
ಶಿವಮೊಗ್ಗ(ಮೇ.16): ಇಡಿ ವಿಶ್ವವೇ ವಾನ್ನಕ್ರೈ ರಾನ್ಸ್‌ಮ್‍ವೇರ್ ಸೈಬರ್ ದಾಳಿಗೆ ತುತ್ತಾಗಿದ್ದು, ಕಂಪ್ಯೂಟರ್‌ಗಳಿಗೆ ಸೆಕ್ಯೂರಿಟಿ ನೀಡುವ ಸಂಸ್ಥೆಗಳಿಗೂ ತಲೆನೋವಾಗಿದೆ. ಹೀಗಿರುವಾಗ ಮಲೆನಾಡು ಶಿವಮೊಗ್ಗ ಸಹ ಸೈಬರ್ ದಾಳಿಗೆ ಸಿಲುಕಿದೆ.
ಶಿವಮೊಗ್ಗದ ಪೆಸಿಟ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕರ ಲ್ಯಾಪ್‍ಟಾಪ್ ಸೈಬರ್ ದಾಳಿಗೆ ತುತ್ತಾಗಿದೆ.
ಪಟ್ಟಣದ ಗೋಪಾಲಗೌಡ ಬಡಾವಣೆಯಲ್ಲಿ ಪೆಸಿಟ್-ಎಂ ಕಾಲೇಜಿನ ಐಎಸ್‍ಇ ವಿಭಾಗದ ಸಹಾಯಕ ಪ್ರಾಧ್ಯಾಪಕರಾಗಿರುವ ಅರ್ಜುನ್ ಅವರ ಪಿಸಿಗೆ ವಾನ್ನಕ್ರೈ ರಾನ್ಸ್ಮ್ವೇರ್ ದಾಳಿಯಿಟ್ಟಿದೆ. ಬಿಟ್‍ಕಾಯಿನ್ ರೂಪದಲ್ಲಿ 600 ಡಾಲರ್ ನೀಡಲು ಬೇಡಿಕೆ ಇಡಲಾಗಿದ್ದು, ಇಲ್ಲದಿದ್ದರೆ ನಾವು ನಿಮ್ಮ ಎಲ್ಲಾ ಫೈಲ್‍ಗಳನ್ನು encrypt(ಅಳಿಸಿ) ಮಾಡಿದ್ದೇವೆ. ಇವುಗಳನ್ನು ಡಿಕ್ರಿಪ್ಟ್ ಮಾಡಲು ಯಾರಿಂದಲೂ ಸಾಧ್ಯವಿಲ್ಲ. ಕೆಲವು ಫೈಲ್‍ಗಳನ್ನು ನಮ್ಮ ಪ್ರೀ ಟ್ರಯಲ್ ಸರ್ವಿಸ್‍ನಲ್ಲಿ ಡಿಕ್ರಿಪ್ಟ್ ಮಾಡಬಹುದು. ಎಲ್ಲಾ ಫೈಲ್‍ಗಳನ್ನು ಪುನಃ ಉಪಯೋಗಿಸಲು ನಾವು ಕೇಳಿದ ಹಣವನ್ನು ಮೂರು ದಿನಗಳಲ್ಲಿ ನಮಗೆ ನೀಡಬೇಕೆಂದು ಎಚ್ಚರಿಸಲಾಗಿದೆ.
ಆದರೆ ಅರ್ಜುನ್ ಯಾವುದೇ ಹಣ ಪಾವತಿಗೆ ಮುಂದಾಗಿಲ್ಲ. ತಮ್ಮ ಯಾವುದೇ ಮಹತ್ವದ ಫೈಲ್'ಗಳಾಗಲಿ ಲ್ಯಾಪ್ ಟಾಪ್ ನಲ್ಲಿ ಇಲ್ಲದಿರುವುದರಿಂದ ಪುನಃ ಫಾರ್ಮೆಟ್ ಮಾಡಿ ಸರಿ ಮಾಡಿಕೊಳ್ಳುತ್ತೇನೆ. ಸ್ವತಃ ಕಂಫ್ಯೂಟರ್ ಸೈನ್ಸ್ ಪ್ರಾಧ್ಯಾಪಕನಾಗಿರುವ ಹಿನ್ನಲೆಯಲ್ಲಿ ನನ್ನ ವಿದ್ಯಾರ್ಥಿಗಳಿಗೆ ಇದನ್ನೊಂದು ಪಾಠವಾಗಿ ಭೋಧಿಸಲು ನನಗೆ ಅನುಕೂಲ. ಅಲ್ಲದೇ ಇದಕ್ಕೊಂದು ಹೊಸ ತಂತ್ರಾಂಶ ರೂಪಿಸಲು ಕೂಡ ಇದು ಸಹಕಾರಿ ಎಂದು ಈ ದಾಳಿಯನ್ನು ಸಕರಾತ್ಮಕವಾಗಿ ಪರಿಗಣಿಸಿದ್ದಾರೆ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.