ಬಹುನಿರೀಕ್ಷಿತ ವಾಟ್ಸಾಪ್ ಬ್ಯುಸಿನೆಸ್ ಆ್ಯಪ್ ಬಿಡುಗಡೆ

By Suvarna Web Desk  |  First Published Jan 25, 2018, 7:21 PM IST

ವಿಶ್ವಾದ್ಯಂತ ಸಣ್ಣ ಉದ್ಯಮಗಳಿಗೆ ನೆರವಾಗಲು ಬಹುನಿರೀಕ್ಷಿತ  ವಾಟ್ಸಪ್ ಬಿಸಿನೆಸ್ ಆ್ಯಪ್ ಅನ್ನು ವಾಟ್ಸಪ್ ಕೊನೆಗೂ ಬಿಡುಗಡೆ  ಮಾಡಿದೆ.


ಬೆಂಗಳೂರು (ಜ.25): ವಿಶ್ವಾದ್ಯಂತ ಸಣ್ಣ ಉದ್ಯಮಗಳಿಗೆ ನೆರವಾಗಲು ಬಹುನಿರೀಕ್ಷಿತ  ವಾಟ್ಸಪ್ ಬಿಸಿನೆಸ್ ಆ್ಯಪ್ ಅನ್ನು ವಾಟ್ಸಪ್ ಕೊನೆಗೂ ಬಿಡುಗಡೆ  ಮಾಡಿದೆ.

ವೈಯಕ್ತಿಕ ಹಾಗೂ ವ್ಯವಹಾರ ಸಂಬಂಧಿ ಸಂದೇಶಗಳನ್ನು ಪ್ರತ್ಯೇಕಿಸುವ ಉದ್ದೇಶದಿಂದ ಆ್ಯಪ್‌ಗೆ ಜನ್ಮ ನೀಡಲಾಗಿದೆ. ಸಣ್ಣ ಉದ್ದಿಮೆದಾರರು ತಮ್ಮ ಗ್ರಾಹಕರು  ಹಾಗೂ ವ್ಯವಹಾರ ಪಾಲುದಾರರನ್ನು ಈ ಆ್ಯಪ್ ಮೂಲಕ ತಲುಪಬಹುದು. ನೂತನ ಆ್ಯಪ್ ಬಗ್ಗೆ ತನ್ನ ಬ್ಲಾಗಿನಲ್ಲಿ ಮಾಹಿತಿ ಹಂಚಿಕೊಂಡಿರುವ ವಾಟ್ಸಪ್  ‘ಇದರಲ್ಲಿ ಬಿಸಿನೆಸ್ ಪ್ರೊಫೈಲ್, ಮೆಸೇಜಿಂಗ್ ಟೂಲ್, ಮೆಸೇಜಿಂಗ್ ಸ್ಟ್ಯಾಟಿಸ್ಟಿಕ್ಸ್, ವಾಟ್ಸಪ್ ವೆಬ್, ಅಕೌಂಟ್ ಟೈಪ್ ಮತ್ತಿತರ ಫೀಚರ್‌ಗಳನ್ನು ಪರಿಚಯಿಸಲಾಗಿದೆ’ ಎಂದು ಹೇಳಿಕೊಂಡಿದೆ.

Tap to resize

Latest Videos

ಬಿಸಿನೆಸ್ ಪ್ರೊಫೈಲ್ ಮೂಲಕ ಉದ್ದಿಮೆಯ ವಿಳಾಸ, ಜಾಲತಾಣ ವಿಳಾಸ, ಇಮೇಲ್ ಮಾಹಿತಿ ಮತ್ತಿತರ ಅಂಶ ಪ್ರಕಟಿಸಬಹುದು. ಮೆಸೇಜಿಂಗ್ ಸ್ಟಾಟಿಸ್ಟಿಕ್ಸ್ ಫೀಚರ್ ಮೂಲಕ ತಾವು ಸಂಪರ್ಕಿಸಿದ ಗ್ರಾಹಕರ ಅಂಕಿ ಅಂಶ ಲೆಕ್ಕಾಚಾರ ಇಡಬಹುದು. ಅಕೌಂಟ್ ಟೈಪ್ ಮೂಲಕ ಗ್ರಾಹಕರು ತಮ್ಮನ್ನು ತಾವು ಉದ್ದಿಮೆ ಮಾಲೀಕರೆಂದು ಪರಿಚಯಿಸಬಹುದು. ಈಗಾಗಲೇ ಇಂಡೋನೇಶಿಯಾ, ಇಟಲಿ, ಮೆಕ್ಸಿಕೋ, ಯುಕೆ ಮತ್ತು ಅಮೆರಿಕಾದಲ್ಲಿ ಈ ಆಪ್ ಲಭ್ಯವಿದ್ದು, ಮುಂಬರುವ ವಾರಗಳಲ್ಲಿ ಇತರ ದೇಶಗಳಲ್ಲೂ ಗೂಗಲ್ ಪ್ಲೆ ಸ್ಟೋರ್‌ನಲ್ಲಿ ಆ್ಯಪ್ ಲಭ್ಯವಾಗಲಿದೆ.

 

click me!