆ ಇದೆ. ಇದು ತನ್ನ ಆವೃತ್ತಿಯಲ್ಲಿಯೇ ಅತ್ಯಂತ ಶಕ್ತಿಶಾಲಿ ಡೀಸಲ್ ಇಂಜಿನ್ ಆಗಿದೆ. ಹೊಸ ಪೀಳಿಗೆಯ ರಡಾರ್ -ಆಧರಿತ ಡ್ರೈವಿಂಗ್ ಅಸಿಸ್ಟೆನ್ಸ್ ಸಿಸ್ಟಂಗಳಿಂದ ಅಪಘಾತ ಪ್ರಮಾಣ ಕಡಿಮೆಯಾಗುತ್ತದೆ. ಹಿಂದಿನ ಸೀಟ್‌ನ ಕಂಫರ್ಟ್ ಪ್ಯಾಕೇಜ್ ಮತ್ತು ಉನ್ನತ ಐಷಾರಾಮ, ತಂತ್ರಜ್ಞಾನ ಮತ್ತು ಮನರಂಜನಾ ವ್ಯವಸ್ಥೆ ಪ್ಯಾಕೇಜ್‌ಗಳು ಸೇರಿ ಒಳ್ಳೆಯ ಐಶಾರಾಮಿ ಅನುಭವವನ್ನು ಅಧಿಕ ಮಾಡಿವೆ.

ಎಸ್ 350ಡಿ ಇಂಜಿನ್ ಎಸ್ ೩೫೦ಡಿ ನಲ್ಲಿ ಬಳಸಿರುವ 656 ಇಂಜಿನ್ ಮರ್ಸಿಡಿಸ್ ಬೆಂಝ್ ಇಂಡಿಯಾ ತಯಾರಿಸಿರುವ ಅತ್ಯಂತ ಶಕ್ತಿಶಾಲಿ ಪ್ರಯಾಣಿಕರ ಕಾರಿನ ಇಂಜಿನ್. ಇನ್‌ಲೈನ್-ಆರು ಸಿಲಿಂಡರುಗಳ ಮೋಟರ್ 210 ಕಿಲೋವ್ಯಾಟ್ ಶಕ್ತಿ ಒದಗಿಸುತ್ತದೆ.

click me!