ಫೇಸ್‌ಬುಕ್‌ನಲ್ಲಿ ಕದ್ದ ಮಾಹಿತಿ ಗೊತ್ತಾಗ್ಬೇಕಾ?: ಇಲ್ಲಿ ಕ್ಲಿಕ್ ಮಾಡಿ!

By Web DeskFirst Published Oct 14, 2018, 1:48 PM IST
Highlights

ನಿಮ್ಮ ಫೇಸ್‌ಬುಕ್‌ ಖಾತೆ ಹ್ಯಾಕ್ ಆಗಿದೆಯಾ?! ಯಾವೆಲ್ಲಾ ಮಾಹಿತಿ ಕದಿಯಲಾಗಿದೆ ಗೊತ್ತಾಗ್ಬೇಕಾ?! ಫೇಸ್‌ಬುಕ್‌ ಬಿಡುಗಡೆ ಮಾಡಿದೆ ಹೊಸ ವೆಬ್‌ಸೈಟ್! ಕದ್ದ ಮಾಹಿತಿ, ಖಾತೆ ಸುರಕ್ಷತೆ ಕುರಿತು ಸಿಗಲಿದೆ ಮಾಹಿತಿ

ನ್ಯೂಯಾರ್ಕ್(ಅ.14): ಇತ್ತೀಚೆಗಿನ ದಿನಗಳಲ್ಲಿ ಹ್ಯಾಕರ್‌ಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇತ್ತೀಚೆಗೆ ನಡೆದ ಹ್ಯಾಕರ್‌ಗಳ ದಾಳಿ ವೇಳೆ 2.9 ಕೋಟಿ ಜನರ ಮಾಹಿತಿಯನ್ನು ಕದಿಯಲಾಗಿದೆ ಎಂದು ಫೇಸ್‌ಬುಕ್‌ ಖಚಿತಪಡಿಸಿದೆ. 

ಈ 2.9 ಕೋಟಿ ಫೇಸ್‌ಬುಕ್‌ ಬಳಕೆದಾರರ ಪೈಕಿ, 1.5 ಕೋಟಿ ಫೇಸ್‌ಬುಕ್‌ ಪ್ರೊಫೈಲ್‌ನಲ್ಲಿ ಲಭ್ಯವಾಗುವ ಮೊಬೈಲ್‌ ಸಂಖ್ಯೆ, ಇ-ಮೇಲ್‌ ಅಥವಾ ಎರಡೂ ಮತ್ತು ಹೆಸರುಗಳನ್ನು ಹ್ಯಾಕರ್‌ಗಳು ಪಡೆದಿದ್ದಾರೆ. 

ಇನ್ನು ಹ್ಯಾಕರ್‌ಗಳಿಂದ ಹೈರಾಣಾಗಿರುವ ಫೇಸ್‌ಬುಕ್‌, ಮಾಹಿತಿಗೆ ಕನ್ನ ಹಾಕುವುದನ್ನು ತಡೆಗಟ್ಟಲು ಮುಂದಾಗಿದೆ. ಇದಕ್ಕಾಗಿ ಹೊಸ ವೆಬ್‌ಸೈಟ್ ಬಿಡುಗಡೆ ಮಾಡಿರುವ ಫೇಸ್‌ಬುಕ್‌, ಇದರ ಮೂಲಕ ಗ್ರಾಹಕ ತನ್ನ ಅಕೌಂಟ್ ಸುರಕ್ಷತೆಯ ಕುರಿತು ಮಾಹಿತಿ ಪಡೆಯಬಹುದು ಎಂದು ತಿಳಿಸಿದೆ.

ವೆಬ್‌ಸೈಟ್ ನಲ್ಲಿ ಪ್ರತಿಯೊಬ್ಬರೂ ತಮ್ಮ ಅಕೌಂಟ್ ಸುರಕ್ಷತೆ ಕುರಿತು ಮಾಹಿತಿ ಪಡೆಯಬಹುದು ಎಂದು ಫೇಸ್‌ಬುಕ್‌ ತಿಳಿಸಿದೆ. ಅಲ್ಲದೇ ನಿಮ್ಮ ಖಾತೆಯಿಂದ ಯಾವೆಲ್ಲಾ ಮಾಹಿತಿಯನ್ನು ಕದಿಯಲಾಗಿದೆ ಎಂಬುದರ ಕುರಿತೂ ಇದರಲ್ಲಿ ಮಾಹಿತಿ ಪಡೆಯಬಹುದಾಗಿದೆ.

click me!