
ಮುಂಬೈ: ಕೇಬಲ್ ಟೀವಿ ಮತ್ತು ಅಂತರ್ಜಾಲ ಕ್ಷೇತ್ರವನ್ನು ದೊಡ್ಡದಾಗಿ ಪ್ರವೇಶಿಸಲು ಸಜ್ಜಾಗಿರುವ ರಿಲಯನ್ಸ್, ಇದೀಗ ಭಾರತದ ಅತಿದೊಡ್ಡ ಕೇಬಲ್ ಆಪರೇಟರ್ ಹಾಥ್‌ವೇ ಖರೀದಿಸಲು ಮಾತುಕತೆ ನಡೆಸುತ್ತಿದೆ ಎಂದು ಹೇಳಲಾಗಿದೆ.
ಈ ಮೂಲಕ ತನ್ನ ಬ್ರಾಡ್ ಬಾಂಡ್ ಸೇವೆಯಾಗಿರುವ ಗಿಗಾಫೈಬರ್ ಸ್ಪೀಡ್ ಅನ್ನು ದೊಡ್ಡ ಮಟ್ಟದಲ್ಲಿ ಮತ್ತಷ್ಟುಹೆಚ್ಚಿಸಲು ನಿರ್ಧರಿಸಿದೆ. ಈ ಬಗ್ಗೆ ಹ್ಯಾಥ್‌ವೇ ಮತ್ತು ರಿಲಯನ್ಸ್ ಸಂಸ್ಥೆಗಳು ಪ್ರತಿಕ್ರಿಯಿಸಲು ನಿರಾಕರಿಸಿವೆ. ಆದಾಗ್ಯೂ, ಹ್ಯಾಥ್‌ವೇ ಖರೀದಿಗೆ ರಿಲಯನ್ಸ್ ಮಾತುಕತೆ ನಡೆಸಿರುವುದು ಹೌದು ಎಂದು ಹೇಳುತ್ತವೆ ಮೂಲಗಳು.
ಅಲ್ಲದೆ, ಕೇಬಲ್ ಟೀವಿ ಉದ್ಯಮದ ಮೇಲೆ ರಿಲಯನ್ಸ್ ಚಿತ್ತ ಹರಿಸಿರುವುದು ಇದೇ ಮೊದಲನೇ ಬಾರಿಯೇನಲ್ಲ. ಈ ಹಿಂದೆಯೂ ಡೆನ್ ನೆಟ್‌ವರ್ಕ್ ಅನ್ನು ರಿಲಯನ್ಸ್ ಖರೀದಿಸುವ ಸಾಧ್ಯತೆ ಬಗ್ಗೆ ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ವರದಿಯಾಗಿತ್ತು.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.