
ಸ್ಯಾಮ್‌ಸಂಗ್ ಸಂಸ್ಥೆಯ ಪ್ರೀಮಿಯಂ ಸ್ಮಾರ್ಟ್‌ಫೋನ್ Galaxy S25 5G ಬೆಲೆಯಲ್ಲಿ ಫ್ಲಿಪ್‌ಕಾರ್ಟ್ ಭಾರಿ ರಿಯಾಯಿತಿ ಘೋಷಿಸಿದೆ. ಭಾರತದಲ್ಲಿ ಮೊದಲ ಬಾರಿಗೆ 74,999 ರೂಪಾಯಿಗೆ ಬಿಡುಗಡೆಯಾಗಿದ್ದ ಈ ಫೋನ್‌ನ ಬೆಲೆ ಪ್ರಸ್ತುತ ಫ್ಲಿಪ್‌ಕಾರ್ಟ್‌ನಲ್ಲಿ ನೇರವಾಗಿ 12,000 ರೂಪಾಯಿ ಕಡಿಮೆಯಾಗಿ 62,999 ರೂಪಾಯಿಗೆ ಸಿಗುತ್ತಿದೆ. ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ.
ಇದರ ಜೊತೆಗೆ ಗ್ರಾಹಕರಿಗೆ ಹೆಚ್ಚುವರಿ ಬ್ಯಾಂಕ್ ಮತ್ತು ಎಕ್ಸ್‌ಚೇಂಜ್ ಆಫರ್‌ಗಳು ಲಭ್ಯವಿವೆ. ಅರ್ಹ ಬ್ಯಾಂಕ್ ಕಾರ್ಡ್ ಬಳಸಿದರೆ 5,000 ರೂಪಾಯಿ ಹೆಚ್ಚುವರಿ ರಿಯಾಯಿತಿ ಸಿಗಲಿದೆ. ಇಷ್ಟೇ ಅಲ್ಲದೆ, ನಿಮ್ಮ ಹಳೆಯ ಮೊಬೈಲ್‌ಗೆ 15,000 ರೂಪಾಯಿ ವಿನಿಮಯ ಮೌಲ್ಯ ಮತ್ತು 5,000 ರೂಪಾಯಿ ಎಕ್ಸ್‌ಚೇಂಜ್ ಬೋನಸ್ ಸಿಕ್ಕಿದರೆ, ಒಟ್ಟು 25,000 ರೂಪಾಯಿವರೆಗೆ ರಿಯಾಯಿತಿ ಪಡೆಯಬಹುದು. ಈ ಎಲ್ಲಾ ಕೊಡುಗೆಗಳು ಅನ್ವಯವಾದರೆ ನೀವು ಕೇವಲ 37,999 ರೂಪಾಯಿ ನಗದು ಪಾವತಿಸಿ ಈ ಫೋನ್ ಖರೀದಿಸಬಹುದು. ಆದರೆ, ನೀವು ಕೊಡುವ ಹಳೆಯ ಫೋನಿನ ಮೌಲ್ಯವನ್ನು ಲೆಕ್ಕಕ್ಕೆ ತಗೆದುಕೊಂಡರೆ ಈ ಫೋನ್‌ನ ನಿಜವಾದ ವೆಚ್ಚ 52,999 ರೂಪಾಯಿಗಳಾಗಿರುತ್ತದೆ.
ಗ್ಯಾಲಕ್ಷಿ S25 5G ಅತ್ಯಂತ ಆಕರ್ಷಕವಾದ 6.2-ಇಂಚಿನ ಫುಲ್-HD+ ಡೈನಾಮಿಕ್ AMOLED 2X ಡಿಸ್ಪ್ಲೇ ಹೊಂದಿದ್ದು, 120Hz ರಿಫ್ರೆಶ್ ರೇಟ್ ಬೆಂಬಲಿಸುತ್ತದೆ. ಇದು ಸ್ಯಾಮ್‌ಸಂಗ್‌ಗಾಗಿ ವಿಶೇಷವಾಗಿ ತಯಾರಿಸಲಾದ ಶಕ್ತಿಶಾಲಿ 'Snapdragon 8 Elite' ಪ್ರೊಸೆಸರ್‌ನಿಂದ ಚಾಲಿತವಾಗಿದ್ದು, 12GB RAM ಮತ್ತು Android 15 ಆಧಾರಿತ One UI 7 ಬೆಂಬಲದೊಂದಿಗೆ ಅತ್ಯಂತ ವೇಗವಾಗಿ ಕೆಲಸ ಮಾಡುತ್ತದೆ.
ಕ್ಯಾಮೆರಾ ವಿಚಾರದಲ್ಲಿ ಈ ಫೋನ್ ಮುಂಚೂಣಿಯಲ್ಲಿದೆ. ಹಿಂಭಾಗದಲ್ಲಿ 50MP ಮುಖ್ಯ ಕ್ಯಾಮೆರಾ, 12MP ಅಲ್ಟ್ರಾ-ವೈಡ್ ಮತ್ತು 3x ಜೂಮ್ ಸೌಲಭ್ಯವಿರುವ 10MP ಟೆಲಿಫೋಟೋ ಕ್ಯಾಮೆರಾಗಳನ್ನು ನೀಡಲಾಗಿದೆ. ಸೆಲ್ಫಿಗಾಗಿ 12MP ಮುಂಭಾಗದ ಕ್ಯಾಮೆರಾ ಇದ್ದು, 8K ಸ್ಪಷ್ಟತೆಯ ವಿಡಿಯೋ ರೆಕಾರ್ಡಿಂಗ್ ಮಾಡಬಹುದು. ಜೊತೆಗೆ 4,000mAh ಬ್ಯಾಟರಿ, 25W ಫಾಸ್ಟ್ ಚಾರ್ಜಿಂಗ್ ಹಾಗೂ ವೈರ್‌ಲೆಸ್ ಚಾರ್ಜಿಂಗ್ ಸೌಲಭ್ಯವೂ ಇದರಲ್ಲಿದೆ.
ನೀವು ಪಾವತಿಸುವ ಅಂತಿಮ ಬೆಲೆಯು ನಿಮ್ಮ ಬಳಿ ಇರುವ ಬ್ಯಾಂಕ್ ಕಾರ್ಡ್, ಎಕ್ಸ್‌ಚೇಂಜ್ ಮಾಡುವ ಹಳೆಯ ಫೋನಿನ ಸ್ಥಿತಿ ಮತ್ತು ನಿಮ್ಮ ಲೊಕೇಷನ್ ಮೇಲೆ ಆಧಾರಿತವಾಗಿರುತ್ತದೆ. ಆದ್ದರಿಂದ ಆರ್ಡರ್ ಮಾಡುವ ಮುನ್ನ ಫ್ಲಿಪ್‌ಕಾರ್ಟ್‌ನಲ್ಲಿ ಅಂತಿಮ ಮೊತ್ತವನ್ನು ಒಮ್ಮೆ ಪರಿಶೀಲಿಸಿಕೊಳ್ಳಿ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.