ಸಾವಿನ ಬಗ್ಗೆ ಎಲಾನ್ ಮಸ್ಕ್ ಟ್ವೀಟ್: ತಾಯಿಯ ಬುದ್ಧಿವಾದದ ಬಳಿಕ 'Sorry' ಎಂದ ಟೆಸ್ಲಾ ಸಿಇಓ

By Suvarna News  |  First Published May 9, 2022, 3:36 PM IST

ಸದಾ ಒಂದಿಲ್ಲೊಂದು ವಿಷಯಕ್ಕೆ ಸುದ್ದಿಯಾಗುವ ಟೆಸ್ಲಾ ಸಿಇಓ ಎಲಾನ್ ಮಸ್ಕ್  ಈ ಬಾರಿಯೂ ತಮ್ಮ ಟ್ವೀಟ್‌ ಮೂಲಕ ಮತ್ತೆ ಸುದ್ದಿಯಾಗಿದ್ದರೆ. ಈ ಬಾರಿ  ಅವರ ಸಾವಿನ ಬಗ್ಗೆ ಮಸ್ಕ್ ತಮಾಷೆ ಮಾಡಿದ್ದಾರೆ. ಅಲ್ಲದೇ ಈ ಟ್ವೀಟ್‌ಗೆ ಎಲಾನ್  ತಾಯಿ ಮಾಯೆ ಮಸ್ಕ್‌ ಕೂಡ ರಿಪ್ಲೈ ಮಾಡಿದ್ದಾರೆ


Elon Musk Latest Tweet: ಸದಾ ಒಂದಿಲ್ಲೊಂದು ವಿಷಯಕ್ಕೆ ಸುದ್ದಿಯಾಗುವ ಟೆಸ್ಲಾ ಸಿಇಓ ಎಲಾನ್‌ ಮಸ್ಕ್‌ (Elon Musk)  ಟ್ವಿಟ್ಟರ್‌ನಲ್ಲಿ ಜೋಕ್ಸ್ ಮತ್ತು ಮೀಮ್‌ಗಳನ್ನು ಪೋಸ್ಟ್‌ ಮಾಡುವುದನ್ನು ಮುಂದುವರೆಸಿದ್ದಾರೆ. ಈ ಬಾರಿ ಜಗತ್ತಿನ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾದ ಮಸ್ಕ್ ತಮ್ಮ ಸಂಭವನೀಯ ಸಾವಿನ ಬಗ್ಗೆ ಟ್ವೀಟ್ ಮಾಡಿದ್ದಾರೆ. ಭಾನುವಾರ ರಾತ್ರಿ $44 ಶತಕೋಟಿಗೆ ಟ್ವಿಟರ್ ಖರೀದಿಸಿದ ನಂತರ ತಮ್ಮ ಟ್ವೀಟ್‌ಗಳೊಂದಿಗೆ ಸಾಮಾನ್ಯಕ್ಕಿಂತ ಹೆಚ್ಚು ಸಕ್ರಿಯವಾಗಿರುವ ಮಸ್ಕ್  "ನಿಗೂಢ ಸಂದರ್ಭಗಳಲ್ಲಿ" ತಾವು ಸಾಯಬಹುದು ಎಂದು ಟ್ವೀಟ್ ಮಾಡಿದ್ದಾರೆ. ‌ 

ಎಲಾನ ಟ್ವೀಟ್‌ಗೆ ಈ ಬಾರಿ  ಸ್ವತಃ ಅವರ ತಾಯಿ ಮಾಯೆ ಮಸ್ಕ್ (Maye Musk)  ರಿಪ್ಲೈ ಮಾಡಿದ್ದಾರೆ. ಎಲಾನ್‌ ತಾಯಿ ಮಾಯೆ ಮಸ್ಕ್‌ ಕೂಡ ಸಾಕಷ್ಟು ಟ್ವಿಟರ್ ಅನುಯಾಯಿಗಳನ್ನು ಹೊಂದಿದ್ದಾರೆ.  ಪ್ರಪಂಚದ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾದ ಮಸ್ಕ್ ಕೆಲವೊಮ್ಮೆ ಟ್ವಿಟರ್‌ನ ಬೋರ್ಡ್ ಮೀಟಿಂಗ್‌ನಲ್ಲಿ ವೀಡ್‌ (Weed) ಸೇದುವ ಬಗ್ಗೆ ಮಾತನಾಡಿದರೆ, ಇನ್ನೂಕೆಲವು ಬಾರಿ ಮೀಮ್‌ಗಳನ್ನು ಪೋಸ್ಟ್‌ ಮಾಡಿ ಸುದ್ದಿಯಾಗುತ್ತಾರೆ. 

Tap to resize

Latest Videos

ಇದನ್ನೂ ಓದಿ: ಮಸ್ಕ್ 90 ದಶಲಕ್ಷ ಟ್ವಿಟರ್ ಫಾಲೋವರ್ಸ್ ಪೈಕಿ ಅರ್ಧದಷ್ಟು ನಕಲಿ?

ಇತ್ತೀಚೆಗಷ್ಟೇ 44 ಬಿಲಿಯನ್ ಅಮೆರಿಕನ್ ಡಾಲರ್‌ಗೆ ಟ್ವಿಟರ್ ಖರೀದಿಸುವ ಒಪ್ಪಂದ ಮಾಡಿಕೊಳ್ಳುವ ಮೂಲಕ ಸಂಚಲನ ಮೂಡಿಸಿರುವ ಎಲಾನ್ ಮಸ್ಕ್ ಈ ರೀತಿ ಟ್ವೀಟ್ ಮಾಡೋದು ಹೊಸದೇನಲ್ಲ. ಟ್ವಿಟರ್ ಒಪ್ಪಂದ ನಡೆದ ಕೆಲವೇ ದಿನಗಳಲ್ಲಿ  'ನನ್ನ ಮುಂದಿನ ಗುರಿ ಕೋಕಾ ಕೋಲಾ (Coca Cola)' ಎಂದು ಟ್ವೀಟ್ ಮಾಡುವ ಮೂಲಕ ಚರ್ಚೆ ಹುಟ್ಟು ಹಾಕಿದ್ದರು. ಅವರ ಲೇಟೆಸ್ಟ್‌ ಟ್ವೀಟ್‌ನಲ್ಲಿ, ಅವರು ಈಗ ತಮ್ಮ ನಿಗೂಢ ಸಾವಿನ ಬಗ್ಗೆ ತಮಾಷೆ ಮಾಡಿದ್ದಾರೆ. ಈ ಟ್ವೀಟ್‌ಗೆ ಅವರ ತಾಯಿಯೂ ರಿಪ್ಲೈ ಮಾಡಿದ್ದಾರೆ. 

ಭಾನುವಾರ ರಾತ್ರಿ, ಬಿಲಿಯನೇರ್ ಮಸ್ಕ್  "if I die under mysterious circumstances, it's been nice knowin ya" ಎಂದು ಸಾವಿನ ಬಗ್ಗೆ ಟ್ವೀಟ್ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಅವರ ತಾಯಿ "That's not funny" (ಇದು ತಮಾಷೆ ಅಲ್ಲ) ಎಂದು ರಿಪ್ಲೈ ಮಾಡಿದ್ದಾರೆ. 

ಅಮ್ಮ ಮಾಡಿದ ಟ್ವೀಟ್‌ಗೆ ಮಸ್ಕ್ ಮತ್ತೆ ರಿಪ್ಲೈ ನಿಡಿದ್ದು, ತಮ್ಮ ಟ್ವೀಟ್‌ಗೆ ತಕ್ಷಣವೇ ಕ್ಷಮೆಯಾಚಿಸಿದ್ದಾರೆ. ಬಹುಶಃ ಇನ್ನೂ ತಮಾಷೆಯಾಗಿ ಪ್ರತಿಕ್ರಿಯಿಸಿದ್ದಾರೆ.  "Sorry! I will do my best to stay alive," (ಕ್ಷಮಿಸಿ! ನಾನು ಜೀವಂತವಾಗಿರಲು ನನ್ನ ಕೈಲಾದಷ್ಟು ಪ್ರಯತ್ನಿಸುತ್ತೇನೆ) ಎಂದು ಮಸ್ಕ್ ಬರೆದಿದ್ದಾರೆ. ಈ ಟ್ವೀಟ್‌ಗೂ ಸಾಕಷ್ಟು ಪ್ರತಿಕ್ರಿಯೆಗಳು ಬಂದಿವೆ.

 

Sorry! I will do my best to stay alive.

— Elon Musk (@elonmusk)

 

ಟ್ವೀಟರ್‌ಗೆ ಮಸ್ಕ್‌ ಸಿಇಓ?:  ಆದರೆ ಮಸ್ಕ್ ಬಹಳ ಮುಖ್ಯವಾದ‌ ಕಂಪನಿಯೊಂದನ್ನು ಸ್ವಾಧೀನಪಡಿಸಿಕೊಳ್ಳುವುದರ ಮಧ್ಯೆ ಇದ್ದಕ್ಕಿದ್ದಂತೆ ಅವರ ಸಾವಿನ ಬಗ್ಗೆ ಏಕೆ ಮಾತನಾಡಿದ್ದಾರೆ ಎಂಬುದು ಸಂದೇಹಕ್ಕೆ ಕಾರಣವಾಗಿದೆ. ಟ್ವಿಟರ್ ಒಪ್ಪಂದವು ಈ ವರ್ಷದ ಕೊನೆಯಲ್ಲಿ ಮುಕ್ತಾಯಗೊಳ್ಳುವ ನಿರೀಕ್ಷೆಯಿದೆ. ಇದರ ನಂತರ, ಪರಾಗ್ ಅಗರ್ವಾಲ್ ಬದಲಿಗೆ, ಮಸ್ಕ್ ಟ್ವಿಟರ್‌ನ ಹಂಗಾಮಿ ಸಿಇಒ ಆಗುವ ಸಾಧ್ಯತೆ ಇದೆ ಎಂದು ವರದಿಗಳು ಸೂಚಿಸಿವೆ. 

ಇದನ್ನೂ ಓದಿ: ಟ್ವಿಟರ್‌ ಬಳಕೆ ಇನ್ನು ಉಚಿತವಲ್ಲ? ಮಹತ್ವದ ಸುಳಿವು ಕೊಟ್ಟ ಎಲೋನ್ ಮಸ್ಕ್!

ಈ ಟ್ವೀಟ್ ನಲ್ಲಿ ಮಸ್ಕ್ ಉಲ್ಲೇಖಿಸಿರುವ ಸಾಲುಗಳು ನೈಸ್ ನೋಯಿನ್ ಯಾ ಹಾಡಿದ್ದಾಗಿದೆ ಎನ್ನಲಾಗುತ್ತಿದೆ. ಈ ಹಾಡು TWENTY2 ಎಂಬ ಬ್ಯಾಂಡ್ ನಿಂದ 2018ರಲ್ಲಿ ಬಿಡುಗಡೆಯಾಗಿತ್ತು. ಆದ್ರೆ ಈ ಟ್ವೀಟ್ ಗಿಂತಲೂ ಒಂದು ಗಂಟೆ ಮುನ್ನ ಮಸ್ಕ್ ಪೋಸ್ಟ್ ವೊಂದನ್ನು ಷೇರ್ ಮಾಡಿದ್ದರು. ಅದು ರಷ್ಯಾದ ಅಧಿಕಾರಿಯೊಬ್ಬರ ಸಂದೇಶವಾಗಿತ್ತು. ಅದರಲ್ಲಿ ಮಿಲಿಟರಿ ಸಂವಹನ ಸಾಧನಗಳ ಜೊತೆಗೆ ಫ್ಯಾಸಿಸ್ಟ್ ಪಡೆಗಳನ್ನು ಉಕ್ರೇನ್ ಗೆ ಕಳುಹಿಸುವ ಕಾರ್ಯದಲ್ಲಿ ಎಲಾನ್ ಮಸ್ಕ್ ಭಾಗಿಯಾಗಿರುವುದಾಗಿ ಇತ್ತು. 

ಅಲ್ಲದೆ, 'ಇದಕ್ಕಾಗಿ ಎಲಾನ್, ನೀನು ವಯಸ್ಕನಂತೆ ಜವಾಬ್ದಾರನಾಗಿದ್ದೀಯಾ. ನೀವು ಎಷ್ಟು ಆಟವಾಡಿದರೂ ಬಿಡುವುದಿಲ್ಲ' ಎಂದು ಬರೆಯಲಾಗಿತ್ತು. ಹೀಗಾಗಿ ಮಸ್ಕ್ ರಷ್ಯಾದಿಂದ ತನ್ನ ಜೀವಕ್ಕೆ ಅಪಾಯವಿದೆ ಎಂಬುದನ್ನು ಟ್ವೀಟ್ ಮೂಲಕ ಹೇಳುವ ಪ್ರಯತ್ನ ಮಾಡಿರಬಹುದು ಎಂದು ಊಹಿಸಲಾಗಿದೆ. 

click me!