ಪೆಗಾಸಸ್ ಬೈಕ್ ಮಾಲೀಕರಿಗೆ ರಾಯಲ್ ಎನ್‌ಫೀಲ್ಡ್ ಮಾಡಿತಾ ಮೋಸ?

By Web DeskFirst Published 3, Sep 2018, 4:11 PM IST
Highlights

ರಾಯಲ್ ಎನ್‌ಫೀಲ್ಡ್ ಬೈಕ್ ಅಂದರೆ ಎಲ್ಲರಿಗೂ ಪ್ರೀತಿ. ಇದೀಗ ಇದೇ ರಾಯಲ್ ಎನ್‌ಫೀಲ್ಡ್ ವಿರುದ್ಧ ಮಾಲೀಕರು ತಿರುಗಿಬಿದ್ದಿದ್ದಾರೆ. ಪೆಗಾಸಸ್ 500 ಬೈಕ್ ಖರೀದಿಸಿದ ಗ್ರಾಹಕರು ಇದೀಗ ರಾಯಲ್ ಎನ್‌ಫೀಲ್ಡ್ ವಿರುದ್ಧ ದೂರು ನೀಡಿದ್ದಾರೆ.

ಬೆಂಗಳೂರು(ಸೆ.03): ಭಾರತದಲ್ಲಿ ಇತ್ತೀಚೆಗಷ್ಟೇ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಬೈಕ್ ಬಿಡುಗಡೆ ಮಾಡಿದೆ. ಎಬಿಎಸ್ ಬ್ರೇಕ್ ಟೆಕ್ನಾಲಜಿ ಹೊಂದಿರುವ ನೂತನ ಕ್ಲಾಸಿಕ್ 350 ಸಿಗ್ನಲ್ಸ್ ಬೈಕ್‌ಗೆ ಭಾರಿ ಬೇಡಿಕೆ ಇದೆ.

ರಾಯಲ್ ಎನ್‌ಫೀಲ್ಡ್ 350 ಎಬಿಎಸ್ ಬೈಕ್ ಬಿಡುಗಡೆಯಾದ ಕೆಲ ವಾರಗಳ ಹಿಂದೆ ರಾಯಲ್ ಎನ್‌ಫೀಲ್ಡ್ ಪೆಗಾಸಸ್ 500 ಲಿಮಿಟೆಡ್ ಎಡಿಶನ್ ಬೈಕ್ ಬಿಡುಗಡೆಯಾಗಿತ್ತು. ಭಾರತದಲ್ಲಿ ಕೇವಲ 250 ಬೈಕ್‌ಗಳು ಮಾರಾಟಕ್ಕೆ ಲಭ್ಯವಿತ್ತು. 

ಪೆಗಾಸಸ್ 500 ಬೈಕ್‌ ಬೆಲೆ 2.40 ಲಕ್ಷ ರೂಪಾಯಿ. ಅಂದರೆ ನೂತನ ಕ್ಲಾಸಿಕ್ 350 ಎಬಿಎಸ್ ಬೈಕ್‌ಗಿಂತ 80,000 ರೂಪಾಯಿ ಹೆಚ್ಚಿಗೆ ನೀಡಿ ಪೆಗಾಸಸ್ ಖರೀದಿಸಿದ್ದಾರೆ. ಆದರೆ ಪೆಗಾಸಸ್ ಬೈಕ್‌ನಲ್ಲಿ ಎಬಿಎಸ್ ಸೌಲಭ್ಯವಿಲ್ಲ. ಎರಡು ವಾರದ ಬಳಿಕ ಬಿಡುಗಡೆಯಾಗ ಕ್ಲಾಸಿಕ್ 350 ಬೈಕ್‌ನಲ್ಲಿ ಈ ಸೌಲಭ್ಯವಿದೆ.

ಎಬಿಎಸ್ ಸೌಲಭ್ಯವಿಲ್ಲದ ಪೆಗಾಸಸ್ ಬೈಕ್ ಖರೀದಿಸಿದ ಮಾಲೀಕರು ಇದೀಗ ರಾಯಲ್ ಎನ್‌ಫೀಲ್ಡ್ ವಿರುದ್ಧ ದೂರು ಸಲ್ಲಿಸಿದ್ದಾರೆ.  ರಾಯಲ್ ಎನ್‌ಫೀಲ್ಡ್ ತಮಗೆ ಮೋಸ ಮಾಡಿದೆ. ಗರಿಷ್ಠ ಬೆಲೆ ಪಡೆದು ಎಬಿಎಸ್ ಅಳವಡಿಸಿದೆ ಬೈಕ್ ಮಾರಾಟ ಮಾಡಿದೆ ಎಂದು ಲಿಖಿತ ದೂರು ನೀಡಿದ್ದಾರೆ.

ಭಾರತದ ಪೆಗಾಸಸ್ ಬೈಕ್ ಮಾಲೀಕರು ದೂರಿನ ಜೊತೆಗೆ ಎರಡು ಬೇಡಿಕೆ ಇಟ್ಟಿದ್ದಾರೆ. ಪೆಗಾಸಸ್ ಬೈಕ್ ವಾಪಾಸ್ ಪಡೆದು ಎಬಿಎಸ್ ಅಳವಡಿಸಲು ಸೂಚಿಸಿದ್ದಾರೆ. ಇಲ್ಲವಾದಲ್ಲಿ ತಮಗೆ ಹಣ ವಾಪಾಸ್ ನೀಡಬೇಕೆಂದು ಆಗ್ರಹಿಸಿದ್ದಾರೆ. 

ಪೆಗಾಸಸ್ ಮಾಲೀಕರ ಪತ್ರಕ್ಕೆ ರಾಯಲ್ ಎನ್‌ಫೀಲ್ಡ್ ಉತ್ತರ ನೀಡಿದೆ. ಪೆಗಾಸಸ್ ಹಾಗೂ ಕ್ಲಾಸಿಕ್ ಸಿಗ್ನಲ್ಸ್ ಬೈಕ್ 500 ಹಾಗೂ 350 ಸಿಸಿ ಬೈಕ್. ಬೆಲೆಗೆ ತಕ್ಕಂತೆ ಎರಡೂ ಬೈಕ್‌ಗಳಲ್ಲಿ ಫೀಚರ್ಸ್ ಅಳವಡಿಸಲಾಗಿದೆ ಎಂದು ರಾಯಲ್ ಎನ್‌ಫೀಲ್ಡ್ ಹೇಳಿದೆ.
 

Last Updated 9, Sep 2018, 9:30 PM IST