ಮೊಬೈಲ್ ಗೂ ಬಂತು ಕಾರಿನ ಏರ್ ಬ್ಯಾಗ್: ಬಿದ್ರೆ ನೋ ಟೆನ್ಶನ್!

First Published Jun 29, 2018, 3:25 PM IST
Highlights

ಇನ್ಮುಂದೆ ನಿಮ್ಮ ಮೊಬೈಲ್ ಬಿದ್ದು ಒಡೆಯಲ್ಲ

ಮೊಬೈಲ್ ರಕ್ಷಣೆಗೆ ಬಂದಿದೆ ಏರ್ ಬ್ಯಾಗ್ ಡಿವೈಸ್

ಜರ್ಮನಿಯ ಇಂಜಿನಿಯರಿಂಗ್ ವಿದ್ಯಾರ್ಥಿ ಆವಿಷ್ಕಾರ

ಫಿಲಿಪ್ ಫ್ರೆಂಜಲ್ ಆವಿಷ್ಕಾರಕ್ಕೆ ತಲೆಬಾಗಲೇಬೇಕು

ಸ್ಟುಟಗಾರ್ಟ್(ಜೂ.29): 

ಇನ್ಮೇಲೆ ನಿಮ್ಮ ಇಷ್ಟದ ಮೊಬೈಲ್ ಫೋನ್ ನೆಲಕ್ಕೆ ಬಿದ್ರೂ ಒಡೆಯಲ್ಲ. ಅರೆ! ಫ್ಲೋರ್ ಪ್ರೂಫ್ ಮೊಬೈಲ್ ಏನಾದ್ರೂ ಬಂದಿದೆಯಾ ಅಂತಾ ಕೇಳ್ಬೇಡಿ. ಜರ್ಮನಿಯ ಫಿಲಿಪ್ ಫ್ರೆಂಜಲ್ ಎಂಬ ಇಂಜಿನಿಯರ್ ವಿದ್ಯಾರ್ಥಿ ಆವಿಷ್ಕಾರ ಮಾಡಿರುವ ಈ ಡಿವೈಸ್ ಖಂಡಿತ ನಿಮಗೆ ಸಮಾಧಾನ ತರಬಲ್ಲದು.

ಫಿಲಿಪ್ ಫ್ರೆಂಜಲ್ ಎಂಬ ಇಂನಜಿಯರ್ ವಿದ್ಯಾರ್ಥಿ ಮೊಬೈಲ್ ರಕ್ಷಣೆಗೆಂದೇ ಏರ್ ಬ್ಯಾಗ್ ವೊಂದನ್ನು ಆವಿಷ್ಕರಿಸಿದ್ದಾನೆ. ಇದು ಮೊಬೈಲ್ ನೆಲಕ್ಕೆ ಬಿದ್ದರೆ ಅದು ಒಡೆದು ಹೋಗದಂತೆ ರಕ್ಷಣೆ ನೀಡುತ್ತದೆ.

ಕಾರಿನಲ್ಲಿ ಅಪಘಾತದ ಸಂದರ್ಭದಲ್ಲಿ ತೆರೆದುಕೊಳ್ಳುವ ಏರ್ ಬ್ಯಾಗ್ ರೀತಿಯಲ್ಲೇ ಈ ಮೊಬೈಲ್ ಏರ್ ಬ್ಯಾಗ್ ಕ್ಷಣಾರ್ಧದಲ್ಲಿ ತೆರೆದುಕೊಳ್ಳುತ್ತದೆ. ಮೊಬೈಲ್ ನೆಲಕ್ಕೆ ಬೀಳುವ ಮೊದಲೇ ಇದರ ಮೆಟಲ್ ಸ್ಪ್ರಿಂಗ್ ಓಪನ್ ಆಗಿ ಮೊಬೈಲ್ ನ್ನು ರಕ್ಷಿಸುತ್ತದೆ.

click me!