
ಮುಂಬೈ: ದೇಶದ ಡಿಜಿಟಲ್ ಸೇವೆಯಲ್ಲಿ ಇಂದು ಹೊಸ ಕ್ರಾಂತಿಯೊಂದು ಸೃಷ್ಟಿಯಾಗಿದೆ. ಬಹುನಿರೀಕ್ಷಿತ ರಿಲಾಯನ್ಸ್ ಜಿಯೋ 4G ಇಂದು ಬಿಡುಗಡೆಗೊಂಡಿದ್ದು, ಮುಂಬೈನಲ್ಲಿ ಮುಖೇಶ್ ಅಂಬಾನಿ ನೇತೃತ್ವದಲ್ಲಿ ಸಮಾರಂಭ ನಡೆಯಿತು.
ಸಮಾರಂಭದಲ್ಲಿ ಷೇರುದಾರರನ್ನು ಉದ್ದೇಶಿಸಿ ಮಾತನಾಡಿದ, ರಿಲಾಯನ್ಸ್ ಮುಖ್ಯಸ್ಥ ಮುಖೇಶ್ ಅಂಬಾನಿ, ಡಿಜಿಟಲ್ ಸೇವೆಯಲ್ಲಿ ಇದೊಂದು ಹೊಸ ಕ್ರಾಂತಿಯಾಗಿದೆ. ಪ್ರತಿಯೊಬ್ಬರಿಗೂ ಈ ಮೊಬೈಲ್ ಸಿಗುವಂತೆ ಮಾಡುವುದು ನಮ್ಮ ಗುರಿಯಾಗಿದೆ ಎಂದಿದ್ದಾರೆ.
ಜಿಯೋ 4G ವಿಶೇಷಗಳು: 18 ಸಾವಿರ ನಗರಗಳಲ್ಲಿ ಜಿಯೋ 4G ಸಂಪರ್ಕ ದೊರೆಯಲಿದ್ದು, ಕೇವಲ 2,999 ರೂ.ಗೆ 4ಜಿ ಜಿಯೋ ಸ್ಮಾರ್ಟ್ಫೋನ್ ಲಭ್ಯವಾಗುತ್ತಿದೆ. 90 ದಿನಗಳು ಫ್ರಿ ಇನ್ಕಮಿಂಗ್, ಔಟ್ಗೋಯಿಂಗ್ ಕರೆಗಳು ಕೊಡುಗೆಯಾಗಿ ನೀಡಲಿದ್ದು, ನಂತರ 50 ರೂಪಾಯಿಗೆ 1ಜಿಬಿ ಡೇಟಾ ಇಂಟರ್ನೆಟ್ ಫ್ರಿ ನೀಡುವುದಾಗಿ ಕಂಪನಿ ತಿಳಿಸಿದೆ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.