ಹುಷಾರ್! ಈ 5 ಕೆಲಸ ಮಾಡಿದ್ರೆ ವಾಟ್ಸಪ್ ನಿಮ್ಮನ್ನು ಬ್ಯಾನ್ ಮಾಡುತ್ತೆ

By Web Desk  |  First Published Nov 19, 2018, 8:34 PM IST

ಯಾವುದೇ ತಂತ್ರಜ್ಞಾನ ಅಥವಾ ಟೂಲ್ ನಮ್ಮ ಕೈಗೆ ಸಿಕ್ಕರೆ, ಬಳಸುವಾಗ ಅಷ್ಟೇ ಜಾಗ್ರತೆ ವಹಿಸಬೇಕು. ಪ್ರತಿಯೊಂದು ತಂತ್ರಜ್ಞಾನ ಬಳಕೆಯೊಂದಿಗೆ ಹೊಣೆಗಾರಿಕೆಯೂ ಇರುತ್ತೆ.  ವಾಟ್ಸಪ್ ಬಳಕೆದಾರರು ಗಮನದಲ್ಲಿಡಬೇಕಾದ 5 ವಿಷಯಗಳಿಲ್ಲಿವೆ.


ಸಂವಹನ ಕ್ಷೇತ್ರದಲ್ಲಿ ಸೋಶಿಯಲ್ ಮೀಡಿಯಾ ಸೈಟ್‌ಗಳು, ವಿಶೇಷವಾಗಿ ವಾಟ್ಸಪ್‌ನಂತಹ ಮೆಸೇಜಿಂಗ್ ಸೇವೆಗಳು ಕ್ರಾಂತಿಯನ್ನೇ ಹುಟ್ಟುಹಾಕಿದೆ. ಆದರೆ ಹೆಚ್ಚಿನವರು ತಂತ್ರಜ್ಞಾನದ ಸದುಪಯೋಗ ಪಡೆಯುವವರಾಗಿದ್ದಾರೆ, ಕೆಲವರು ಅದನ್ನು ದುರ್ಬಳಕೆ ಮಾಡುವುದು ಕೂಡಾ ಸಾಮಾನ್ಯ. ಹೊಣೆಗಾರಿಕೆ ಮರೆತರೆ ಅದು ಅನಾಹುತಗಳಿಗೆ ದಾರಿ ಮಾಡಿಕೊಡುತ್ತದೆ. 

ಆದುದರಿಂದ ವಾಟ್ಸಪ್ ತನ್ನ ಬಳಕೆಯ ‘ಶರತ್ತು ಮತ್ತು ನಿಬಂಧನೆ ’ಯಲ್ಲಿ ಕೆಲವೊಂದು ಎಚ್ಚರಿಕೆಗಳನ್ನು ಮೊದಲೇ ನೀಡಿದೆ. ಅವುಗಳನ್ನು ಉಲ್ಲಂಘಿಸಿ ಸಿಕ್ಕಿಹಾಕಿಕೊಂಡರೆ, ನೀವು ಜೀವನ ಪರ್ಯಂತ ವಾಟ್ಸಪ್ ಬಳಸದಂತೆ ನಿಷೇಧ ಹೇರುವ ಸಾಧ್ಯತೆಗಳು ಇವೆ. ಪ್ರತಿಯೊಬ್ಬ ಬಳಕೆದಾರ ತಿಳಿದುಕೊಳ್ಳಲೇ ಬೇಕಾದ ವಿಷಯಗಳಿವು...

  • ಕಾನೂನು ಬಾಹಿರ, ಅಶ್ಲೀಲ, ಅವಹೇಳನಕಾರಿ, ಬೆದರಿಕೆ, ಪ್ರಚೋದನಾಕಾರಿ ಹಾಗೂ ದ್ವೇಷಪೂರಿತ ಸಂದೇಶಗಳನ್ನು ಕಳುಹಿಸುವಂತಿಲ್ಲ.
  • ಫೇಸ್ಬುಕ್ ಹಾಗೂ ಇನ್ಸ್ಟಾಗ್ರಾಂನಂತೆ ವಾಟ್ಸಪ್‌ನಲ್ಲೂ ಇತರರ ಹೆಸರಿನಲ್ಲಿ ಖಾತೆ ತೆರೆದರೆ, ನಿಷೇಧಕ್ಕೊಳಗಾಗುವ ಸಾಧ್ಯತೆಗಳಿವೆ.
  • ವಾಟ್ಸಪ್ ಬಳಸಿ ಬಲ್ಕ್ ಮೆಸೇಜ್, ಆಟೋ-ಮೆಸೇಜಿಂಗ್, ಆಟೋ-ಡಯಲಿಂಗ್ ಮಾಡೋ ಪ್ರಯತ್ನ ನಡೆಸಿದರೆ ನಿಷೇಧಕ್ಕೊಳಬೇಕಾಗುತ್ತೆ.
  • ಕೋಡಿಂಗ್/ಪ್ರೋಗ್ರಾಮಿಂಗ್ ಮಾಡಿ ವಾಟ್ಸಪ್ ಕೋಡ್‌ನ್ನು ಬದಲಾಯಿಸಲು ಅಥವಾ ಇನ್ನಿತರ ಯಾವುದೇ ಹಸ್ತಕ್ಷೇಪ ನಡೆಸಲು ಪ್ರಯತ್ನಿಸಿದರೂ ನಿಷೇಧ ಕಟ್ಟಿಟ್ಟ ಬುತ್ತಿ!
  • ಕಡಿಮೆ ಅವಧಿಯಲ್ಲಿ ಬಹಳ ಮಂದಿ ನಿಮ್ಮನ್ನು ಬ್ಲಾಕ್ ಮಾಡಿದ್ದಲ್ಲಿಯೂ ನಿಷೇಧದ ಭೀತಿ ಇದ್ದೇ ಇದೆ.  ಇತರ ಬಳಕೆದಾರರು ನಿಮ್ಮ ಬಗ್ಗೆ ರಿಪೋರ್ಟ್ ಮಾಡಿದರೆ, ಅದು ಸರಿಯಾಗಿದ್ದಲ್ಲಿ ವಾಟ್ಸಪ್ ನಿಮ್ಮನ್ನು ನಿಷೇಧಿಸುತ್ತದೆ.  

Tap to resize

Latest Videos

click me!