100 ಜಿಬಿಯ ಮತ್ತೊಂದು ಭರ್ಜರಿ ಆಫರ್ ನೀಡಲಿದೆ ಜಿಯೋ: ಗ್ರಾಹಕರು ಫುಲ್ ಖುಶ್, ಕಂಪೆನಿಗಳಿಗೆ ನಡುಕ!

Published : May 30, 2017, 03:35 PM ISTUpdated : Apr 11, 2018, 12:47 PM IST
100 ಜಿಬಿಯ ಮತ್ತೊಂದು ಭರ್ಜರಿ ಆಫರ್ ನೀಡಲಿದೆ ಜಿಯೋ: ಗ್ರಾಹಕರು ಫುಲ್ ಖುಶ್, ಕಂಪೆನಿಗಳಿಗೆ ನಡುಕ!

ಸಾರಾಂಶ

ರಿಲಾಯನ್ಸ್ ಜಿಯೋ ಬ್ರಾಡ್ ಬ್ಯಾಂಡ್ ಕ್ಷೇತ್ರದಲ್ಲಿ ಅತೀ ಶೀಘ್ರದಲ್ಲೇ ಸಂಚಲನ ಮೂಡಿಸಲಿದೆ. ಮಾಧ್ಯಮಗಳ ವರದಿಯನ್ವಯ ಇನ್ನು ಕೆಲವೇ ತಿಂಗಳಲ್ಲಿ ಜಿಯೋ ಫೈಬರ್ ಮೂಲಕ 100 ಜಿಬಿ ಡೇಟಾವನ್ನು ನೀಡಲಿದೆ ಎಂದು ತಿಳಿದು ಬಂದಿದ್ದು, ಇದಕ್ಕೆ ಕೇವಲ 500 ರೂಪಾಯಿ ಪಾವತಿಸಬೇಕಲಾಗುತ್ತದೆ. ಸದ್ಯ ಕಂಪೆನಿ ಈ ಕುರಿತಾಗಿ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ ಆದರೆ ಮಾಧ್ಯಮಗಳು ಇಂತಹುದ್ದೊಂದು ವರದಿ ಪ್ರಸಾರ ಮಾಡಿದ್ದು ದೀಪಾವಳಿಗೂ ಮೊದಲು ಈ ಆಫರ್'ನ್ನು ಬಿಡುಗಡೆ ಮಾಡಲಿರುವುದಾಗಿಯೂ ತಿಳಿಸಿದೆ.

ಕಳೆದ ವರ್ಷ ಸೆಪ್ಟೆಂಬರ್'ನಲ್ಲಿ ಟೆಲಿಕಾಂ ಕ್ಷೇತ್ರದಲ್ಲಿ ರಿಲಾಯನ್ಸ್ ಜಿಯೋ ತನ್ನ ಆಫರ್'ನಿಂದ ಬಿರುಗಾಳಿ ಎಬ್ಬಿಸಿತ್ತು. ಉಚಿತ 4ಜಿ ಸಿಮ್ ನೀಡುವುದರೊಂದಿಗೆ ಉಚಿತ ಕರೆ ಹಾಗೂ ಇಂಟರ್ನೆಟ್ ಸೇವೆಯ ಆಕರ್ಷಕ ಆಫರ್ ನೀಡುವ ಮೂಲಕ ಟೆಲಿಕಾಂ ಮಾರುಕಟ್ಟೆಯ ರೂಪು ರೇಷೆಯನ್ನೇ ಬದಲಾಯಿಸಿತ್ತು. ಹೀಗಾಗಿ ಇತರ ಟೆಲಿಕಾಂ ಕಂಪೆನಿಗಳು ಕೂಡಾ ತಮ್ಮ ಗ್ರಾಹಕರನ್ನು ಉಳಿಸಿಕೊಳ್ಳಲು ಹಲವಾರು ಬಗೆಯ ಡೇಟಾ ಇಂಟರ್ನೆಟ್ ಸೇವೆಯೊಂದಿಗೆ ಉಚಿತ ಕರೆಗಳ ಆಫರ್ ನೀಡಲೇಬೇಕಾದ ಅನಿವಾರ್ಯತೆ ಎದುರಾಗಿತ್ತು.

ಸದ್ಯ ಮಾಧ್ಯಮಗಳಲ್ಲಿ ಪ್ರಸಾರವಾದ ವರದಿಯನ್ವಯ ಜಿಯೋ ಈ ಕೆಳಗಿನ ಆಫರ್ ನೀಡಲಿದೆ.

  • ರಿಲಾಯನ್ಸ್ ಜಿಯೋ ಇನ್ಫೋಕಾಮ್ ದೀಪಾವಳಿ ಸಂದರ್ಭದಲ್ಲಿ ತನ್ನ ಹೋಂ ಬ್ರಾಡ್ ಬ್ಯಾಂಡ್ ಸರ್ವಿಸ್- ಜಿಯೋ ಫೈಬರ್'ನ್ನು ಅಧಿಕೃತವಾಗಿ ಬಿಡುಗಡೆಗೊಳಿಸಲಿದೆ.
  • ಸದ್ಯ ಕೆಲ ಸ್ಥಳಗಳಲ್ಲಿ ಇದರ ಪರೀಕ್ಷಾರ್ಥ ಪ್ರಯೋಗ ನಡೆಸುತ್ತಿದ್ದಾರೆ.
  • ಕಂಪೆನಿ ಕೇವಲ 500 ರೂಪಾಯಿಗೆ 100 ಜಿಬಬಿ ಡೇಟಾ ನೀಡುವ ಸಾಧ್ಯತೆಗಳಿವೆ.
  • ಮುಂದಿನ ತಿಂಗಳು ಪ್ರಯೋಗ ನಡೆಸುವ ಪಟ್ಟಣಗಳ ಸಂಖ್ಯೆ ಹೆಚ್ಚಿಸಲಿದೆ.
  • ದೀಪಾವಳಿಗೂ ಕೆಲ ದಿನಗಳ ಮೊದಲು ಇದನ್ನು ಬಿಡುಗಡೆಗೊಳಿಸಲಾಗುತ್ತದೆ.
  • ಈ ಮೂಲಕ 100 ಪಟ್ಟಣಗಳನ್ನು ಒಂದುಗೂಡಿಸುವ ಪ್ರಯತ್ನ ನಡೆಸಲಾಗುತ್ತಿದೆ.

ಕೈಪೆ: NDTv

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

click me!

Recommended Stories

ಮಹತ್ವದ ಉಪಗ್ರಹ ಲಾಂಚ್‌ಗೂ ಮೊದಲು ತಿರುಪತಿ ತಿಮ್ಮಪ್ಪನ ಆಶೀರ್ವಾದ ಪಡೆದ ಇಸ್ರೋ ವಿಜ್ಞಾನಿಗಳ ತಂಡ
ಐಬಿಎಂನಿಂದ 50 ಲಕ್ಷ ಮಂದಿಗೆ ಎಐ, ಸೈಬರ್‌ ಸೆಕ್ಯುರಿಟಿ ಮತ್ತು ಕ್ವಾಂಟಮ್‌ ಕಂಪ್ಯೂಟಿಂಗ್ ತರಬೇತಿ