ಜಿಯೋ - ಒನ್‌ಪ್ಲಸ್‌ನಿಂದ ಬಂಪರ್ ಆಫರ್-ಗ್ರಾಹರಿಗೆ 9000 ರೂ ಉಳಿತಾಯ!

By Web Desk  |  First Published May 14, 2019, 4:48 PM IST

ಜಿಯೋ ಹಾಗೂ ಒನ್‌ಪ್ಲಸ್ ಹೊಸ ಆಫರ್ ನೀಡುತ್ತಿದೆ. ಈ ಆಫರ್ ಬಳಸಿಕೊಂಡರೆ ಗ್ರಹಾಕರಿಗೆ ಬರೊಬ್ಬರಿ 9,300 ರೂಪಾಯಿ ಉಳಿತಾಯವಾಗಲಿದೆ. ಹಾಗಾದರೆ ನೂತನ ಆಫರ್ ಏನು? ಇಲ್ಲಿದೆ ಸಂಪೂರ್ಣ ಮಾಹಿತಿ.
 


ಬೆಂಗಳೂರು(ಮೇ.14): ಪ್ರಮುಖ ಪ್ರೀಮಿಯಂ ಸ್ಮಾರ್ಟ್‌ಫೋನ್ ತಯಾರಕ ಕಂಪನಿಯಾದ ಒನ್‌ಪ್ಲಸ್, ಪ್ರಪಂಚದ ಅತಿದೊಡ್ಡ ಮೊಬೈಲ್ ಡಾಟಾ ನೆಟ್‌ವರ್ಕ್‌ ಜಿಯೋ ಜೊತೆಗಿನ ಸಹಯೋಗವನ್ನು ಮುಂದುವರೆಸಿದೆ.  ಮಿತಿಯಿಲ್ಲದ ವೇಗದ ಡೇಟಾದೊಂದಿಗೆ ಒನ್‌ಪ್ಲಸ್ ಮತ್ತು ಜಿಯೋ ಬಳಕೆದಾರರಿಗೆ ಗ್ರಾಹಕ-ಸ್ನೇಹಿ ಕೊಡುಗೆಯೊಂದನ್ನು ನೀಡುತ್ತಿದೆ. ಒನ್‌ಪ್ಲಸ್‌ 7 ಸರಣಿಯ ಸ್ಮಾರ್ಟ್‌ಫೋನ್ ಬಿಡುಗಡೆಯ ಸಂದರ್ಭದಲ್ಲಿ ತನ್ನ ಗ್ರಾಹಕರು ಒಂದು ಅನನ್ಯ ಆಫರ್ ನೀಡುವ ಸಲುವಾಗಿ ‘ಜಿಯೋ-ಒನ್‌ಪ್ಲಸ್ 7  ಸೀರಿಸ್ ಬಿಯಾಂಡ್ ಸ್ವೀಡ್ ಆಫರ್’ ಸೇವೆ ನೀಡುತ್ತಿದೆ. 

ಇದನ್ನೂ ಓದಿ: ತಕ್ಷಣ ನಿಮ್ಮ Whatsapp ಅಪ್ಡೇಟ್ ಮಾಡಿ, ಇಲ್ಲವೇ ಡೇಟಾ ಕಳವಾಗೋದು ಗ್ಯಾರಂಟಿ

Tap to resize

Latest Videos

ಒನ್‌ಪ್ಲಸ್ 7, ಒನ್‌ಪ್ಲಸ್ 7 ಪ್ರೋ ಮತ್ತು ಜಿಯೋ ಬಳಕೆದಾರಿಗೆ ಈ ಆಫರ್ ದೊರೆಯಲಿದೆ.  ಈ ಆಫರ್‌ನಲ್ಲಿ ಜಿಯೋ ಬಳಕೆದಾರರು ರೂ.299ಗೆ ಮೊದಲ ಪ್ರೀಪೇಯ್ಡ್‌ ರಿಚಾರ್ಜ್ ಮಾಡಿಸಿದರೆ ರೂ, 5,400 ತ್ವರಿತ ಕ್ಯಾಷ್‌ಬ್ಯಾಕ್ ದೊರೆಯಲಿದೆ. ಇದು ಮೈ ಜಿಯೋ ಆ್ಯಪ್‌ನಲ್ಲಿ ಕಾಣಿಸಿಕೊಳ್ಳಲಿದ್ದು, ರೂ.150 ಮೌಲ್ಯದ 36 ಕೂಪನ್‌ಗಳು ಬಳಕೆದಾರರಿಗೆ ದೊರೆಯಲಿದೆ. 

ಕೂಪನ್‌ಗಳನ್ನು ಬಳಕೆದಾರರು ರೀಚಾರ್ಜ್ ಮಾಡಿಕೊಳ್ಳುವ ಸಂದರ್ಭದಲ್ಲಿ ಬಳಸಬಹುದಾಗಿದೆ. ಇದರಿಂದಾಗಿ ಗ್ರಾಹಕರಿಗೆ ರೂ. 299 ಮೌಲ್ಯದ ರೀಚಾರ್ಜ್‌ ಕೇಲವ ರೂ.149ಕ್ಕೆ ದೊರೆಯಲಿದೆ. ಈ ಯೋಜನೆಯು 4G ವೇಗದ 3GB  ಡೇಟಾವನ್ನು ಪ್ರತಿ ನಿತ್ಯ ನೀಡಲಿದ್ದು, ಈ ಆಫರ್ 28 ದಿನಗಳ ವ್ಯಾಲಿಡಿಟಿಯನ್ನು ಹೊಂದಿರಲಿದೆ. ಅಲ್ಲದೇ ಅನಿಯಮಿತ ಕರೆಗಳು, ಎಸ್ಎಂಎಸ್ ಮತ್ತು ಜಿಯೋ ಟಿವಿ, ಜಿಯೋ ಸಿಮೆನಾ, ಜಿಯೋ ನ್ಯೂಸ್ ಮತ್ತು ಇತರಂತಹ ಜಿಯೋಗಳ ವಿಶೇಷ ಅಪ್ಲಿಕೇಶನ್‌ಗಳನ್ನು ಉಚಿತವಾಗಿ ಬಳಕೆ ಮಾಡಿಕೊಳ್ಳುವ ಅವಕಾಶವು ದೊರೆಯಲಿದೆ. ಇದರೊಂದಿಗೆ ಈ ಆಫರ್ ನಲ್ಲಿ ರೂ. ರೂ 3,900 ಮೌಲ್ಯದ ಹೆಚ್ಚುವರಿ ಪಾಲುದಾರ ಪ್ರಯೋಜನಗಳು ದೊರೆಯಲಿದೆ. 

ಇದನ್ನೂ ಓದಿ: ಬಿಡುಗಡೆಗೆ ಬರೇ ನಾಲ್ಕೇ ದಿನ ಬಾಕಿ; ಮೊಬೈಲ್ ಪ್ರಿಯರ ದಿಲ್ ಧಕ್ ಧಕ್!

ಜೂಮ್‌ ಕಾರ್ ನಲ್ಲಿ ರೂ.2000 ಅಥವಾ 20% ವರೆಗೆ ಕಡಿತವನ್ನು, ಇಸಿ ಮೈಟ್ರಿಪ್ ನಲ್ಲಿ ಫ್ಲೈಟ್ ಟಿಕೆಟ್‌ಗಳು , ಹೋಟೆಲ್ ಬುಕಿಂಗ್‌ನಲ್ಲಿ ರೂ.1550 ಮತ್ತು ಬಸ್ ಬುಕಿಂಗ್ನಲ್ಲಿ 15% ಕಡಿತವವನ್ನು ಮತ್ತು ಚಂಬಕ್‌ನಲ್ಲಿ ರೂ. 1699 ವೆಚ್ಚ ಮಾಡಿದರೆ ರೂ. 350 ರಷ್ಟು ಕಡಿತವನ್ನು ಪಡೆಯಬಹುದಾಗಿದೆ.

ಜಿಯೋ ಬಿಯಾಂಡ್ ಸ್ಪೀಡ್ ಆಫರ್ ಪಡೆಯಲು ಈಗಾಗಲೇ ಜಿಯೋ ಬಳಸುತ್ತಿರುವ ಗ್ರಾಹಕರು ಮತ್ತು ಹೊಸ ಜಿಯೋ ಬಳಕೆದಾರರು ಒನ್‌ಪ್ಲಸ್ 7 ಮತ್ತು ಒನ್‌ಪ್ಲಸ್ 7 ಪ್ರೋ ಸ್ಮಾರ್ಟ್‌ಪೋನ್ ಅನ್ನು ಮೇ 19, 2019 ನಂತರ ಖರೀದಿಸಬೇಕಾಗಿದೆ. ಖರೀದಿಸಿದ ನಂತರದಲ್ಲಿ ಈ ಯೋಜನೆಯ ಲಾಭವನ್ನು ಪಡೆಯಲು www.jio.com, ರಿಲಯನ್ಸ್ ಡಿಜಿಟಲ್ ಅಂಗಡಿಗಳು, ಮೈಜಿಯೋ ಸ್ಟೋರ್ಸ್, ಜಿಯೋ ಚಿಲ್ಲರೆ ವ್ಯಾಪಾರಿಗಳು ಮತ್ತು ಮೈಜಿಯೊ ಅಪ್ಲಿಕೇಶನ್ನಲ್ಲಿ ರೂ.299ಕ್ಕೆ ಮೊದಲ ರೀಚಾರ್ಜ್ ಮಾಡಿಸಿಕೊಳ್ಳಬೇಕಾಗಿದೆ. ನಂತರ ವೋಚರ್ ಮೂಲಕ ರಿಚಾರ್ಜ್ ಮಾಡಿಕೊಳ್ಳಲು MyJio ಆಪ್ ಬಳಕೆ ಮಾಡಿಕೊಳ್ಳಬೇಕಾಗಿದೆ. ಇಲ್ಲಿ ಮಾತ್ರವೇ ಕ್ಯಾಷ್ ಬ್ಯಾಕ್ ಲಾಭ ದೊರೆಯಲಿದೆ.

click me!