
ಫೋಟೋ ಶೇರಿಂಗ್ ಆ್ಯಪ್ ಇನ್'ಸ್ಟಾಗ್ರಾಂ ಕಡಿಮೆ ಅವಧಿಯಲ್ಲಿಯೇ ಅತಿ ಹೆಚ್ಚು ಜನರನ್ನು ತಲುಪಿ ಸುದ್ದಿ ಮಾಡಿತ್ತು. ಈಗ ಹೊಸದಾಗಿ ಗ್ರೂಪ್ ವಿಡಿಯೋ ಕಾಲ್ ಆಯ್ಕೆಯನ್ನು ತನ್ನ ಗ್ರಾಹಕರಿಗೆ ನೀಡಿ ಈಗ ಮತ್ತೆ ಸುದ್ದಿಯಲ್ಲಿದೆ.
ಆ್ಯಪ್ ಓಪನ್ ಮಾಡುತ್ತಿದ್ದ ಹಾಗೆ ಸ್ಕ್ರೀನ್ ಮೇಲೆ ವಿಡಿಯೋ ಬಟನ್ ಕಾಣಿಸಿಕೊಳ್ಳಲಿದ್ದು ಗ್ರೂಪ್ ವಿಡಿಯೋ ಕಾಲ್, ಸಿಂಗಲ್ ವಿಡಿಯೋ ಕಾಲ್ ಆಯ್ಕೆಗಳು ಮೂಡಿಬರಲಿವೆ. ಆ ಮೂಲಕ ನಮ್ಮ ಆಯ್ಕೆಯ ವಿಡಿಯೋ ಕಾಲಿಂಗ್ ಸೌಲಭ್ಯವನ್ನು ಬಳಸಿಕೊಳ್ಳಬಹುದಾಗಿದೆ. ಇದರಲ್ಲಿಯೂ ವಾಟ್ಸಪ್‌ನಂತೆ ಸದ್ಯ ಗರಿಷ್ಟ ನಾಲ್ಕು ಜನರ ಮಿತಿ ಅಳವಡಿಸಲಾಗಿದೆ.
ಸೋಷಿಯಲ್ ಮೀಡಿಯಾದ ದೈತ್ಯಗಳಾದ ಇವರೆಡೂ ಸಂಸ್ಥೆಗಳು ಈಗ ಏಕಕಾಲದಲ್ಲಿ ಹೊಸ ಸೇವೆಯನ್ನು ಒದಗಿಸಲು ಮುಂದಾಗಿರುವುದರಿಂದ ಇಷ್ಟು ದಿನ ಗ್ರೂಪ್ ವಾಯ್ಸ್ ಕಾಲ್, ಸಿಂಗಲ್
ವಿಡಿಯೋ ಕಾಲ್ ಸೇವೆ ಪಡೆದುಕೊಳ್ಳುತ್ತಿದ್ದ ಗ್ರಾಹಕರು ಈಗ ಗ್ರೂಪ್ ವಿಡಿಯೋ ಸೇವೆಯನ್ನು ಆನಂದಿಸಬಹುದಾಗಿದೆ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.