
ಚೆನ್ನೈ(ಫೆ.15): ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಒಂದೇ ರಾಕೆಟ್ ಮೂಲಕ 104 ಉಪಗ್ರಹಗಳನ್ನು ಬುಧವಾರ ಬೆಳಗ್ಗೆ 9.28ಕ್ಕೆ ಆಂಧ್ರಪ್ರದೇಶದ ಶ್ರೀಹರಿಕೋಟಾ ಉಡಾವಣಾ ನೆಲೆಯಿಂದ ಉಡಾವಣೆ ಮಾಡಲಿದೆ. ಇದಕ್ಕಾಗಿ ಮಂಗಳವಾರ ಮುಂಜಾನೆ 5:28 ರಿಂದ 28 ಗಂಟೆಗಳ ಕೌಂಟ್‌ಡೌನ್ ಆರಂಭಿಸಲಾಗಿದೆ.
ಜಾಗತಿಕ ಬಾಹ್ಯಾಕಾಶ ಇತಿಹಾಸದಲ್ಲಿ ಯಾವುದೇ ದೇಶ ಒಂದೇ ಉಡಾವಣೆಯಲ್ಲಿ ಶತಕ ಬಾರಿಸಿದ ಉದಾಹರಣೆಯೇ ಇಲ್ಲ. 2014ರಲ್ಲಿ ರಷ್ಯಾ ಒಂದೇ ರಾಕೆಟ್‌ನಲ್ಲಿ 37 ಉಪಗ್ರಹಗಳನ್ನು ಕಕ್ಷೆಗೆ ಸೇರಿಸಿದ್ದೇ ಈವರೆಗಿನ ದಾಖಲೆ ಆಗಿತ್ತು.
104 ಉಪಗ್ರಹಗಳ ಪೈಕಿ 4 ಭಾರತದ್ದವಾದರೆ, 101 ಉಪಗ್ರಹಗಳು ವಿದೇಶಕ್ಕೆ ಸೇರಿದವು. ಅದರಲ್ಲೂ ನಾಸಾದಂತಹ ಜಗದ್ವಿಖ್ಯಾತ ಬಾಹ್ಯಾಕಾಶ ಸಂಸ್ಥೆ ಹೊಂದಿರುವ ಅಮೆರಿಕದ 96 ಉಪಗ್ರಹಗಳನ್ನು ಇಸ್ರೋ ಉಡಾವಣೆ ಮಾಡಿಕೊಳ್ಳುವ ಹೊಣೆಗಾರಿಕೆ ಹೊತ್ತಿದೆ.
ಅಮೆರಿಕದ 96 ಉಪಗ್ರಹಗಳ ಪೈಕಿ 88 ಸ್ಯಾನ್‌ಫ್ರಾನ್ಸಿಸ್ಕೋ ಮೂಲದ ಪ್ಲಾನೆಟ್ ಐಎನ್‌ಎಸಿ ಎಂಬ ಸ್ಟಾರ್ಟ್ ಅಪ್ ಕಂಪನಿಗೆ ಸೇರಿದವಾಗಿದ್ದು, ಪ್ರತಿ ಉಪಗ್ರಹವೂ 4.7 ಕೆ.ಜಿ. ತೂಕ ಹೊಂದಿವೆ. ನಾಸಾಕ್ಕೆ ಹೋಲಿಸಿದರೆ ಇಸ್ರೋದ ಉಡಾವಣೆ ದರ ಅಗ್ಗವಾಗಿರುವ ಹಿನ್ನೆಲೆಯಲ್ಲಿ ವಿದೇಶಿ ಕಂಪನಿಗಳು ಉಪಗ್ರಹ ಉಡಾವಣೆಗೆ ಇಸ್ರೋವನ್ನು ಅವಲಂಬಿಸಿವೆ. ಉಳಿದಂತೆ ಇಸ್ರೇಲ್, ಕಜಕಸ್ತಾನ, ನೆದರ್ಲೆಂಡ್, ಸ್ವಿಜರ್ಲೆಂಡ್ ಹಾಗೂ ಯುಎಇಯ ತಲಾ ಒಂದು ಉಪಗ್ರಹ ಇಸ್ರೋ ರಾಕೆಟ್‌ನಲ್ಲಿ ಬಾಹ್ಯಾಕಾಶ ಸೇರಲಿವೆ. ಗಂಟೆಗೆ 27 ಸಾವಿರ ಕಿ.ಮೀ. (ಪ್ರಯಾಣಿಕ ವಿಮಾನಕ್ಕಿಂತ 40 ಪಟ್ಟು ಅಧಿಕ) ವೇಗದಲ್ಲಿ 101 ಸಣ್ಣ ಉಪಗ್ರಹಗಳನ್ನು 600 ಸೆಕೆಂಡ್‌ಗಿಂತ ಕಡಿಮೆ ಅವಧಿಯಲ್ಲಿ ಕಕ್ಷೆಗೆ ಸೇರಿಸಲು ಇಸ್ರೋ ಮುಂದಾಗಿದೆ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.