
ವಾಟ್ಸಾಪ್'ನಲ್ಲಿ ಪದೇ ಪದೇ ಮೆಸೇಜ್ ಮಾಡಿ ತೊಂದರೆ ಕೊಡುವುದು, ಕೆಟ್ಟ ಸಂದೇಶಗಳನ್ನು ಕಳುಹಿಸಿ ಮನಸ್ಸಿಗೆ ನೋವುಂಟು ಮಾಡುವವರ ಕಾಟ ತಪ್ಪಿಸಲು ವಾಟ್ಸಾಪ್ ಬ್ಲಾಕ್ ಮಾಡುವ ಆಯ್ಕೆ ನೀಡಿದೆ. ಆದರೆ ಕೆಲವೊಮ್ಮೆ ಇಂತಹ ಮೆಸೇಜ್ ಕಳುಹಿಸದಿದ್ದರೂ ಕೆಲವರು ನಂಬರ್'ಗಳನ್ನು ಬ್ಕಾಕ್ ಮಾಡುತ್ತಾರೆ. ಇನ್ನು ನಮ್ಮ ಆಪ್ತರೇ ನಮ್ಮ ನಂಬರ್ ಬ್ಲಾಕ್ ಮಾಡಿದರೆ ನಿಜಕ್ಕೂ ಮನಸ್ಸಿಗೆ ನೋವಾಗುತ್ತದೆ. ಆದರೀಗ ನಿಮ್ಮ ನಂಬರ್ ಯಾರಾದರೂ ಬ್ಲಾಕ್ ಮಾಡಿದ್ದರೆ ಅದನ್ನು ನೀವೇ ಖುದ್ದಾಗಿ ಅನ್'ಬ್ಲಾಕ್ ಮಾಡುವ ಅವಕಾಶವಿದೆ. ಅದು ಹೇಗಂತೀರಾ? ಇಲ್ಲಿದೆ ವಿಧಾನ
-ಎಲ್ಲಕ್ಕೂ ಮೊದಲು ನೀವು ನಿಮ್ಮ ವಾಟ್ಸಾಪ್ ಸೆಟ್ಟಿಂಗ್ಸ್'ನ್ನು ತೆರೆಯಿರಿ.
-ಬಳಿಕ ನೀವು ನಿಮ್ಮ ವಾಟ್ಸಾಪ್ ಅಕೌಂಟ್ ಡಿಲೀಟ್ ಮಾಡುವ ಾಯ್ಕೆಯನ್ನೊತ್ತಿ ನಿಮ್ಮ ನಂಬರ್ ನಮೂದಿಸಿ.
-ನಂಬರ್ ನಮೂದಿಸಿದ ಬಳಿಕ ಅಕೌಂಟ್ ಡಿಲೀಟ್ ಮಾಡಲು ಸಾಧ್ಯವಾಗುತ್ತದೆ.
-ಅಕೌಂಟ್ ಡಿಲೀಟ್ ಆಗಿರುವುದನ್ನು ಖಚಿತಪಡಿಸಿಕೊಂಡು ವಾಟ್ಸಾಪ್ ಅನ್ ಇನ್ಸ್ಟಾಲ್ ಮಾಡಿ ಬಳಿಕ ನಿಮ್ಮ ಮೊಬೈಲ್'ನ್ನು ರೀ ಸ್ಟಾರ್ಟ್ ಮಾಡಿ.
-ಬಳಿಕ ಗೂಗಲ್ ಪ್ಲೇ ಸ್ಟಾರ್'ನಿಂದ ವಾಟ್ಸಾಪ್ ಅಪ್ಲಿಕೇಷನ್'ನ್ನು ಡೌನ್'ಲೋಡ್ ಮಾಡಿಕೊಂಡು ಮತ್ತೆ ನಿಮ್ಮ ಖಾತೆ ತೆರೆಯಿರಿ.
-ನಿಮ್ಮ ಖಾತೆಯನ್ನು ಮತ್ತೆ ತೆರೆಯುವಾಗ ನಂಬರ್ ನಮೂದಿಸಬೇಕಾಗುತ್ತದೆ. ಇದರಂತೆ ನಮೂದಿಸಿ ಮತ್ತೆ ವಾಟ್ಸಾಪ್ ಬಳಸಿ.
ಈ ಮೂಲಕ ನಿಮ್ಮ ನಂಬರ್'ನ್ನು ಬ್ಲಾಕ್ ಮಾಡಿದವರ ಬ್ಲಾಕ್ ಲಿಸ್ಟ್'ನಿಂದ ತನ್ನಷ್ಟಕ್ಕೇ ಅನ್'ಬ್ಲಾಕ್ ಆಗುತ್ತದೆ. ಅಲ್ಲದೇ ನೀವು ಅವರಿಗೆ ಸಂದೇಶಗಳನ್ನು ಕಳುಹಿಸಲು ಸಾಧ್ಯವಾಗುತ್ತದೆ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.