
ಇದಾಗಲೇ ಎಲ್ಲಾ ಕ್ಷೇತ್ರಗಳಲ್ಲಿಯೂ ರೋಬೋಟ್, ಕೃತಕ ಬುದ್ಧಿಮತ್ತೆ ಕಾಲಿಟ್ಟಾಗಿದೆ. ಇದರಿಂದ ಇದಾಗಲೇ ಲಕ್ಷ ಲಕ್ಷ ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದಾರೆ. ಇನ್ನೂ ಹಲವಾರು ದೈತ್ಯ ಟೆಕ್ ಕಂಪೆನಿಗಳು ಜನರ ಬದಲಿಗೆ ಎಐ ಬಳಕೆ ಮಾಡುತ್ತಿರುವ ಕಾರಣದಿಂದ ಸಾಫ್ಟ್ವೇರ್ ಎಂಜಿನಿಯರಿಂಗ್ ಕಲಿಯುತ್ತಿರುವವರಿಗೆ ಆತಂಕ ಶುರುವಾಗಿದೆ. ಕರ್ನಾಟಕದಲ್ಲಿಯೇ ಹೇಳುವುದಾದರೆ ಕೇವಲ 17 ಪರ್ಸೆಂಟ್ ಸಾಫ್ಟ್ವೇರ್ ಎಂಜಿನಿಯರಿಂಗ್ ಕಲಿಯುತ್ತಿರುವವರಿಗೆ ಮಾತ್ರ ಉದ್ಯೋಗ ಸಿಗುತ್ತದೆ ಎಂದು ಈಚೆಗೆ ವರದಿ ಬಂದಿದೆ.
ಅದು ಒಂದೆಡೆಯಾದರೆ ಇದಾಗಲೇ ಹೋಟೆಲ್ಗಳಲ್ಲಿ ಆಹಾರ ಸರಬರಾಜು ಮಾಡಲು ರೋಬೋಟ್ ಬಂದಾಗಿದೆ. ಬೆಂಗಳೂರಿನಲ್ಲಿಯೂ ಇದರ ಪ್ರಯೋಗ ನಡೆದಿದೆ. ಆದರೆ ಇದೀಗ ಶಾಕಿಂಗ್ ಎನ್ನುವಂತೆ ಫುಡ್ ಡೆಲವರಿ ಬಾಯ್ಸ್ ಕೆಲಸವನ್ನೂ ರೋಬೋಟ್ ಕಸಿದುಕೊಳ್ಳತ್ತಾ ಎನ್ನುವ ಆತಂಕ ಎದುರಾಗಿದೆ. ಅದಕ್ಕೆ ಕಾರಣ ಯುವತಿಯೊಬ್ಬರು ಹಾಕಿರುವ ವಿಡಿಯೋ.
ಇಂದು ಹೆಚ್ಚಿನವರಿಗೆ ಮನೆಯಲ್ಲಿಯೇ ತರಿಸಿಕೊಂಡು ತಿನ್ನುವ ಅಭ್ಯಾಸ. ವಯಸ್ಸಾದವರು ಕಷ್ಟಪಟ್ಟಾದರೂ ವಾಕಿಂಗ್ ಮಾಡುತ್ತಾ ಇದ್ದರೆ, ಯುವಕ-ಯುವತಿಯರಿಗೆ ಹೋಟೆಲ್ಗೂ ಹೋಗಲು ಬೋರ್, ಮನೆಯಲ್ಲಿಯೂ ಅಡುಗೆ ಮಾಡಿಕೊಳ್ಳಲು ಆಗದ ಕೆಲಸ. ಆದ್ದರಿಂದ ಕುಳಿತಲ್ಲಿಯೇ ತರಿಸಿಕೊಂಡು ತಿನ್ನುವವರ ಸಂಖ್ಯೆ ಹೆಚ್ಚಾಗಿದ್ದರಂತೆ, ಇಂದು ಫುಡ್ ಡೆಲವರಿಯನ್ನು ಸಹಸ್ರಾರು ಮಂದಿ ನಂಬಿದ್ದಾರೆ. ಅವರ ಉದ್ಯೋಗಕ್ಕೂ ಶೀಘ್ರದಲ್ಲಿಯೇ ಆತಂಕ ಎದುರಾಗಲಿದೆಯೇ ಎನ್ನುವ ಪ್ರಶ್ನೆ ಈ ವಿಡಿಯೋ ಹುಟ್ಟುಹಾಕಿದೆ.
ಇದರಲ್ಲಿ ಯುವತಿ ನಾನು ಮೆಕ್ಡಾನಲ್ಸ್ನಿಂದ ಫುಡ್ ಆರ್ಡರ್ ಮಾಡಿದ್ದೆ. ರೋಬೋಟ್ ಬಂದು ಕೊಡತ್ತೆ ಎಂದಿದ್ದಾರೆ. ನೋಡೋಣ ಹೇಗಿರತ್ತೆ ಎಂದು ಬಾಗಿಲು ತೆರೆದಾಗ ಬಾಗಿಲಿನ ಎದುರಿಗೆ ರೋಬೋಟ್ ನಿಂತಿತ್ತು. ಅಲ್ಲಿ OTP ಹಾಕಿ ಒಂದು ಬಟನ್ ಪ್ರೆಸ್ ಮಾಡುತ್ತಿದ್ದಂತೆಯೇ ಆಕೆ ಆರ್ಡರ್ ಮಾಡಿದ ಫುಡ್ ಓಪನ್ ಆಯಿತು. ಅದನ್ನು ತೆಗೆದುಕೊಂಡು, ಅಲ್ಲಿಯೇ ರೇಟಿಂಗ್ಸ್ ಹಾಕಿದ ಯುವತಿ, ರೋಬೋಟ್ಗೆ ಗುಡ್ಬೈ ಹೇಳಿದ್ದಾರೆ.
ಅಂದಹಾಗೆ ಕೊನೆಯಲ್ಲಿ ನಾನು ಇರುವುದು ಚೀನಾದಲ್ಲಿ ಎಂದು ಯುವತಿ ಹೇಳಿದ್ದಾರೆ. ಹಾಗೆಂದು ಇದು ಚೀನಾದಲ್ಲಿ ಆಗಿದ್ದಾ, ನಾವ್ಯಾಕೆ ತಲೆಕೆಡಿಸಿಕೊಳ್ಳಬೇಕು ಎನ್ನುವಂತಿಲ್ಲ. ಇಂಥ ಟೆಕ್ನಾಲಾಜಿಗಳು ಶೀಘ್ರದಲ್ಲಿ ಎಲ್ಲಾ ದೇಶಗಳಲ್ಲಿಯೂ ಹರಡುತ್ತದೆ. ಆದ್ದರಿಂದ ಭಾರತಕ್ಕೂ ಇದು ಶೀಘ್ರದಲ್ಲಿ ಕಾಲಿಟ್ಟರೆ ಅಚ್ಚರಿ ಏನಿಲ್ಲ. ವಿಡಿಯೋ ಇಲ್ಲಿದೆ ನೋಡಿ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.