ಹೆಣ್ಮಕ್ಕಳೇ ಎಚ್ಚರ ಎಚ್ಚರ: ನಿಮ್ಮ ಫೋಟೋದ ಮೇಲಿನ ಬಟ್ಟೆಗಳನ್ನು ಕಳಚಿ ಶೇರ್​ ಮಾಡ್ತಿದೆ ಈ AI ಟೂಲ್!

Published : Jan 01, 2026, 04:19 PM IST
Grok AI Tool

ಸಾರಾಂಶ

ಕೃತಕ ಬುದ್ಧಿಮತ್ತೆ (AI) ಟೂಲ್‌ಗಳು, ವಿಶೇಷವಾಗಿ ಎಲಾನ್ ಮಸ್ಕ್ ಅವರ ಗ್ರಾಕ್, ಈಗ ದುರ್ಬಳಕೆಯಾಗುತ್ತಿವೆ. ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾದ ಹೆಣ್ಣುಮಕ್ಕಳ ಫೋಟೋಗಳನ್ನು ವಿವಸ್ತ್ರಗೊಳಿಸಿ, ನಗ್ನ ಚಿತ್ರಗಳನ್ನು ರಚಿಸಲು ಈ ತಂತ್ರಜ್ಞಾನವನ್ನು ಬಳಸಲಾಗುತ್ತಿದೆ. 

ಈಗ ಎಲ್ಲೆಲ್ಲೂ ಕೃತಕ ಬುದ್ಧಿಮತ್ತೆ (AI) ಮಾತು. ಬಹುತೇಕ ಮಂದಿ ಇದರ ಬಳಕೆ ಮಾಡುತ್ತಿದ್ದಾರೆ. ಅಮೆರಿಕದಲ್ಲಿನ ಈ ಟೂಲ್​ಗಳನ್ನು ಅಮೆರಿಕದ ಪ್ರಜೆಗಳು ದುಡ್ಡು ಕೊಟ್ಟು ಖರೀದಿ ಮಾಡಿದರೆ, ಬುದ್ಧಿವಂತ ಅಮೆರಿಕ ಭಾರತದಲ್ಲಿ ಇವುಗಳನ್ನು ಫ್ರೀ ಕೊಟ್ಟಿದೆ. ಉಚಿತ ಸಿಕ್ಕರೆ ಏನನ್ನೂ ಬಿಡದ ಬಹುತೇಕ ಭಾರತೀಯರು ಈ ಎಐ ಟೂಲ್​ ಬಳಸಿ ತಮ್ಮ ಎಲ್ಲಾ ವೈಯಕ್ತಿಯ ಮಾಹಿತಿಗಳನ್ನು ಅಮೆರಿಕದ ಕೈಗೆ ನೀಡುತ್ತಿದ್ದಾರೆ! ಆದರೆ ಇದೀಗ ಆತಂಕಕಾರಿ ಎನ್ನುವ ವಿಷಯವೊಂದು ಹೊರಕ್ಕೆ ಬಂದಿದೆ. ಅದಕ್ಕೆ ಕಾರಣ, ಹೆಣ್ಣುಮಕ್ಕಳು ಹಾಕುವ ಫೋಟೋಗಳ ಮೇಲಿನ ಬಟ್ಟೆಗಳನ್ನು ಕಳಚಿ ವಿವಸ್ತ್ರಗೊಳಿಸಿ ಆ ಫೋಟೋಗಳನ್ನು ಕೇಳಿದವರಿಗೆ ರವಾನಿಸಲಾಗುತ್ತಿದೆ ಎನ್ನುವುದು!

ವಿವಸ್ತ್ರಗೊಳಿಸಿ ನೀಡತ್ತೆ!

ಹೌದು. ಇದಾಗಲೇ ಬಾಲಿವುಡ್​ನ ಕೆಲವು ನಟಿಯರು ಇಂಥ ಕೆಟ್ಟ ಸ್ಥಿತಿಯನ್ನು ಅನುಸರಿಸಿದ್ದಾರೆ. ಅಷ್ಟಕ್ಕೂ ಈ ಎಐ ಟೂಲ್​ 2025ರಲ್ಲಿ ಅತಿಹೆಚ್ಚು ಸರ್ಚ್​ಗಳಲ್ಲಿ ಒಂದಾಗಿರುವ ಗ್ರಾಕ್ (Grok AI Tool). ಈ ಎಐ ಟೂಲ್​ ಬಳಸಿ ನಿಮ್ಮ ಫೋಟೋಗಳನ್ನು ನಗ್ನ ಮಾಡುತ್ತಿದೆ ಈ ಎಐ ಟೂಲ್​. ಸೋಷಿಯಲ್​ ಮೀಡಿಯಾದಲ್ಲಿ ನೀವು ಹಾಕುವ ಫೋಟೋಗಳನ್ನು ತೆಗೆದುಕೊಂಡು ಯಾರಾದರೂ, ಆ ಫೋಟೋ ವಿವಸ್ತ್ರಗೊಳಿಸುವಂತೆ ಈ ಎಐ ಟೂಲ್​​ಗೆ ಹೇಳಿದರೆ, ಅದು ಅವರಿಗೆ ಮಾಡಿಕೊಡುತ್ತಿದೆ. ಆದ್ದರಿಂದ ಸೋಷಿಯಲ್​ ಮೀಡಿಯಾಗಳನ್ನು ಅತಿಯಾಗಿ ಬಳಸಲು ಹೆಣ್ಣುಮಕ್ಕಳಿಗೆ ಇದು ವಾರ್ನಿಂಗ್​ ಆಗಿದೆ.

ಏನಿದು ಎಐ?

ಎಲಾನ್ ಮಸ್ಕ್ ತಮ್ಮ ಹೊಸ AI ಟೂಲ್ ಗ್ರಾಕ್ ಎಲ್ಲರಿಗೂ ಉಚಿತವಾಗಿ ನೀಡಿದ್ದಾರೆ. ಈ ಟೂಲ್ ಈ ಹಿಂದೆ ಪೇಯ್ಡ್ ಸಬ್ಸ್ಕ್ರೈಬರ್‌ಗಳಿಗೆ ಮಾತ್ರ ಲಭ್ಯವಿತ್ತು. ಮೊದಲು ಪಾವತಿ ಮಾಡಿ ಈ ಟೂಲ್ ಬಳಕೆ ಮಾಡಬೇಕಿತ್ತು. ಆದರೆ ಇದೀಗ ಸಂಪೂರ್ಣ ಉಚಿತವಾಗಿ ನೀಡಲಾಗಿದೆ. (ಅದಕ್ಕೆ ಏನು ಕಾರಣ ಎನ್ನುವುದು ಈ ಮೇಲೆ ತಿಳಿಸಲಾಗಿದೆ). ಈ ಟೂಲ್ ವಿವಿಧ AI ಮಾದರಿಗಳನ್ನು ಸಂಯೋಜಿಸುತ್ತದೆ. ಉತ್ತಮ ಗುಣಮಟ್ಟದ ಚಿತ್ರಗಳನ್ನು ರಚಿಸುವುದು, 6-ಸೆಕೆಂಡ್ ವೀಡಿಯೊಗಳನ್ನು ರಚಿಸುವುದು. ಅತೀ ವೇಗದಲ್ಲಿ ಹಾಗು ಸುಲಭದಲ್ಲಿ ಪೋಟೋ ಹಾಗೂ ವಿಡಿಯೋಗಳನ್ನು ಗ್ರಾಗ್ ಇಮ್ಯಾಜಿನ್ ಟೂಲ್ ನೀಡಲಿದೆ.

ಸರಿಯಾಗಿದ್ದರೆ...

ಇದನ್ನು ಸರಿಯಾಗಿ ಉಪಯೋಗಿಸಿದರೆ, ಹಲವು ವಿಷಯಗಳ ಬಗ್ಗೆ ಇದು ವಿವರಣೆ ನೀಡುತ್ತದೆ. ಯಾವುದೇ ವಿಷಯಗಳ ಬಗ್ಗೆ ಮಾಹಿತಿಗಳನ್ನೂ ನೀಡುತ್ತದೆ. ಆದರೆ ಜನರು ಅದರ ಮೂಲ ಉದ್ದೇಶವನ್ನೇ ಮರೆತು ಇಂಥ ಕೃತ್ಯಕ್ಕೆ ಕೈಹಾಕುತ್ತಿದ್ದಾರೆ. ಎಐ ಎನ್ನುವುದು ಇದೀಗ ಬರಿ ಫೋಟೋ ಹಾಕುವುದು, ವಿಡಿಯೋ ಮಾಡುವುದು, ತಮ್ಮನ್ನು ತಾವು ಸುಂದರ ಎಂದು ಬಿಂಬಿಸಿಕೊಳ್ಳಲು ತಮ್ಮ ಫೋಟೋ ಕೊಟ್ಟು ಅದನ್ನು ಹಾಗೆ ಮಾಡು, ಹೀಗೆ ಮಾಡು ಎನ್ನುವುದು... ಇಂಥವುಗಳಿಂದ ಇಂದು ಪರಿಸ್ಥಿತಿ ವಿಕೋಪಕ್ಕೆ ಹೋಗಿದ್ದು, ಇಂಥ ಅವಾಂತರಗಳನ್ನು ಸೃಷ್ಟಿಸುತ್ತಿದೆ.

 

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

Read more Articles on
click me!

Recommended Stories

India’s top searches of 2025: ಭಾರತೀಯರು ಸದಾ ಯೋಚಿಸೋದು ಏನನ್ನು? ಗೂಗಲ್​ನಿಂದ A to Z ಬಹಿರಂಗ!
EMI ಇಲ್ಲದೆ ಐಫೋನ್ ಖರೀದಿಸುವುದು ಹೇಗೆ? ಈ ಟ್ರಿಕ್ಸ್‌ ತಿಳ್ಕೊಳ್ಳಿ!