ಭಾರತಕ್ಕೂ ಶೀಘ್ರ ಎಲಾನ್‌ ಮಸ್ಕ್‌ ‘ಸ್ಟಾರ್‌ಲಿಂಕ್‌’ ಇಂಟರ್ನೆಟ್‌?

By Kannadaprabha News  |  First Published Sep 8, 2021, 11:43 AM IST
  • ಉಪಗ್ರಹಗಳ ಗುಚ್ಚದ ಮೂಲಕ ಕುಗ್ರಾಮ ಅಥವಾ ಕಾಡಿನಂತಹ ಪ್ರದೇಶದಲ್ಲೂ ಅತಿವೇಗದ ಇಂಟರ್ನೆಟ್‌ ಸೇವೆ 
  • ಸ್ಟಾರ್‌ಲಿಂಕ್‌ ಕಂಪನಿ ಶೀಘ್ರದಲ್ಲೇ ಭಾರತದಲ್ಲೂ ತನ್ನ ಸೇವೆ ಆರಂಭಿಸುವ ಸಾಧ್ಯತೆ

ನವದೆಹಲಿ (ಸೆ.08) : ಉಪಗ್ರಹಗಳ ಗುಚ್ಚದ ಮೂಲಕ ಕುಗ್ರಾಮ ಅಥವಾ ಕಾಡಿನಂತಹ ಪ್ರದೇಶದಲ್ಲೂ ಅತಿವೇಗದ ಇಂಟರ್ನೆಟ್‌ ಸೇವೆ ನೀಡುವ ಸ್ಟಾರ್‌ಲಿಂಕ್‌ ಕಂಪನಿ ಶೀಘ್ರದಲ್ಲೇ ಭಾರತದಲ್ಲೂ ತನ್ನ ಸೇವೆ ಆರಂಭಿಸುವ ಸಾಧ್ಯತೆಯಿದೆ.

ಸ್ಪೇಸ್‌ಎಕ್ಸ್‌, ಟೆಸ್ಲಾ ಮುಂತಾದ ಕಂಪನಿಗಳ ಮಾಲಿಕ, ಅಮೆರಿಕದ ಉದ್ಯಮಿ ಎಲಾನ್‌ ಮಸ್ಕ್‌ ಒಡೆತನದ ಸ್ಟಾರ್‌ಲಿಂಕ್‌ ಕಂಪನಿಯು ಭಾರತದಲ್ಲಿ ಇಂಟರ್ನೆಟ್‌ ಸೇವೆ ನೀಡಲು ಅಗತ್ಯವಿರುವ ಸರ್ಕಾರಿ ಅನುಮತಿಗಳ ಕುರಿತು ಮಾಹಿತಿ ಪಡೆಯುತ್ತಿದೆ.

Latest Videos

undefined

ಈ ವಿಷಯವನ್ನು ಸ್ವತಃ ಎಲಾನ್‌ ಮಸ್ಕ್‌ ತಿಳಿಸಿದ್ದಾರೆ. ನೀವು ಭಾರತದಲ್ಲಿ ಸ್ಟಾರ್‌ಲಿಂಕ್‌ ಸೇವೆ ಆರಂಭಿಸುತ್ತೀರಾ ಎಂದು ಟ್ವೀಟರ್‌ನಲ್ಲಿ ವ್ಯಕ್ತಿಯೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಮಸ್ಕ್‌, ‘ಅನುಮತಿ ಪ್ರಕ್ರಿಯೆ, ನಿಯಮಗಳ ಬಗ್ಗೆ ಪರಿಶೀಲಿಸುತ್ತಿದ್ದೇವೆ’ ಎಂದು ಹೇಳಿದ್ದಾರೆ.

ಪ್ರತಿ ಹಳ್ಳಿಗೂ ಇಂಟರ್‌ನೆಟ್‌ ನನ್ನ ಗುರಿ: ಕೇಂದ್ರ ಸಚಿವ ಆರ್‌ಸಿ

ಏನಿದು ಸ್ಟಾರ್‌ಲಿಂಕ್‌ ಇಂಟರ್ನೆಟ್‌:  ಸಾಮಾನ್ಯ ಇಂಟರ್ನೆಟ್‌ ಸೇವೆ ನೀಡುವ ಕಂಪನಿಗಳು ತಲುಪದ ಕುಗ್ರಾಮ, ಕಾಡು ಅಥವಾ ಇನ್ನಿತರ ದುರ್ಗಮ ಪ್ರದೇಶಗಳಲ್ಲಿ ಉಪಗ್ರಹಗಳ ಗುಚ್ಚದ ಮೂಲಕ ಅಂತರಿಕ್ಷದಿಂದ ಅತಿವೇಗದ ಇಂಟರ್ನೆಟ್‌ ಸಂಪರ್ಕ ಕಲ್ಪಿಸುವ ಯೋಜನೆಯನ್ನು ಅಮೆರಿಕ ಮುಂತಾದೆಡೆ ಸ್ಟಾರ್‌ಲಿಂಕ್‌ ಕಂಪನಿ ಪ್ರಾಯೋಗಿಕವಾಗಿ ಆರಂಭಿಸಿದೆ. ಈಗಾಗಲೇ ಗ್ರಾಹಕರಿಗೆ ಇಂತಹ ಒಂದು ಲಕ್ಷ ಸಂಪರ್ಕಗಳನ್ನೂ ನೀಡಿದೆ. ಇದಕ್ಕಾಗಿ 2019ರಿಂದ ಆರಂಭಿಸಿ ಕಂಪನಿಯು ಈವರೆಗೆ 1700ಕ್ಕೂ ಹೆಚ್ಚು ಉಪಗ್ರಹಗಳನ್ನು ಹಾರಿಬಿಟ್ಟಿದೆ. ಒಟ್ಟು 30,000 ಉಪಗ್ರಹಗಳನ್ನು ಉಡಾವಣೆ ಮಾಡಿ, ಅಂತರಿಕ್ಷದಲ್ಲಿ ಅಲ್ಲಲ್ಲಿ ಉಪಗ್ರಹಗಳ ಗುಚ್ಚಗಳನ್ನು ನಿರ್ಮಿಸಿ, ಅವುಗಳಿಂದ ಇಡೀ ಜಗತ್ತಿಗೆ ಇಂಟರ್ನೆಟ್‌ ಸೇವೆ ನೀಡುವ ಉದ್ದೇಶವನ್ನು ಸ್ಟಾರ್‌ಲಿಂಕ್‌ ಹೊಂದಿದೆ.

ಅಮೆರಿಕದಲ್ಲಿ ಗ್ರಾಹಕರಿಗೆ 499 ಡಾಲರ್‌ (ಸುಮಾರು 36000 ರು.)ಗೆ ಸ್ಟಾರ್‌ಲಿಂಕ್‌ ಸಂಪರ್ಕ ನೀಡಲಾಗಿದೆ. ಈ ಹಣಕ್ಕೆ ವೈ-ಫೈ ರೌಟರ್‌ನಿಂದ ಆರಂಭಿಸಿ ವಿದ್ಯುತ್‌ ಸಂಪರ್ಕದವರೆಗೆ ಎಲ್ಲವನ್ನೂ ಕಂಪನಿ ನೀಡುತ್ತದೆ. ನಂತರ ಪ್ರತಿ ತಿಂಗಳು ಗ್ರಾಹಕರು ಇಂಟರ್ನೆಟ್‌ಗೆ 99 ಡಾಲರ್‌ (ಸುಮಾರು 7000 ರು.) ಪಾವತಿಸಬೇಕು. ಈಗಾಗಲೇ ಇಂತಹ 1 ಲಕ್ಷ ಸಂಪರ್ಕ ನೀಡಲಾಗಿದ್ದು, ಇನ್ನೂ 5 ಲಕ್ಷ ಸಂಪರ್ಕಕ್ಕೆ ಅರ್ಜಿ ಬಂದಿದೆ ಎಂದು ಹೇಳಲಾಗಿದೆ.

click me!