ವಾಟ್ಸಾಪ್‌ ವೆಬ್‌​ನಲ್ಲೂ ಇನ್ನು ವಿಡಿಯೋ, ಸಾಮಾನ್ಯ ಕರೆ

Kannadaprabha News   | Asianet News
Published : Mar 05, 2021, 09:24 AM IST
ವಾಟ್ಸಾಪ್‌ ವೆಬ್‌​ನಲ್ಲೂ ಇನ್ನು ವಿಡಿಯೋ, ಸಾಮಾನ್ಯ ಕರೆ

ಸಾರಾಂಶ

ಇನ್ಮುಂದೆ ವಾಟ್ಸಾಪ್‌ ವೆಬ್‌ನಲ್ಲಿ​ದ್ದಾ​ಗಲೂ ನಿಮ್ಮ ಆತ್ಮೀ​ಯ​ರಿಗೆ ವಾಟ್ಸಾಪ್‌ ಕರೆ ಅಥವಾ ವಿಡಿಯೋ ಕಾಲಿಂಗ್‌ ಮಾಡಬಹುದು

ನವ​ದೆ​ಹ​ಲಿ (ಮಾ.05): ಇನ್ಮುಂದೆ ವಾಟ್ಸಾಪ್‌ ವೆಬ್‌ನಲ್ಲಿ​ದ್ದಾ​ಗಲೂ ನಿಮ್ಮ ಆತ್ಮೀ​ಯ​ರಿಗೆ ವಾಟ್ಸಾಪ್‌ ಕರೆ ಅಥವಾ ವಿಡಿಯೋ ಕಾಲಿಂಗ್‌ ಮಾಡಬಹು​ದಾ​ಗಿದೆ. 

ಹೌದು, ಮೊಬೈಲ್‌ ಆಧಾ​ರಿತ ವಾಟ್ಸಾಪ್‌ ಅಪ್ಲಿ​ಕೇ​ಷ​ನ್‌​ನಲ್ಲಿ ಈ ಸೌಲಭ್ಯ ಇತ್ತಾ​ದರೂ, ಲ್ಯಾಪ್‌​ಟಾಪ್‌ ಮತ್ತು ಡೆಸ್ಕ್‌​ಟಾ​ಪ್‌​ನಲ್ಲಿ ವಾಟ್ಸಾಪ್‌ ವೆಬ್‌​ನ​ಲ್ಲಿ​ದ್ದಾಗ ವಾಟ್ಸಾಪ್‌ ಕರೆ ಅಥವಾ ವಿಡಿಯೋ ಕಾಲಿಂಗ್‌ಗೆ ಅವ​ಕಾ​ಶ​ವಿ​ರ​ಲಿಲ್ಲ. ಇದೀಗ ಆ ಸೇವೆಗೆ ವಾಟ್ಸಾಪ್‌ ಚಾಲನೆ ನೀಡಿದೆ.

 ವಾಟ್ಸಾ​ಪ್‌​ನಲ್ಲಿ ಹಂಚಿ​ಕೊ​ಳ್ಳ​ಲಾದ ಅಂಶ​ಗಳು ಸೋರಿ​ಕೆ​ಯಾ​ಗು​ತ್ತಿವೆ ಎಂಬ ಆರೋಪಗಳ ಬೆನ್ನಲ್ಲೇ, ಈ ಹೊಸ ಸೇವೆಗೆ ಚಾಲನೆ ಸಿಕ್ಕಿದೆ. ಆದರೆ ಈ ಸೇವೆ​ಗಾಗಿ ನಿಮ್ಮ ಕಂಪ್ಯೂ​ಟರ್‌ ಅಥವಾ ಲ್ಯಾಪ್‌​ಟಾ​ಪ್‌​ನಲ್ಲಿ ವೆಬ್‌ ಕ್ಯಾಮೆರಾ ಮತ್ತು ಸಂವ​ಹ​ನ​ಕ್ಕಾಗಿ ಮೈಕ್ರೋ​ಫೋ​ನ್‌​ಗ​ಳಿ​ರ​ಲೇ​ಬೇಕು.

ವಾಟ್ಸಾಪ್‌ಗೆ 12 ಹರೆಯ, ನಿತ್ಯ ನೂರು ಕೋಟಿ ಕರೆಗಳ ನಿರ್ವಹಣೆ! .

ಈ ಸಂಬಂಧ ಗುರು​ವಾರ ಟ್ವೀಟರ್‌ ಮೂಲಕ ಈ ಬಗ್ಗೆ ಹರ್ಷ ಹಂಚಿ​ಕೊಂಡಿ​ರುವ ವಾಟ್ಸಾಪ್‌, ‘ವಾಟ್ಸಾಪ್‌ ವೆಬ್‌ನಲ್ಲೂ ಸುರ​ಕ್ಷಿತ ಮತ್ತು ಸೋರಿ​ಕೆ​ಯಾ​ಗದ ವಾಟ್ಸಾಪ್‌ ಕರೆ​ಗ​ಳು ಮತ್ತು ವಿಡಿಯೋ ಕರೆ​ಗಳನ್ನು ಮಾಡ​ಬ​ಹು​ದಾ​ಗಿದೆ. ಕಳೆದ ವರ್ಷ 140 ಕೋಟಿ ವಾಟ್ಸಾಪ್‌ ವಿಡಿಯೋ ಮತ್ತು ಸಾಮಾನ್ಯ ಕರೆ​ಗಳು ದಾಖ​ಲಾ​ಗಿ​ವೆ’ ಎಂದು ಹೇಳಿದೆ.

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

click me!

Recommended Stories

1-ಟನ್ AC ಗಂಟೆಗೆ ಎಷ್ಟು ವಿದ್ಯುತ್ ಬಳಸುತ್ತದೆ? ಬೇಸಿಗೆಗೆ ಹೊಸ ಏಸಿ ಖರೀಸುವ ಪ್ಲಾನ್ ಇರೋರು ಈ ಲೆಕ್ಕಾಚಾರ ತಿಳ್ಕೊಳ್ಳಿ!
Toxic Boss: ನಿಮ್ಮ ಬಾಸ್ ಸೈಕೋಪಾತ್ ಇರಬಹುದಾ? ಈ 4 ಗುಣಗಳಿದ್ರೆ ಹುಷಾರ್ ಅಂತಾರೆ ತಜ್ಞರು!