
ಬೆಂಗಳೂರು (ಜು. 06): ಅಗ್ಗದ ಸ್ಮಾರ್ಟ್‌ಫೋನ್‌ಗಳ ಪೈಕಿ ಒಂದಾದ Xiaomiಯ Redmi 7A ಇನ್ನು ಕೆಲವೇ ದಿನಗಳಲ್ಲಿ ಮೊಬೈಲ್ ಪ್ರಿಯರ ಕೈ ಸೇರಲಿದೆ.
HD+ ಡಿಸ್ಪ್ಲೇ, ಒಕ್ಟಾಕೋರ್ ಕ್ವಾಲ್‌ಕಾಂ ಸ್ನ್ಯಾಪ್‌ಡ್ರಾಗನ್ 439 ಚಿಪ್ ಸೆಟ್, ಮತ್ತು 3GB RAM- 32GB ಸ್ಟೋರೆಜ್ ಹೊಂದಿರುವ ಈ ಹೊಸ ಸ್ಮಾರ್ಟ್‌ಫೋನ್ ಜು.11 ಮತ್ತು 12ರಂದು ಫ್ಲಿಪ್‌ಕಾರ್ಟ್‌ನಲ್ಲಿ ಖರೀದಿಗೆ ಲಭ್ಯವಾಗಲಿದೆ. ಜೊತೆಗೆ mi.com ಹಾಗೂ mi ಸ್ಟೋರ್‌ಗಳಲ್ಲೂ ಇದನ್ನು ಖರೀದಿಸಬಹುದು.
ಇದನ್ನೂ ಓದಿ | Xiaomiಯಿಂದ 2 ಹೊಸ ಫೋನ್‌ಗಳು ಬಿಡುಗಡೆ
ಕಡಿಮೆ ದರದ Samsung Galaxy M10 ಮತ್ತು Nokia 2.2 ಫೋನ್‌ಗಳು ಇತ್ತೀಚೆಗೆ ಭಾರತದಲ್ಲಿ ಬಿಡುಗಡೆಯಾಗಿದ್ದು, ಅವುಗಳಿಗೆ ಪೈಪೋಟಿ ನೀಡುವಂತಿದೆ Xiaomiಯ ಈ ಹೊಸ ಫೋನ್.
5.45 ಇಂಚು ಪರದೆ, AI ಫೇಸ್ ಅನ್‌ಲಾಕ್, 12 ಮೆಗಾಪಿಕ್ಸೆಲ್ ಕ್ಯಾಮೆರಾ, 5 ಮೆಗಾಪಿಕ್ಸೆಲ್ ಸೆಲ್ಫೀ ಕ್ಯಾಮೆರಾ, ಮತ್ತು 4000 mAh ಬ್ಯಾಟರಿ ಈ ಫೋನ್‌ನ ಇನ್ನಿತರ ಪ್ರಮುಖ ಫೀಚರ್‌ಗಳು.
2 ವರ್ಷ ವ್ಯಾರಂಟಿ ಹೊಂದಿರುವ ಈ ಫೋನ್ ಬೆಲೆ ₹5999 ಆಗಿದೆ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.