Bengaluru Tech Summit| ವೃದ್ಧರ ಮೇಲೆ ನಿಗಾಕ್ಕೆ ಸ್ಮಾರ್ಟ್‌ ವಾಚ್‌..!

By Kannadaprabha NewsFirst Published Nov 20, 2021, 7:38 AM IST
Highlights

*   ಆರೋಗ್ಯ ಸಮಸ್ಯೆ ನಿಗಾಕ್ಕೆ ಸ್ಮಾರ್ಟ್‌ ಕವಚ್‌
*   ಬೆಂಗಳೂರು ಕಂಪನಿಯಿಂದ ಹೆಲ್ಪ್‌ ಆನ್‌ ದಿ ರಿಸ್ಟ್‌ ವಾಚ್‌ ಅವಿಷ್ಕಾರ
*   2030ರ ವೇಳೆಗೆ 150 ಶತಕೋಟಿ ಡಾಲರ್‌ ವಹಿವಾಟಿನ ಮಟ್ಟಕ್ಕೆ ಬೆಳೆಯುವ ಸಾಧ್ಯತೆ
 

ಬೆಂಗಳೂರು(ನ.20):  ಹಿರಿಯ ನಾಗರಿಕರು(Older People), ಬುದ್ದಿಮಾಂದ್ಯರು, ಮೆರವಿನ ಕಾಯಿಲೆಯವರು, ಮೂರ್ಚೆ ರೋಗದಿಂದ ಬಳಲುವವರು, ಪಾರ್ಕಿನ್‌ಸನ್‌ ಕಾಯಿಲೆಗಳುಳ್ಳವರು, ಅಪಘಾತಕ್ಕೆ(Accident) ಒಳಗಾದವರ ರಕ್ಷಣೆಗೆ ಅತ್ಯಾಧುನಿಕ ತಂತ್ರಜ್ಞಾನವುಳ್ಳ ‘ಸ್ಮಾರ್ಟ್‌ ಕವಚ್‌’(Smart Kavach) (Help on the Rest) ವಾಚ್‌(Watch) ಆವಿಷ್ಕಾರ ಮಾಡಲಾಗಿದೆ. ಬೆಂಗಳೂರು(Bengaluru) ಮೂಲದ ಈಜಿಎಂ2ಎಂ ಕಂಪೆನಿ ವಿಶಿಷ್ಟವಾದ ಕೈಗಡಿಯಾರ ಆವಿಷ್ಕರಿಸಿದ್ದು ಬೆಂಗಳೂರು ತಂತ್ರಜ್ಞಾನ ಶೃಂಗದಲ್ಲಿ ಪ್ರದರ್ಶನ ಮಾಡಿದೆ.

ಹಿರಿಯ ನಾಗರಿಕರು, ಬುದ್ದಿ ಮಾಂದ್ಯರು, ಮರೆವು ಕಾಯಿಲೆ ಉಳ್ಳಂತಹವರ ಮೇಲೆ ಸಂಬಂಧಿಕರು ಹಾಗೂ ಕುಟುಂಬ ಸದಸ್ಯರು ಸದಾ ಕಣ್ಣಿಡಲು ಸಾಧ್ಯವಿಲ್ಲ. ಹೀಗಾಗಿ ಅಂತಹ ಕೈಗೆ ಸ್ಮಾರ್ಟ್‌ ಕವಚ್‌ ಸಾಧನವನ್ನು ಅಳವಡಿಸಿದರೆ ಅವರು ಚಲನವಲನವನ್ನು ಜಿಪಿಎಸ್‌(GPS) ಮೂಲಕ ಟ್ರ್ಯಾಕ್‌(Track) ಮಾಡಬಹುದು.

BTS-2021: ಸ್ಟಾರ್ಟಪ್‌ ಉತ್ತೇಜನಕ್ಕೆ ಬಿಯಾಂಡ್‌ ಸ್ಟಾರ್ಟಪ್‌ ಗ್ರಿಡ್‌, ಸಚಿವ ಅಶ್ವತ್ಥ್‌

ಒಂದು ವೇಳೆ ಆಯ ತಪ್ಪಿ ಬಿದ್ದರೆ ಅಥವಾ ಅಪಘಾತಕ್ಕೆ ಒಳಗಾದರೆ ತಕ್ಷಣ ಸಂಬಂಧಿಕರಿಗೆ (ಮೊದಲೇ ದಾಖಲಿಸಿದ ಸಂಖ್ಯೆಗಳು) ಎಚ್ಚರದ ಸಂದೇಶಗಳು, ಕರೆ, ಸಂದೇಶ ಹಾಗೂ ಇ-ಮೇಲ್‌(E-Mail) ಮೂಲಕ ರವಾನೆಯಾಗುತ್ತದೆ.
ಅಪಘಾತ ಉಂಟಾಗಿದ್ದರೆ ಕೊನೆ ಕ್ಷಣದಲ್ಲಿ ದಾಖಲಾದ ಶಬ್ದದ ಆಧಾರದ ಮೇಲೆ ಆ್ಯಂಬುಲೆನ್ಸ್‌(Ambulance) ಹಾಗೂ ಹತ್ತಿರದ ಆಸ್ಪತ್ರೆಗೂ(Hospital) ತನ್ನಿಂತಾನೇ ತುರ್ತು ಸಂದೇಶ ಹಾಗೂ ಸ್ಥಳದ ವಿವರಗಳು ರವಾನೆಯಾಗುತ್ತದೆ. ಸಹಾಯ ಅಗತ್ಯವಾಗಿರುವ ವ್ಯಕ್ತಿಯ ಒನ್‌ ಟಚ್‌ ಮೂಲಕ ವಿಡಿಯೋ ಕಾಲ್‌ ಸಹ ಮಾಡಬಹುದು. ವ್ಯಕ್ತಿಗೆ ಕರೆ ಸ್ವೀಕರಿಸಲು ಸಾಧ್ಯವಾಗದ ಸ್ಥಿತಿಯಲ್ಲಿದ್ದರೆ 3 ಬಾರಿ ರಿಂಗ್‌ ಆದರೂ ಕರೆ ಸ್ವೀಕರಿಸದಿದ್ದರೆ ಸ್ವಯಂ ಆಗಿ ಕರೆ ಸ್ವೀಕರಿಸುವ ಆಟೋ ಆನ್ಸರಿಂಗ್‌ ವ್ಯವಸ್ಥೆಯೂ ಇದರಲ್ಲಿದೆ. ಬ್ಯಾಟರಿ ಲೋ ಆದಾಗಲೂ ಸಂಬಂಧಿಕರಿಗೆ ಜಿಪಿಎಸ್‌ ಸಹಿತ ಅಲರ್ಟ್‌ ಹೋಗುತ್ತದೆ. ಆ್ಯಕ್ಟಿವಿಟಿ ಟ್ರಾಕರ್‌, ಸ್ಲೀಪ್‌ ಟ್ರಾಕರ್‌, ಪಿಲ್‌ ರಿಮೈಂಡರ್‌ ಸೇರಿ ಎಲ್ಲ ರೀತಿಯ ಆಯ್ಕೆಗಳೂ ಇರುವುದರಿಂದ ಹಿರಿಯ ನಾಗರೀಕರು ಹಾಗೂ ಸೀಮಿತ ಅನಾರೋಗ್ಯ ಸಮಸ್ಯೆಯುಳ್ಳವರಿಗೆ ನೆರವಾಗಲಿದೆ ಎಂದು ಕಂಪೆನಿ ಪ್ರದರ್ಶನದಲ್ಲಿ ಮಾಹಿತಿ ನೀಡಿದೆ.

ಯಾರ‍್ಯಾರಿಗೆ ಲಾಭ?

ಹಿರಿಯ ನಾಗರೀಕರು, ಬುದ್ದಿಮಾಂದ್ಯರು, ಮೆರವಿನ ಕಾಯಿಲೆ, ಮೂರ್ಚೆರೋಗದಿಂದ ಬಳಲುವವರು, ಪಾರ್ಕಿನ್‌ಸನ್‌ ಕಾಯಿಲೆಗಳುಳ್ಳವರು, ಅಪಘಾತಕ್ಕೆ ಒಳಗಾದವರಿಗೆ ಲಾಭ.

ಯಾವ ರೀತಿ ಲಾಭ?

ಕಾಯಿಲೆಯಿಂದ ಬಳಲುತ್ತಿರವವರ ಮೇಲೆ ಜಿಪಿಎಸ್‌ ಮೂಲಕ ನಿಗಾ ಇಡಬಹುದು. ಆಯ ತಪ್ಪಿ ಬಿದ್ದರೆ, ಅಪಘಾತಕ್ಕೆ ತುತ್ತಾದರೆ ತಕ್ಷಣವೇ ಸಂಬಂಧಿಕರಿಗೆ ‘ಸ್ಮಾರ್ಟ್‌ ಕವಚ್‌’ ಎಚ್ಚರಿಕೆ ಸಂದೇಶ, ಕರೆ, ಇ ಮೇಲ್‌ ಮೂಲಕ ಮಾಹಿತಿ ರವಾನಿಸುತ್ತದೆ.

ಮಹಿಳಾ ಉದ್ಯಮಿಗಳಿಗಾಗಿ ಪ್ರತ್ಯೇಕ ಆರ್ಥಿಕ ಸಂಸ್ಥೆ: ಸಿಎಂ ಬೊಮ್ಮಾಯಿ

ವಿದ್ಯುತ್‌ ಚಾಲಿತ ವಾಹನ ಭವಿಷ್ಯದ ಆಯ್ಕೆ: ವಾಜಿದ್‌

ವಿದ್ಯುತ್‌ ಚಾಲಿತ ವಾಹನಗಳು (EV) ಭವಿಷ್ಯದ ಆಯ್ಕೆಯಾಗಿದ್ದು ಅದಕ್ಕೆ ಅಗತ್ಯವಿರುವ ಹಾರ್ಡ್‌ವೇರ್‌ ಪೂರೈಕೆ ಸಮಸ್ಯೆಯನ್ನು ಬಗೆಹರಿಸಲು ಕೇಂದ್ರ ಸರ್ಕಾರ(Central Government) ಒತ್ತು ಕೊಡಬೇಕು ಎಂದು ಎನರ್ಜೀಸ್‌ ವೆಂಚರ್ಸ್‌ ಕಂಪೆನಿಯ ಸಿಇಒ ಮುಸ್ತಾಫಾ ವಾಜಿದ್‌ ಹೇಳಿದ್ದಾರೆ.

ಬೆಂಗಳೂರು ತಂತ್ರಜ್ಞಾನ ಶೃಂಗಸಭೆಯ(Bengaluru Tech Summit) ಮೂರನೇ ದಿನವಾದ ಶುಕ್ರವಾರ ವರ್ಚುಯಲ್‌ ಆಗಿ ನಡೆದ ‘ವಿದ್ಯುತ್‌ ಚಾಲಿತ ವಾಹನ ಕ್ಷೇತ್ರದಲ್ಲಿ ಉದ್ಯಮಿಗಳಿಗೆ ಇರುವ ಅವಕಾಶಗಳು’ ಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತದ(India) ಸಾರಿಗೆ ವಲಯ ಪರಿಸರ ಸ್ನೇಹಿಯಾಗಿ ಸುಸ್ಥಿರಗೊಳ್ಳಬೇಕಾಗಿದೆ. ಜಾಗತಿಕ ರಾಜಕಾರಣದಿಂದಾಗಿ ಚೀನಾ ಒಂದನ್ನು ಬಿಟ್ಟರೆ, ಪ್ರಪಂಚದ ಉಳಿದ ಭಾಗಗಳಲ್ಲಿ ಪೂರಕ ವಾತಾವರಣವಿದ್ದು ಭಾರತ ಈ ಅವಕಾಶವನ್ನು ಬಾಚಿಕೊಳ್ಳಬೇಕು ಎಂದರು.

ಜನರ ಮನೋಭಾವ ಇ.ವಿ.ವಾಹನಗಳ ಪರವಿದೆ. ಈ ವಲಯವು ದೇಶದಲ್ಲಿ 2030ರ ವೇಳೆಗೆ 150 ಶತಕೋಟಿ ಡಾಲರ್‌ ವಹಿವಾಟಿನ ಮಟ್ಟಕ್ಕೆ ಬೆಳೆಯುವ ಸಾಧ್ಯತೆ ಇದ್ದು, ಐಟಿ ನಗರವಾಗಿರುವ ಬೆಂಗಳೂರು ಈ ಕ್ಷೇತ್ರದಲ್ಲಿ ಜಾಗತಿಕ ಮಟ್ಟದ ತಾಣವಾಗುವ ಉಜ್ವಲ ಅವಕಾಶವಿದೆ. ಕೇಂದ್ರ ಸರಕಾರ ಹೇಗೆ ಸಮರ್ಥ ಪರಿಸರಸ್ನೇಹಿ ಜಲಜನಕ ನೀತಿಯನ್ನು ರೂಪಿಸಿದೆಯೋ ಹಾಗೆಯೇ ಇ.ವಿ.ಗೆ ಬೇಕಾಗಿರುವ ಹಾರ್ಡ್‌ವೇರ್‌ ಸಮಸ್ಯೆಯ ನಿವಾರಣೆಯನ್ನೂ ಆದ್ಯತೆಯ ಮೇರೆಗೆ ಕೈಗೆತ್ತಿಕೊಳ್ಳಬೇಕು ಎಂದು ಹೇಳಿದರು. .

ಬೌನ್ಸ್‌ ಕಂಪನಿಯ ಸ್ಥಾಪಕ ವಿವೇಕಾನಂದ ಹಲ್ಲೇಕೆರೆ ಮಾತನಾಡಿ, ಇನ್ನು ಕೆಲವೇ ವರ್ಷಗಳಲ್ಲಿ 20 ದಶಲಕ್ಷ ವಿದ್ಯುತ್‌ ಚಾಲಿತ ವಾಹನಗಳು ರಸ್ತೆಯ ಮೇಲಿರಲಿವೆ. ಪರಿಸರಸ್ನೇಹಿ ಮತ್ತು ಹೆಚ್ಚು ಖರ್ಚಿಲ್ಲದ ಸಂಚಾರ ವಾಹಕವಾಗಿರುವ ಇ.ವಿ.ವಾಹನಗಳನ್ನು ಜನರು ಸಹಜವಾಗಿಯೇ ಆರಿಸಿಕೊಳ್ಳುತ್ತಾರೆ ಎಂದರು. ಸಂವಾದದಲ್ಲಿ ಏಥರ್‌ ಎನರ್ಜಿ ಕಂಪನಿಯ ಸಹಸಂಸ್ಥಾಪಕ ತರುಣ್‌ ಮೆಹ್ತಾ ಸೇರಿದಂತೆ ಹಲವರು ಭಾಗವಹಿಸಿದ್ದರು.
 

click me!