ನಂ 1 ಮೊಬೈಲ್ ಕಂಪನಿ ರೆಡ್'ಮಿ ವಿರುದ್ಧ ಕಾಪಿರೈಟ್ ಕೇಸು ದಾಖಲು

By Suvarna Web DeskFirst Published Jan 27, 2018, 6:23 PM IST
Highlights

ಚೀನಾ ದೇಶದ ಕಂಪನಿ ರೆಡ್'ಮಿ ವಿರುದ್ಧ ಅದೇ ದೇಶದ ಮತ್ತೊಂದು ಕಂಪನಿ ಕೂಲ್'ಪ್ಯಾಡ್ ಕಾಪಿರೈಟ್ ಉಲ್ಲಂಘನೆ ಕೇಸು ದಾಖಲಿಸಿ ಪರಿಹಾರ ನೀಡುವಂತೆ ಬೇಡಿಕೆಯೊಡ್ಡಿದೆ.

ಭಾರತ ಹಾಗೂ ಚೀನಾದಲ್ಲಿ ನಂ.1 ಸ್ಪಾರ್ಟ್ ಫೋನ್ ಮೊಬೈಲ್ ಕಂಪನಿಯಾಗಿರುವ ರೆಡ್ ಮಿ ಕಂಪನಿ ವಿರುದ್ಧ ಕಾಪಿರೈಟ್ ಉಲ್ಲಂಘನೆ ಕೇಸು ದಾಖಲಾಗಿದೆ.

ಚೀನಾ ದೇಶದ ಕಂಪನಿ ರೆಡ್'ಮಿ ವಿರುದ್ಧ ಅದೇ ದೇಶದ ಮತ್ತೊಂದು ಕಂಪನಿ ಕೂಲ್'ಪ್ಯಾಡ್ ಕಾಪಿರೈಟ್ ಉಲ್ಲಂಘನೆ ಕೇಸು ದಾಖಲಿಸಿ ಪರಿಹಾರ ನೀಡುವಂತೆ ಬೇಡಿಕೆಯೊಡ್ಡಿದೆ. ಎಲ್ಲ ಶಿಯೋಮಿ ಉತ್ಪನ್ನಗಳು ಕೂಲ್ ಪ್ಯಾಡ್ ಉತ್ಪನ್ನಗಳನ್ನು ಬಳಸಿ ಅಭಿವೃದ್ಧಿ ಪಡಿಸಲಾಗಿದೆ.

ತಮ್ಮ ಸಂಸ್ಥೆಯು ಹೊಂದಿರುವ ಹಲವು ಪೆಟೆಂಟ್'ಗಳನ್ನು ಬಳಸಿ ಕ್ಸಿಯೋಮಿ ಸಂಸ್ಥೆ ಉತ್ಪನ್ನಗಳನ್ನು ತಯಾರಿಸುವುದರೊಂದಿಗೆ ಅನಧಿಕೃತವಾಗಿ ಮಾರಾಟ ಮಾಡುತ್ತಿದೆ.ಆಪ್ ಐಕಾನ್ ಮ್ಯಾನೇಜ್'ಮೆಂಟ್, ನೋಟಿಫಿಕೇಷನ್'ಗಳು ಹಾಗೂ ಸಿಸ್ಟಮ್ ಯುಐಗಳು ತಮ್ಮ ಸಂಸ್ಥೆ ಅಭಿವೃದ್ಧಿಪಡಿಸಿ ಪೇಟೆಂಟ್ ಹೊಂದಿದೆ'. ತಮಗಾಗಿರುವ ನಷ್ಟವನ್ನು ಶಿಯೋಮಿ ತುಂಬಿಕೊಡಬೇಕೆಂದು ನ್ಯಾಯಾಲಯದಲ್ಲಿ ಅರ್ಜಿ ದಾಖಲಿಸಿದೆ.

 

click me!