ಡೈರಿ ಮಿಲ್ಕ್ ಜೊತೆಗೆ ಉಚಿತ ಡೇಟಾ: ಜಿಯೋದ ಹೊಸ ಆಟ

By Web DeskFirst Published 7, Sep 2018, 12:56 PM IST
Highlights

ಜಿಯೋ ಇದೀಗ ಭರ್ಜರಿ ಆಫರ್ ಒಂದನ್ನು ನೀಡುತ್ತಿದೆ ಕ್ಯಾಡ್ ಬರಿಯೊಂದಿಗೆ ಸೇರಿ ಗ್ರಾಹಕರ ಬಾಯಲ್ಲಿ ನೀರೂರಿಸಲು ಸಜ್ಜಾಗಿದೆ. 

ಮುಂಬೈ :  ದೇಶದಲ್ಲಿ ಟೆಲಿಕಾಂ ಮಾರುಕಟ್ಟೆಯಲ್ಲೇ ಉಚಿತ ಡೇಟಾ ಸೌಲಭ್ಯವನ್ನು ನೀಡಿ ಸಂಚಲನವನ್ನೇ ಉಂಟು ಮಾಡಿದ್ದ ರಿಲಾಯನ್ಸ್ ಜಿಯೋ ಇದೀಗ ಮತ್ತೊಂದು ಆಫರ್ ಪ್ರಕಟಿಸಿದೆ. 

ಕ್ಯಾಡ್ ಬರಿ ಸಹಭಾಗಿತ್ವದಲ್ಲಿ 1ಜಿಬಿ 4ಜಿ ಡೇಟಾ ವನ್ನು ಕ್ಯಾಡ್ ಬರಿ ಡೈರಿ ಮಿಲ್ಕ್ ಚಾಕೊಲೇಟ್ ಜೊತೆಗೆ ಉಚಿತವಾಗಿ ನೀಡುವ ವಿನೂತನ ಆಫರ್ ನೀಡಲಿದೆ. 

ಡೈರಿ ಮಿಲ್ಕ್ ಫ್ರೂಟ್ ಅಂಡ್ ನಟ್ , ರೆಗ್ಯಲರ್ ಚಾಕೋಲೇಟ್, ಕ್ರ್ಯಾಕಲ್  ಕೊಂಡಲ್ಲಿ ನೀವು ಈ ಉಚಿತ ಆಫರ್ ಪಡೆದುಕೊಳ್ಳಬಹುದು. ಈ ಹೊಸ ಆಫರ್  ಅಡಿಯಲ್ಲಿ 5 ರು.ನಿಂದ 100 ರುವರೆಗಿನ ಚಾಕೋಲೇಟ್ ಗಳು ಬರಲಿವೆ. ಸೆಪ್ಟೆಂಬರ್ 30ರವರೆಗೆ ಈ ಆಫರ್ ಇರಲಿದೆ.  

ಚಾಕೊಲೇಟ್ ಕೊಂಡಾಗ ಅದರ ರ್ಯಾಫರ್ ಮೇಲೆ ಈ ಬಗ್ಗೆ ನೀಡಲಾಗಿರುತ್ತದೆ. ನಂತರ ಮೈ ಜಿಯೋ ಆ್ಯಪ್ ಓಪನ್ ಮಾಡಿ ನಂತರ ರ್ಯಾಪರ್ ಮೇಲಿನ ಕೋಡ್ ಸ್ಕ್ಯಾನ್ ಮಾಡಿದಲ್ಲಿ 1 ಜಿಬಿಯ 4ಜಿ ಡೇಟಾ ಸೌಲಭ್ಯ ನಿಮ್ಮದಾಗಲಿದೆ. 

Last Updated 9, Sep 2018, 8:53 PM IST