ಕೋಲ್ಕತ್ತಾದ ಫೇಕ್‌ ಕಾಲ್‌ ಸೆಂಟರ್‌ ಮುಚ್ಚಿಸಿದ ಅಮೆರಿಕಾದ ಯೂಟ್ಯೂಬರ್ ಮಾರ್ಕ್ ರಾಬರ್: ಹೇಗಿತ್ತು ಕಾರ್ಯಾಚರಣೆ?

By Suvarna News  |  First Published May 9, 2022, 4:28 PM IST

ಟ್ರೂಕಾಲರ್‌ನ ಅಧ್ಯಯನದ ಪ್ರಕಾರ, 2021 ರಲ್ಲಿ ಈ ರೀತಿಯ ಹಗರಣ ಕೇಂದ್ರಗಳಿಂದ ಸುಮಾರು $30 ಬಿಲಿಯನ್ ಹಣ ಅಮೆರಿಕನ್ ಪ್ರಜೆಗಳಿಂದ ಕದಿಯಲ್ಪಟ್ಟಿದೆ


ಕೋಲ್ಕತ್ತಾ (ಮೇ. 09):  ಅಮೇರಿಕಾ ಮೂಲದ (USA)ಯೂಟ್ಯೂಬರ್ ಮಾರ್ಕ್ ರಾಬರ್ (Mark Rober) ಜನರಿಗೆ ಮೋಸ ಮಾಡುತ್ತಿದ್ದ ನಕಲಿ ಕಾಲ್ ಸೆಂಟರ್‌ಗಳನ್ನು, ಜಿರಳೆಗಳನ್ನು ಬಳಸಿಕೊಂಡು  ಹೇಗೆ ಮುಚ್ಚಿದರು ಎಂಬುದನ್ನು ವಿವರಿಸುವ ವೀಡಿಯೊವೊಂದನ್ನು ಬಿಡುಗಡೆ ಮಾಡಿದ್ದಾರೆ. ವೀಡಿಯೋವನ್ನು ಅವರ ಯೂಟ್ಯೂಬ್ ಚಾನೆಲ್‌ನಲ್ಲಿ ಪೋಸ್ಟ್ ಮಾಡಲಾಗಿದೆ ಮತ್ತು ವಿವಿಧ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಇದು ವೈರಲ್ ಆಗಿದೆ.

ಯೂಟ್ಯೂಬರ್ ರಾಬರ್ ಒಂದು ವರ್ಷಕ್ಕೂ ಹೆಚ್ಚು ಕಾಲ ಇಂಥಹ ಹಗರಣಗಳ ಮೇಲೆ ಕಣ್ಣಿಟ್ಟಿದ್ದು ಮತ್ತು ಅವುಗಳಲ್ಲಿ ಕನಿಷ್ಠ ನಾಲ್ಕನ್ನು ಭೇದಿಸಿದ್ದಾರೆ ಎಂದು ವೀಡಿಯೊದಲ್ಲಿ ಹೇಳಿದ್ದಾರೆ. ಇಂಥಹ ಫೇಕ್‌ ಕಾಲ್‌ ಸೆಂಟರ್ಸ್‌ ಹಾಗೂ ಹಗರಣ ಕೇಂದ್ರಗಳು ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿವೆ ಎಂದು ಯೂಟ್ಯೂಬರ್ ರಾಬರ್ ಹೇಳಿದ್ದಾರೆ. ಟ್ರೂಕಾಲರ್‌ನ ಅಧ್ಯಯನದ ಪ್ರಕಾರ, 2021 ರಲ್ಲಿ ಈ ರೀತಿಯ ಹಗರಣ ಕೇಂದ್ರಗಳಿಂದ ಸುಮಾರು $30 ಬಿಲಿಯನ್ ಹಣ ಅಮೆರಿಕನ್ ಪ್ರಜೆಗಳಿಂದ ಕದಿಯಲ್ಪಟ್ಟಿದೆ. 

Tap to resize

Latest Videos

ಇದನ್ನೂ ಓದಿ: ಭಾರತದಲ್ಲಿ ತಪ್ಪು ಮಾಹಿತಿ ಹರಡುತ್ತಿದ್ದ ಪಾಕಿಸ್ತಾನದ 6 ಸೇರಿದಂತೆ 16 Youtube ಚಾನೆಲ್ ಬ್ಲಾಕ್

ರಾಬರ್ ಅವರು ಯೂಟ್ಯೂಬ್‌ನಲ್ಲಿ‌ ಟೆಕ್ ಸಪೋರ್ಟ್ ಸ್ಕ್ಯಾಮ್ಸ್ ಮತ್ತು ಟ್ರೈಲಾಜಿ ಮೀಡಿಯಾ ಎಂಬ ಇತರ ಎರಡು ಕಂಟೆಂಟ್‌ ಕ್ರಿಯೇಟರ್ಸ್‌ನೊಂದಿಗೆ ಸೇರಿಕೊಂಡು ಈ ಕಾಲ್ ಸೆಂಟರ್‌ಗಳ ಕಚೇರಿಗಳಲ್ಲಿ ಗ್ಲಿಟರ್ ಬಾಂಬ್‌ಗಳು, ಜಿರಳೆಗಳು, ಹೊಗೆ ಬಾಂಬ್‌ಗಳು ಮತ್ತು ಸ್ಟಿಂಕ್ ಬಾಂಬ್‌ಗಳನ್ನು ಅಳವಡಿಸಿದ್ದಾರೆ. ಯೂಟ್ಯೂಬರ್ ರಾಬರ್ ವಿಡಿಯೋ ಇಲ್ಲಿದೆ 

ತಂಡ ಕೆಲಸ ಮಾಡಿದ್ದು ಹೇಗೆ?: ‌ಈ ಫೇಕ್‌ ಕಾಲ್‌ ಸೆಂಟರಿನ ಸಿಸಿಟಿವಿಗಳನ್ನು ಯಶಸ್ವಿಯಾಗಿ ವಶಕ್ಕೆ ಪಡೆಯುವ ಮೊದಲು ಮತ್ತು ಹಗರಣದ ಕೃತ್ಯಗಳನ್ನು ರೆಕಾರ್ಡ್ ಮಾಡುವ ಮೊದಲು, ಈ ತಂಡವು ಈ ಹಗರಣ ಕೇಂದ್ರಗಳಿಗೆ ತೆರಳಿದ್ದು ಉದ್ಯೋಗಿಗಳೊಂದಿಗೆ ಸ್ವಲ್ಪ ಸಮಯ ಕೆಲಸ ಮಾಡಿದೆ. ಸಂಪೂರ್ಣ ವೀಡಿಯೊವನ್ನು ರಾಬರ್ ಅವರ ಯೂಟ್ಯೂಬ್ ಚಾನೆಲ್‌ನಲ್ಲಿ ಪೋಸ್ಟ್ ಮಾಡಲಾಗಿದೆ.

42 ವರ್ಷ ರಾಬರ್ ತಮ್ಮ ಕಾರ್ಯಾಚರಣೆಯನ್ನು ಹೇಗೆ ಯಶಸ್ವಿಯಾಗಿ ಪೂರ್ಣಗೊಳಿಸಿದರು ಎಂಬುದನ್ನು ವಿವರಿಸಿದ್ದಾರೆ, ಇದು ಕೇವಲ ಈ ನಾಲ್ಕು ಮಾತ್ರವಲ್ಲದೆ ಭಾರತದಾದ್ಯಂತ ಇತರ ಅನೇಕ ನಕಲಿ ಕಾಲ್ ಸೆಂಟರ್‌ಗಳನ್ನು ಮುಚ್ಚಲು ಕಾರಣವಾಗಿದೆ. ಕೋಲ್ಕತ್ತಾದ ಪೊಲೀಸರು ರಾಬರ್ ತಂಡ ನೀಡಿದ ಸಾಕ್ಷ್ಯವನ್ನು ಪರಿಗಣಿಸಿ ಈ ಕಾಲ್ ಸೆಂಟರ್‌ಗಳ ಮೇಲೆ ದಾಳಿ ನಡೆಸಿದ್ದಾರೆ.

ಇದನ್ನೂ ಓದಿNASA ಹ್ಯೂಮನ್ ಎಕ್ಸ್‌ಪ್ಲೋರೇಶನ್ ರೋವರ್ ಚಾಲೆಂಜ್ ಗೆದ್ದ 2 ಭಾರತೀಯ ತಂಡ

ಯೂಟ್ಯೂಬರ್ ಈ ಕಾಲ್ ಸೆಂಟರ್‌ಗಳ ವಿಳಾಸಗಳನ್ನು ಮತ್ತು ಜಗತ್ತಿನಾದ್ಯಂತ ಸಾವಿರಾರು ಜನರನ್ನು ವಂಚಿಸಲು ವ್ಯಾಪಾರವನ್ನು ನಡೆಸಿದ ಮಾಲೀಕರ ಫೋಟೋಗಳನ್ನು ಸಹ ಬಿಡುಗಡೆ ಮಾಡಿದ್ದಾರೆ.  ರಾಬರ್‌ನಿಂದ ಭೇದಿಸಲ್ಪಟ್ಟ ಈ ರೀತಿಯ ಕಾಲ್ ಸೆಂಟರ್‌ಗಳು ಜನರನ್ನು ವಂಚಿಸಲು ಮತ್ತು ಅವರ ಜೀವನದ ಚೆಲ್ಲಾಟವಾಡಲು ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡಿವೆ. ಅಲ್ಲದೇ ಇಂಥಹ ಕಾಲ್‌ ಸೆಟಂರ್‌ಗಳು ಹಾವಳಿ ಇತ್ತೀಚೆಗೆ ಹೆಚ್ಚಾದಂತೆ ತೋರುತ್ತಿದೆ.

ರಾಬರ್ ಕಳೆದ ವರ್ಷ ತನ್ನ ಅಮೆಜಾನ್ ಡೆಲಿವರಿ ಬಾಕ್ಸನ್ನು ಕಳವು ಮಾಡಿದ ದಾರಿಹೋಕನನ್ನು ಬಂಧಿಸಿ ಸುದ್ದಿಯಲ್ಲಿದ್ದರು. ಇಲ್ಲಿ ಕೂಡ ರಾಬರ್ ಗ್ಲಿಟರ್ ಬಾಂಬನ್ನು ಬಳಸಿದ್ದರು. ವೃತ್ತಿಯಲ್ಲಿಇಂಜಿನಿಯರ್ ಆಗಿರುವ ರಾಬರ್ ಈ ಹಿಂದೆ ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಮತ್ತು ಆಪಲ್‌ನಲ್ಲಿ ಕೆಲಸ ಮಾಡಿದ್ದಾರೆ. ರಾಬರ್‌ ಸುಮಾರು ಒಂದು ದಶಕದ ಹಿಂದೆ ಯೂಟ್ಯೂಬ್‌ ಪ್ರಯಾಣವನ್ನು ಆರಂಭಿಸಿದ್ದರು ಮತ್ತು ಪ್ರಸ್ತುತ 21 ಮಿಲಿಯನ್‌ಗಿಂತಲೂ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದಾರೆ

click me!