
ದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಜೀವನ ಶೈಲಿಯ ಬಗ್ಗೆ ಕೋಟ್ಯಂತರ ಮಂದಿಗೆ ಕುತೂಹಲ ಇದ್ದೇ ಇದೆ. 75ನೇ ವಯಸ್ಸಿನಲ್ಲಿಯೂ 25ರ ಯುವಕನಂತೆ ಸ್ವಲ್ಪವೂ ವಿರಮಿಸದೇ ದುಡಿಯುವ ಇವರ ವ್ಯಕ್ತಿತ್ವ ಬಹಳಷ್ಟು ಜನರಿಗೆ ನಿಗೂಢವೇ ಎನ್ನಿಸುವುದು ಇದೆ. ಆದ್ದರಿಂದ ಇವರ ವೈಯಕ್ತಿಕ ಜೀವನ, ಇವರು ಬಳಸುವ ಡ್ರೆಸ್, ಮೊಬೈಲ್ ಇತ್ಯಾದಿಗಳ ಕುರಿತು ಜನಸಾಮಾನ್ಯರಿಗೆ ಕುತೂಹಲ ಇದ್ದೇ ಇದೆ. ಅಂದಹಾಗೆ, ಇಲ್ಲಿ ಹೇಳ್ತಿರೋದು ಪ್ರಧಾನಿ ನರೇಂದ್ರ ಮೋದಿ ಅವರ ನಿಗೂಢ ಫೋನ್ ಕುರಿತು. ಅಂದಹಾಗೆ, ಸ್ಮಾರ್ಟ್ಫೋನ್ ಬಳಸಲು ಪ್ರಧಾನಿಗೆ ಅನುಮತಿಯೇ ಇಲ್ಲ. ಏಕೆಂದರೆ, ಪ್ರಧಾನಿಯ ಹುದ್ದೆಯೇ ಅಂಥದ್ದು. ದೇಶದ ಹೊರಗಿನ ಶತ್ರುಗಳಿಗಿಂತಲೂ ಒಳಗಿನ ಶತ್ರುಗಳು ಭಯಾನಕ, ಭೀಕರ ಎನ್ನುವ ಮಾತಿದೆ. ಇದು ಭಾರತಕ್ಕೂ ಸದ್ಯ ಅನ್ವಯ ಆಗುತ್ತಿದೆ. ಆದ್ದರಿಂದ ಫೋನ್ ಹ್ಯಾಕ್ ಮಾಡಿ ರಾಷ್ಟ್ರೀಯ ಭದ್ರತೆಗೆ ಧಕ್ಕೆ ತರುವಂಥದ್ದು ಸ್ಮಾರ್ಟ್ಫೋನ್ಗಳಿಂದ ಸುಲಭಸಾಧ್ಯ. ಆದ್ದರಿಂದ ಪ್ರಧಾನಿ ನರೇಂದ್ರ ಮೋದಿ ಅವರ ಬಳಿ ಇರುವುದು, ವಿಭಿನ್ನ ರೀತಿಯ, ಯಾರೂ ಬಳಸದ ಫೋನ್ಗಳು ಹಾಗೂ ಅದರಲ್ಲಿ ಇರುವ ಟೆಕ್ನಾಲಾಜಿಗಳು. ಜಾಗತಿಕ ನಾಯಕರಾಗಿ, ಭದ್ರತಾ ಕಾರಣಗಳಿಂದಾಗಿ ಅವರ ಫೋನ್ ಕೆಲವು ವಿಶೇಷ ಸಾಫ್ಟ್ವೇರ್ಗಳನ್ನು ಹೊಂದಿದೆ.
ವಿಐಪಿಗಳಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾದ ಉಪಗ್ರಹ ಅಥವಾ RAX (ನಿರ್ಬಂಧಿತ ಪ್ರದೇಶ ವಿನಿಮಯ) ಫೋನ್ಗಳನ್ನು ಪ್ರಧಾನಿ ನರೇಂದ್ರ ಮೋದಿ ಬಳಸುತ್ತಾರೆ. ನವರತ್ನ ಪಿಎಸ್ಯು, ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ನಿಂದ ತಯಾರಿಸಲ್ಪಟ್ಟಿದೆ, ಎಲ್ಲಾ ಇತರ ಸಂವಹನಕ್ಕಾಗಿ, ವಿಶೇಷವಾಗಿ ಎನ್ಕ್ರಿಪ್ಟ್ ಮಾಡಲಾದ ಮೊಬೈಲ್ ಫೋನ್ ಅನ್ನು ಹೊಂದಿರುವ ಅವರ ಪ್ರಧಾನ ಕಾರ್ಯದರ್ಶಿ ಮೂಲಕ ಇದನ್ನು ರವಾನಿಸಲಾಗುತ್ತದೆ. ಇವರು ಬಳಸುವ ಸುರಕ್ಷಿತ RAX (ನಿರ್ಬಂಧಿತ ಪ್ರದೇಶ ವಿನಿಮಯ) ಸಂವಹನ ವ್ಯವಸ್ಥೆಯನ್ನು ಭಾರತದಲ್ಲಿ ಸಂವಹನ ಸಚಿವಾಲಯದ ಅಡಿಯಲ್ಲಿ ಬರುವ ಸ್ವಾಯತ್ತ ದೂರಸಂಪರ್ಕ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರವಾದ ಸೆಂಟರ್ ಫಾರ್ ಡೆವಲಪ್ಮೆಂಟ್ ಆಫ್ ಟೆಲಿಮ್ಯಾಟಿಕ್ಸ್ (C-DOT) ಅಭಿವೃದ್ಧಿಪಡಿಸಿದೆ ಮತ್ತು ವಿನ್ಯಾಸಗೊಳಿಸಿದೆ.
ಪ್ರಧಾನಿ ನರೇಂದ್ರ ಮೋದಿಯವರ ಸುರಕ್ಷತೆಯನ್ನ ಗಮನದಲ್ಲಿಟ್ಟುಕೊಂಡು ಈ ಫೋನ್ ವಿನ್ಯಾಸಗೊಳಿಸಲಾಗಿದೆ. ಇದು ಎನ್ಕ್ರಿಪ್ಟ್ ಮಾಡಲಾದ ಸಾಧನವಾಗಿದ್ದು, ಇದರಲ್ಲಿ ವಿಶೇಷ ಸಾಫ್ಟ್ವೇರ್ನ್ನು ಬಳಸಲಾಗಿದೆ. ಈ ಫೋನ್ಗಳನ್ನು ಪತ್ತೆಹಚ್ಚಲಾಗುವುದಿಲ್ಲ ಮತ್ತು ಮಿಲಿಟರಿ ಆವರ್ತನ ಬ್ಯಾಂಡ್ನಲ್ಲಿ ಕಾರ್ಯನಿರ್ವಹಿಸುವುದರಿಂದ ಅವುಗಳನ್ನು ಹ್ಯಾಕ್ ಮಾಡಲು ಸಾಧ್ಯವಿಲ್ಲ. ಎನ್ಟಿಆರ್ಒ ಮತ್ತು ಡಿಐಟಿವೈಯಂತಹ ಏಜೆನ್ಸಿಗಳು ಇದನ್ನು ನಿಯಮಿತವಾಗಿ ಮೇಲ್ವಿಚಾರಣೆ ಮಾಡುತ್ತವೆ.
ಪ್ರಧಾನಮಂತ್ರಿಯವರು ಕಚೇರಿ ಫೋನ್ ಮೂಲಕ ಉಪಗ್ರಹ ಸಂಖ್ಯೆಗಳನ್ನು ಬಳಸಿಕೊಂಡು ಮೂರು ಹಂತದ ಎನ್ಕ್ರಿಪ್ಟ್ ಭದ್ರತೆಯನ್ನು ಬಳಸಿಕೊಂಡು ಕರೆಗಳನ್ನು ಮಾಡಲಾಗುತ್ತದೆ. ಪ್ರಧಾನಿ ನರೇಂದ್ರ ಮೋದಿ ಅವರು ಬಳಸುತ್ತಿರುವ ಫೋನ್ಗೆ ರುದ್ರ ಎಂದು ಹೆಸರಿಡಲಾಗಿದೆ. ಇನ್ನು ಈ ಫೋನ್ನ್ನು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಸಿದ್ಧಪಡಿಸಿದೆ ಎಂದು ವರದಿಗಳು ಹೇಳುತ್ತವೆ. ಸುರಕ್ಷತೆಯನ್ನ ಗಮನದಲ್ಲಿಟ್ಟುಕೊಂಡು ಮತ್ತು ಸೈಬರ್ ದಾಳಿಯರಕ್ಷಿಸಲು, ರುದ್ರ ಫೋನ್ಗಳಲ್ಲಿ ಅಂತರ್ನಿರ್ಮಿತ ಭದ್ರತಾ ಚಿಪ್ಗಳನ್ನ ಸ್ಥಾಪಿಸಲಾಗಿದೆ.. ರಾಷ್ಟ್ರೀಯ ತಾಂತ್ರಿಕ ಸಂಶೋಧನಾ ಸಂಸ್ಥೆ ಅಂದರೆ NTRO ಮತ್ತು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆ ಅಂದರೆ DEITY ಯಂತಹ ಏಜೆನ್ಸಿಗಳು ಮೋದಿ ಮೊಬೈಲ್ ಮೇಲ್ವಿಚಾರಣೆಗೆ ಯಾವಾಗಲೂ ಸಿದ್ಧವಾಗಿರುತ್ತವೆ.
ಸ್ಮಾರ್ಟ್ಫೋನ್ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್ಡೇಟ್. ಡಿಜಿಟಲ್ ಟ್ರೆಂಡ್ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್ಅಪ್ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.