ಟೆಲಿಕಾಂ ಆಪರೇಟರ್‌ಗಳಾದ ಏರ್‌ಟೆಲ್, ಜಿಯೋ ಮತ್ತು ವೊಡಾಫೋನ್ ಐಡಿಯಾ ರೂ 666 ನಲ್ಲಿ ಮಧ್ಯಮ ಶ್ರೇಣಿಯ ಪ್ರಿಪೇಯ್ಡ್ ಯೋಜನೆಯನ್ನು ನೀಡುತ್ತಿವೆ. 666 ರೂಗಳಲ್ಲಿ ಹೊಸ ಪ್ರಿಪೇಯ್ಡ್ ಯೋಜನೆಯಲ್ಲಿ ಯಾವುದು ಬೆಸ್ಟ್? ಇಲ್ಲಿದೆ ಡಿಟೇಲ್ಸ್
Tech Desk: ಟೆಲಿಕಾಂ ಆಪರೇಟರ್‌ಗಳಾದ ಏರ್‌ಟೆಲ್, ಜಿಯೋ ಮತ್ತು ವೊಡಾಫೋನ್ ಐಡಿಯಾ ತಮ್ಮ ಪ್ರಿಪೇಡ್ ಪ್ಯಾಕ್‌ಗಳ ದರವನ್ನು ಹೆಚ್ಚಿಸಿವೆ. ಈ ಹೊಸ ಪ್ಯಾಕ್‌ಗಳು ಜಾರಿಗೆ ತಂದಾಗಿನಿಂದ ಗ್ರಾಹಕರು ಮೊದಲು ನೀಡಲಾಗಿದ್ದ ಯೋಜನೆಗಳ ಪ್ರಯೋಜನಗಳಿಗೆ ಹೊಂದಿಕೆಯಾಗುವ ಪ್ಯಾಕ್‌ಗಳನ್ನು ಹುಡುಕುತ್ತಿದ್ದಾರೆ. ಪ್ರಿಪೇಯ್ಡ್ ಯೋಜನೆಗಳು ದುಬಾರಿಯಾಗುವುದು ಮಾತ್ರವಲ್ಲದೆ, ಈ ಯೋಜನೆಗಳ ಸ್ಟ್ರೀಮಿಂಗ್ ಪ್ರಯೋಜನಗಳನ್ನು (streaming benefits) ಸಹ ದೊಡ್ಡ ಪ್ರಮಾಣದಲ್ಲಿ ಕಡಿಮೆ ಮಾಡಲಾಗಿದೆ.
ಈಗ, ಏರ್‌ಟೆಲ್, ಜಿಯೋ ಮತ್ತು ವೊಡಾಫೋನ್ ಐಡಿಯಾ ರೂ 666 ನಲ್ಲಿ ಮಧ್ಯಮ ಶ್ರೇಣಿಯ ಪ್ರಿಪೇಯ್ಡ್ ಯೋಜನೆಯನ್ನು ನೀಡುತ್ತಿವೆ. ಏರ್‌ಟೆಲ್ ಮತ್ತು ವಿ ತಮ್ಮ ರೂ 666 ಪ್ರಿಪೇಯ್ಡ್ ಯೋಜನೆಗಳೊಂದಿಗೆ 77 ದಿನಗಳ ವ್ಯಾಲಿಡಿಟಿ ನೀಡಿದರೆ, ಜಿಯೋ ತನ್ನ ಯೋಜನೆಯೊಂದಿಗೆ 84 ದಿನಗಳ ವ್ಯಾಲಿಡಿಟಿಯನ್ನು ನೀಡುತ್ತದೆ. ಡೇಟಾ ಮತ್ತು ಕರೆ ಪ್ರಯೋಜನಗಳ ಜೊತೆಗೆ ಎರಡು ತಿಂಗಳ ವ್ಯಾಲಿಡಿಟಿಯೊಂದಿಗೆ ಪ್ಲಾನ್‌ಗಳನ್ನು ಹುಡುಕುತ್ತಿರುವ ಬಳಕೆದಾರರಿಗೆ ಈ ಯೋಜನೆಗಳು ಸೂಕ್ತವಾಗಿವೆ.
ಕಳೆದ ವಾರ, ವಿ (Vi) ರೂ. 700 ಕ್ಕಿಂತ ಕಡಿಮೆ ಬೆಲೆಯ ನಾಲ್ಕು ಹೊಸ ಪ್ರಿಪೇಯ್ಡ್ ಯೋಜನೆಗಳನ್ನು ಪರಿಚಯಿಸಿತು. ಈ ಪ್ರಿಪೇಯ್ಡ್ ಯೋಜನೆಗಳು ರೂ. 155, ರೂ. 239, ರೂ. 666 ಮತ್ತು ರೂ. 699. ಈ ಯೋಜನೆಗಳು ಎಲ್ಲಾ ಟೆಲಿಕಾಂ ವಲಯಗಳಲ್ಲಿ ಲಭ್ಯವಿವೆ ಮತ್ತು Vi's ವೆಬ್‌ಸೈಟ್ ಹಾಗೂ ಅಪ್ಲಿಕೇಶನ್‌ನಲ್ಲಿ ರಿಚಾರ್ಜ ಮಾಡಬಹದು.
Vodafone Idea vs Airtel vs Jio Rs 666 prepaid plan
Vodafone Idea Rs 666 ಪ್ರಿಪೇಯ್ಡ್ ಯೋಜನೆ: ಈ ಪ್ರಿಪೇಯ್ಡ್ ಯೋಜನೆಯು ಅನಿಯಮಿತ ಧ್ವನಿ ಕರೆಗಳು, 1.5GB ದೈನಂದಿನ ಡೇಟಾ ಮತ್ತು ದಿನಕ್ಕೆ 100 SMS ನೀಡುತ್ತದೆ. ಇದು 77 ದಿನಗಳವರೆಗೆ Vi ಚಲನಚಿತ್ರಗಳು ಮತ್ತು ಟಿವಿಗೆ ಆ್ಯಕ್ಸಸ್ ನೊಂದಿಗೆ ಬರುತ್ತದೆ. ಈ ಯೋಜನೆಯ ಹೆಚ್ಚುವರಿ ಪ್ರಯೋಜನಗಳು ಬಿಂಜ್ ಆಲ್ ನೈಟ್ ಬೆನಿಫಿಟ್‌ಗಳು, ವೀಕೆಂಡ್ ಡೇಟಾ ರೋಲ್‌ಓವರ್ ಪ್ರಯೋಜನಗಳು ಮತ್ತು ಡೇಟಾ ಡಿಲೈಟ್ಸ್ ಆಫರ್‌ಗೆ ಆ್ಯಕ್ಸಸ್ ಒಳಗೊಂಡಿವೆ.
Airtel Rs 666 ಪ್ರಿಪೇಯ್ಡ್ ಯೋಜನೆ: ಏರ್‌ಟೆಲ್ ಈಗ ಇದೇ ರೀತಿಯ ಪ್ರಿಪೇಯ್ಡ್ ಯೋಜನೆಯನ್ನು ಪರಿಚಯಿಸಿದೆ. ಇದು ದಿನಕ್ಕೆ 1.5GB ಡೇಟಾ, ಅನಿಯಮಿತ ಕರೆಗಳು ಮತ್ತು ದಿನಕ್ಕೆ 100 SMS ಅನ್ನು 77 ದಿನಗಳ ವ್ಯಾಲಿಡಿಟಿಗೆ ನೀಡುತ್ತದೆ. ಈ ಯೋಜನೆಯ ಹೆಚ್ಚುವರಿ ಪ್ರಯೋಜನಗಳು ಪ್ರೈಮ್ ವೀಡಿಯೊ ಮೊಬೈಲ್ ಆವೃತ್ತಿ, ಅಪೊಲೊ 24|7 ಸರ್ಕಲ್‌ಗೆ ಆ್ಯಕ್ಸಸ್ , ಶಾ ಅಕಾಡೆಮಿಯೊಂದಿಗೆ (Shaw Academy) ಉಚಿತ ಆನ್‌ಲೈನ್ ಕೋರ್ಸ್‌ಗಳು, ಫಾಸ್ಟ್ಯಾಗ್‌ನಲ್ಲಿ ರೂ 100 ಕ್ಯಾಶ್‌ಬ್ಯಾಕ್, ಉಚಿತ ಹಲೋ ಟ್ಯೂನ್‌ಗಳು ಮತ್ತು ವಿಂಕ್ ಮ್ಯೂಸಿಕ್.
Jio Rs 666 ಪ್ರಿಪೇಯ್ಡ್ ಯೋಜನೆ: ಜಿಯೋ ರೂ 666 ಪ್ರಿಪೇಯ್ಡ್ ಯೋಜನೆಯನ್ನು ನೀಡುತ್ತದೆ. ಇದು ಅನಿಯಮಿತ ಕರೆಗಳೊಂದಿಗೆ 1.5GB ದೈನಂದಿನ ಡೇಟಾವನ್ನು ಮತ್ತು ದಿನಕ್ಕೆ 100 SMS ನೀಡುತ್ತದೆ. ಯೋಜನೆಯು ಜಿಯೋ ಅಪ್ಲಿಕೇಶನ್‌ಗಳಿಗೆ ಆ್ಯಕ್ಸಸ್ ನೀಡುತ್ತದೆ. ಯೋಜನೆಯು 84 ದಿನಗಳ ವ್ಯಾಲಿಡಿಟಿ ಹೊಂದಿದೆ.
Plans under Rs 700 with 56 days validity
Vodafone Idea ರೂ 699 ನಲ್ಲಿ ಪ್ರಿಪೇಯ್ಡ್ ಯೋಜನೆಯನ್ನು ನೀಡುತ್ತಿದೆ. ಈ ಯೋಜನೆ 3GB ದೈನಂದಿನ ಡೇಟಾವನ್ನು ನೀಡುತ್ತದೆ ಮತ್ತು 56 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ. ಇದು ಅನಿಯಮಿತ ಕರೆಗಳಿಗೆ ಮತ್ತು ದಿನಕ್ಕೆ 100 SMS ಜತೆಗೆ ಬರುತ್ತದೆ.
ಜಿಯೋ 56 ದಿನಗಳ ವ್ಯಾಲಿಡಿಟಿ, 2GB ದೈನಂದಿನ ಡೇಟಾ, ಅನಿಯಮಿತ ಧ್ವನಿ ಕರೆಗಳು, ದಿನಕ್ಕೆ 100 SMS ಮತ್ತು Jio ಅಪ್ಲಿಕೇಶನ್‌ಗಳಿಗೆ ಆ್ಯಕ್ಸಸ್ ನೀಡುವ 533 ರೂಗಳ ಯೋಜನೆಯನ್ನು ನೀಡುತ್ತದೆ.
ಏರ್‌ಟೆಲ್ 549 ರೂಗಳಲ್ಲಿ ಪ್ರಿಪೇಯ್ಡ್ ಯೋಜನೆ ಅನಿಯಮಿತ ಕರೆಗಳು ಮತ್ತು ದಿನಕ್ಕೆ 100 SMS ನೊಂದಿಗೆ 56 ದಿನಗಳ ವ್ಯಾಲಿಡಿಟಿಯೊಂದಿಗೆ 2GB ದೈನಂದಿನ ಡೇಟಾವನ್ನು ನೀಡುತ್ತದೆ. ಯೋಜನೆಯು ಪ್ರೈಮ್ ವೀಡಿಯೊ ಮೊಬೈಲ್ ಆವೃತ್ತಿ ಮತ್ತು ಅಪೊಲೊ 24|7 ಸರ್ಕಲ್‌ಗೆ ಆ್ಯಕ್ಸಸ್ ನೀಡುತ್ತದೆ.
ಇದನ್ನೂ ಓದಿ:
1) Archive Call, Internet Data: ಫೋನ್ ಕರೆ, ಕಾಲ್ ಡೇಟಾ ಮಾಹಿತಿ 2 ವರ್ಷ ಸಂಗ್ರಹಿಸಿಡಲು ಸರ್ಕಾರ ಆದೇಶ!
2) BSNL New Prepaid Plan: ಜಿಯೋ, ಏರ್ಟೆಲ್ , ವೋಡಾಫೋನ್ ಕಂಪನಿಗಳಿಗೆ BSNL ಟಕ್ಕರ್
3) Best Smartphones 2021: ಈ ವರ್ಷದ ಅತ್ಯುತ್ತಮ ಸ್ಮಾರ್ಟ್‌ಫೋನ್‌ಗಳು ಯಾವುವು ಗೊತ್ತಾ? ಇಲ್ಲಿದೆ ಪಟ್ಟಿ