ರೋಬೋಟ್‌ಗೆ ಸೌದಿ ಅರೇಬಿಯಾ ಪೌರತ್ವ!

By Suvarna Web DeskFirst Published Oct 28, 2017, 9:30 PM IST
Highlights

, ತಂತ್ರಜ್ಞನದಿಂದ ಕೆಲಸ ಮಾಡುವ ರೋಬೋಟ್'ವೊಂದಕ್ಕೆ ಸೌದಿ ಅರೇಬಿಯಾ ರಾಷ್ಟ್ರದ ಪೌರತ್ವ ನೀಡಿದ್ದು, ಅದಕ್ಕೆ ಸೋಫಿಯಾ ಎಂದು ನಾಮಕರಣ ಮಾಡಲಾಗಿದೆ.

ಜಪಾನ್ ಸೇರಿದಂತೆ ಕೆಲವು ರಾಷ್ಟ್ರಗಳು ಗಣಿಗಾರಿಕೆ ಸೇರಿ ಇತರ ಕಷ್ಟದ ಕೆಲಸಗಳಲ್ಲಿ ರೋಬೋಟ್‌ಗಳನ್ನು ಬಳಸಿಕೊಳ್ಳುವುದು ಹೊಸ ವಿಚಾರವೇನಲ್ಲ. ಆದರೆ, ತಂತ್ರಜ್ಞನದಿಂದ ಕೆಲಸ ಮಾಡುವ ರೋಬೋಟ್'ವೊಂದಕ್ಕೆ ಸೌದಿ ಅರೇಬಿಯಾ ರಾಷ್ಟ್ರದ ಪೌರತ್ವ ನೀಡಿದ್ದು, ಅದಕ್ಕೆ ಸೋಫಿಯಾ ಎಂದು ನಾಮಕರಣ ಮಾಡಲಾಗಿದೆ.

ಬ್ರಿಟಿಷ್ ನಟಿ ಆಡ್ರೀ ಹೆಪ್‌ಬರ್ನ್'ನಷ್ಟೇ ಚೆಲುವೆಯಾಗಿರುವ ಈ ರೋಬೋಟ್, ಮಾತನಾಡುವ ವೇಳೆ ನಟಿಯಂತೆಯೇ ಮುಖಭಾವ ವ್ಯಕ್ತಪಡಿಸುತ್ತದೆ. ಇದರ ಕೃತಕ ಬುದ್ಧಿಮತೆ ಪರೀಕ್ಷೆಗಾಗಿ ಪತ್ರಕರ್ತರೊಬ್ಬರು ಸಂದರ್ಶನ ನಡೆಸಿದ್ದು, ಪತ್ರಕರ್ತನ ಪ್ರತಿಯೊಂದು ಪ್ರಶ್ನೆಗೆ ಸಮರ್ಥವಾಗಿ ಉತ್ತರಿಸಿದ ರೋಬೋಟ್ ನೋಡುಗರ ನಿಬ್ಬೆರಗಾಗಿಸಿದೆ.

click me!