
ಈಗಿನ ಬಹುತೇಕ ಫೋನ್ಗಳಲ್ಲಿ ಮೆಮೊರಿ ಪವರ್ ಜಾಸ್ತಿನೇ ಇರುತ್ತದೆ. ಇದರ ಹೊರತಾಗಿಯೂ ಹೋದ ಹೋದಲ್ಲಿ ಫೋಟೋ, ಸೆಲ್ಫಿ ಕ್ಲಿಕ್ ಮಾಡಿಕೊಳ್ಳುವುದು, ವಿಡಿಯೋ ತೆಗೆಯುವ ಸ್ವಭಾವ ಇರುವವರಿಗೆ ಮೊಬೈಲ್ ಫೋನ್ನಲ್ಲಿ ಎಷ್ಟೇ ಮೆಮೋರಿ ಇದ್ದರೂ ಸಾಕಾಗುವುದಿಲ್ಲ. ಆ ಸಮಯದಲ್ಲಿ ಕೆಲವೊಮ್ಮೆ ಅನಗತ್ಯ ಎನ್ನಿಸಿರುವ ಫೋಟೋ, ವಿಡಿಯೋಗಳನ್ನು ಡಿಲೀಟ್ ಮಾಡಿದರೂ ಮೆಮೊರಿ ಫುಲ್ ಎಂದೇ ತೋರಿಸುತ್ತಿರುತ್ತದೆ. ಎಲ್ಲಿ, ಏನು ಮಾಡಿದರೂ ಒಂದು ಫೋಟೋ ಕ್ಲಿಕ್ ಮಾಡುವ ಸಮಯದಲ್ಲಿಯೇ ಮತ್ತೆ memory full ಎಂದು ಬರುತ್ತದೆ. ಮೆಮೊರಿ ಎಲ್ಲಿ ತುಂಬಿರುತ್ತದೆ ಎಂದು ಹುಡುಕುವುದೇ ಕಷ್ಟ ಎಂದು ಎನ್ನಿಸುತ್ತದೆ.
ಅಂಥ ಸಮಯದಲ್ಲಿ ನೀವು ಈ ಟ್ರಿಕ್ಸ್ ಫಾಲೋ ಮಾಡಿದ್ರೆ ಮೆಮೊರಿ ಫುಲ್ ಎನ್ನುವ ಸೂಚನೆ ಬರುವುದಿಲ್ಲ. ನೀವು ವಿಡಿಯೋ, ಫೋಟೋ ಎಲ್ಲವೂ ಡಿಲೀಟ್ ಮಾಡಿದ ಮೇಲೆ ಕೂಡ ಮೆಮೊರಿ ಎಲ್ಲಿ ಅಡಗಿ ಕುಳಿತಿದೆ ಎಂದು ಕಂಡು ಹಿಡಿಯಬೇಕು ಎಂದರೆ ನೀವು ಮಾಡಬೇಕಿರುವುದು ಇಷ್ಟು.
- ಮೊದಲಿಗೆ ಕ್ರೋಮ್ಗೆ ಹೋಗಿ
- ಮೂರು ಡಾಟ್ ಮೇಲೆ ಕ್ಲಿಕ್ ಮಾಡಿ
- ಅಲ್ಲಿ ಕಾಣಿಸುವ ಸೆಟ್ಟಿಂಗ್ಸ್ ಮೇಲೆ ಕ್ಲಿಕ್ ಮಾಡಿ
- ಕೆಳಭಾಗದಲ್ಲಿ ಸೈಟ್ ಸೆಟ್ಟಿಂಗ್ಸ್ (Site Settings) ಕಾಣಿಸುತ್ತದೆ. ಅದರ ಮೇಲೆ ಕ್ಲಿಕ್ ಮಾಡಿ.
- ಇಲ್ಲಿ ಅತ್ಯಂತ ಕೊನೆಯಲ್ಲಿ ಡಾಟಾ ಸ್ಟೋರ್ಡ್ (data stored) ಎನ್ನುವುದರ ಮೇಲೆ ಕ್ಲಿಕ್ ಮಾಡಿ
- ಅಲ್ಲಿ ನೀವು ಗೂಗಲ್ ಕ್ರೋಮ್ನಲ್ಲಿ ಯಾವೆಲ್ಲಾ ವೆಬ್ಸೈಟ್ಗೆ ಹೋಗಿದ್ದೀರೋ ಅವುಗಳನ್ನು ಪರಿಶೀಲಿಸಬಹುದು. ಎಲ್ಲವೂ ಅನಗತ್ಯ ಎನ್ನಿಸಿದರೆ ಒಟ್ಟಾಗಿ ಎಲ್ಲವನ್ನೂ ಡಿಲೀಟ್ ಮಾಡಿ. ಇಲ್ಲದೇ ಹೋದರೆ ಮುಂದೆ ಕಾಣಿಸುವ ಮೂರು ಡಾಟ್ ಮೇಲೆ ಕ್ಲಿಕ್ ಮಾಡಿ ನಿಮಗೆ ಬೇಡದೇ ಇರುವ ವೆಬ್ಸೈಟ್ ಲಿಂಕ್ ಡಿಲೀಟ್ ಮಾಡಬಹುದು.
- ಇದರಿಂದ ನಿಮಗೆ ಒಂದಿಷ್ಟು ಜಾಗವು ಮೊಬೈಲ್ನಲ್ಲಿ ಸಿಗುತ್ತದೆ. ಇದರಲ್ಲಿ ಅತಿಯಾದ ಜಾಗವೇನೂ ಸಿಗುವುದಿಲ್ಲ. ಆದರೆ ಇಂಟರ್ನಲ್ ಆಗಿ ಸ್ಟಾಕ್ ಆಗಿರುವ ಕೆಲಮಟ್ಟಿನ ಜಾಗವು ಸಿಗುವ ಹಿನ್ನೆಲೆಯಲ್ಲಿ, ಮೆಮೊರಿ ಫುಲ್ ಎನ್ನುವುದು ತೋರಿಸುವುದಿಲ್ಲ. ಜೊತೆಗೆ, ಫೋನ್ ಕೂಡ ಸ್ಪೀಡ್ ಆಗಿ ವರ್ಕ್ ಆಗುತ್ತದೆ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.