ಆಗಸ್ಟ್‌ನಲ್ಲಿ ರಾಯಲ್ ಎನ್‌ಫೀಲ್ಡ್ ಬೈಕ್ ಮಾರಾಟವಾಗಿದೆಷ್ಟು?

By Web DeskFirst Published 2, Sep 2018, 6:13 PM IST
Highlights

ಭಾರತದಲ್ಲಿ ಎಲ್ಲೇ ಸಂಚರಿಸಿದರೂ ನಿಮಗೆ ರಾಯಲ್ ಎನ್‌ಫೀಲ್ಡ್ ಬೈಕ್‌ಗಳು ಕಾಣಸಿಗುತ್ತವೆ. ಅಷ್ಟರ ಮಟ್ಟಿಗೆ ರಾಯಲ್ ಎನ್‌ಫೀಲ್ಡ್ ಭಾರತದಲ್ಲಿ ಪ್ರಖ್ಯಾತಿ ಹೊಂದಿದೆ. ಇದೀಗ ಆಗಸ್ಟ್ ತಿಂಗಳಲ್ಲಿ ಮಾರಾಟವಾದ ರಾಯಲ್ ಎನ್‌ಪೀಲ್ಡ್ ಸಂಖ್ಯೆ ಹೊರಬಿದ್ದಿದೆ. ಎಷ್ಟು ಬೈಕ್ ಪ್ರೀಯರು ಬುಲೆಟ್ ಬೈಕ್ ಖರೀದಿಸಿದ್ದಾರೆ? ಇಲ್ಲಿದೆ ವಿವರ.

ಬೆಂಗಳೂರು(ಸೆ.02): ಭಾರತದಲ್ಲಿ ರಾಯಲ್ ಎನ್‌ಫೀಲ್ಡ್ ಬೈಕ್ ಪ್ರತಿ ತಿಂಗಳು ಗರಿಷ್ಠ ಮಾರಾಟ ದಾಖಲೆಯನ್ನ ಬರೆಯುತ್ತಿದೆ. ಸದ್ಯ ಎಲ್ಲಿ ನೋಡಿದರೂ ರಾಯಲ್ ಎನ್‌ಫೀಲ್ಡ್ ಬೈಕ್‌ಗಳು ಕಾಣಸಿಗುತ್ತಿದೆ. ಇದೀಗ ಆಗಸ್ಟ್ ತಿಂಗಳಲ್ಲಿ ಮಾರಾಟವಾದ ರಾಯಲ್ ಎನ್‌ಫೀಲ್ಡ್ ಸಂಖ್ಯೆ ಹೊರಬಿದ್ದಿದೆ.

ಆಗಸ್ಟ್ ತಿಂಗಳಲ್ಲಿ ಭಾರತದಲ್ಲಿ ರಾಯಲ್ ಎನ್‌ಫೀಲ್ಡ್ ಮಾರಾಟ ಶೇಕಡ 2 ರಷ್ಟು ಏರಿಕೆ ಕಂಡಿದೆ. ಅಂದರೆ ಕಳೆದ ತಿಂಗಳು  ಒಟ್ಟು 69,377 ಬೈಕ್‌ಗಳನ್ನ ಕಂಪೆನಿ ಮಾರಾಟ ಮಾಡಿದೆ.   2017ರ ಆಗಸ್ಟ್ ತಿಂಗಳಲ್ಲಿ ಕಂಪೆನಿ  67,977 ಬೈಕ್ ಮಾರಾಟ ಮಾಡಿತ್ತು.

2018 ರ ಆಗಸ್ಟ್‌ನಲ್ಲಿ 1,105 ಬೈಕ್‌ಗಳನ್ನ ರಫ್ತು ಮಾಡಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಶೇಕಡಾ 15 ರಷ್ಟು ಏರಿಕೆ ಕಂಡಿದೆ.  ಭಾರತದಲ್ಲಿ ಗರಿಷ್ಠ ಮಾರಾಟವಾಗುತ್ತಿರುವ ರಾಯಲ್ ಎನ್‌ಫೀಲ್ಡ್ ಆದಾಯದಲ್ಲೂ ಏರಿಕೆ ಕಂಡಿದೆ.

ಜೂನ್ 2018 ರಲ್ಲಿ ಕೊನೆಗೊಂಡ ತ್ರೈಮಾಸಿಕದಲ್ಲಿ ರಾಯಲ್ ಎನ್‌ಫೀಲ್ಡ್ ಆದಾಯ ಶೇಕಡಾ 27 ರಷ್ಟು ಹೆಚ್ಚಳವಾಗಿದೆ. ಕಂಪೆನಿ ತ್ರೈಮಾಸಿಕದಲ್ಲಿ  2,548 ಕೋಟಿ ರೂಪಾಯಿ ಆದಾಯಗಳಿಸಿದೆ. 
 

Last Updated 9, Sep 2018, 8:47 PM IST