Promobot Robots: ನಿಮ್ಮ ಮುಖಛಾಯೆ ರೋಬೋ ಕಂಪನಿಗೆ ಕೊಟ್ಟು ಕೋಟ್ಯಧಿಪತಿಯಾಗುವ ಸುವರ್ಣವಕಾಶ!

Published : Dec 04, 2021, 12:25 PM ISTUpdated : Dec 04, 2021, 12:55 PM IST
Promobot Robots: ನಿಮ್ಮ ಮುಖಛಾಯೆ  ರೋಬೋ ಕಂಪನಿಗೆ  ಕೊಟ್ಟು ಕೋಟ್ಯಧಿಪತಿಯಾಗುವ ಸುವರ್ಣವಕಾಶ!

ಸಾರಾಂಶ

*ನಿಮ್ಮ ಮುಖದ ಹಕ್ಕುಗಳನ್ನು ಮಾರಿ ಕೋಟ್ಯಧಿಪತಿಗಳಾಗಿ *ರೋಬೋಟ್‌ ತಯಾರಿಕಾ ಕಂಪನಿಯ ಭರ್ಜರಿ ಆಫರ್‌ *ಕಂಪನಿಯಿಂದ 25 ವರ್ಷಕ್ಕಿಂತ ಮೇಲ್ಪಟ್ಟವರ ಅರ್ಜಿ ಸ್ವೀಕಾರ!  

ಯೂರೋಪ್(ಡಿ. 04): ಜಾಗತಿಕ ಟೆಕ್ ಕಂಪನಿಯೊಂದಕ್ಕೆ ನಿಮ್ಮ ಮುಖದ ಹಕ್ಕುಗಳನ್ನು (Face Rights) ಮಾರಾಟ ಮಾಡಲು ಸಿದ್ಧರಿದ್ದರೆ ನಿಮ್ಮ ಮುಖವು ನಿಮ್ಮನ್ನು ಕೋಟ್ಯಧಿಪತಿಯನ್ನಾಗಿಸಬಹುದು.  ಹೌದು ಇದು ತಮಾಷೆಯಲ್ಲ! ಯೂರೋಪ್‌ ಮೂಲದ ಟೆಕ್ ಕಂಪನಿಯೊಂದು ( Promobot Tech Company) ಹೊಸ ರೋಬೋಟ್‌ಗಳನ್ನು (Robots) ಪ್ರಾರಂಭಿಸಲು ಸಜ್ಜಾಗಿದೆ. ಈ ಟೆಕ್‌ ಕಂಪನಿ ತಯಾರಿಸುವ  ರೋಬೋಟ್‌ಗಳು ಮನುಷ್ಯರಂತೆ ಸ್ನೇಹಪರ ಮುಖಗಳನ್ನು (friendly faces like humans) ಹೊಂದಿರಬೇಕೆಂದು ಕಂಪನಿ ನಿರ್ಧರಿಸಿದೆ. ಈ ಕಾರಣಕ್ಕಾಗಿ, ಅವರು ಈಗ ಹೊಸ ಬ್ಯಾಚ್‌ನ ರೋಬೋಟ್‌ಗಳಿಗೆ ತಮ್ಮ ಮುಖದ ವೈಶಿಷ್ಟ್ಯಗಳನ್ನ ಮಾರಾಟ ಮಾಡುವವರನ್ನು  ಹುಡುಕುತ್ತಿದ್ದಾರೆ. ಮಾನವನ ಮುಖದ ಹಕ್ಕಿಗಾಗಿ ಕೋಟ್ಯಂತರ ರೂಪಾಯಿ ನೀಡುವುದಾಗಿ ಹೇಳಿ ಪ್ರೊಮೊಬಾಟ್ ಈಗ ಎಲ್ಲರ ಗಮನ ಸೆಳೆದಿದೆ.

ತಮ್ಮ ಮುಖದ ಹಕ್ಕುಗಳನ್ನು ಹಸ್ತಾಂತರಿಸಲು ಒಪ್ಪುವ ಯಾರಿಗಾದರೂ ಅವರು £ 1,50,000 (ಸುಮಾರು ಒಂದುವರೆ ಕೋಟಿ) ಪಾವತಿಸುವುದಾಗಿ ಪ್ರೊಮೊಬಾಟ್ (Promobot) ಹೇಳಿದೆ. 'ಸೌಮ್ಯ ಸ್ವಭಾವ ಮತ್ತು ಸ್ನೇಹಪರ' ಮುಖ ವ್ಯಕ್ತಿತ್ವವುಳ್ಳವರನ್ನು ಹುಡುಕುತ್ತಿದ್ದೇವೆ ಎಂದು ಕಂಪನಿ ತಿಳಿಸಿದೆ. ಯಾವುದೇ ದೇಶದ, ಜನಾಂಗದ ಯಾರೂ ಬೇಕಾದರೂ  ಅಪ್ಲಿಕೇಶನ್‌ (Application) ಹಾಕಬಹುದು ಎಂದು ಕಂಪನಿ ಹೇಳಿದೆ. ಕಂಪನಿಯ ಒಂದೇ ಒಂದು ಷರತ್ತು ಎಂದರೆ ಅರ್ಜಿದಾರರು 25 ವರ್ಷಕ್ಕಿಂತ ಮೇಲ್ಪಟ್ಟವರಾಗಿರಬೇಕು.

2019 ರಿಂದ ಹುಮನಾಯ್ಡ್ ರೋಬೋಟ್‌ಗಳನ್ನು‌ ತಯಾರಿಕೆ!

"ನಮ್ಮ ಕಂಪನಿಯು ಮುಖ ಗುರುತಿಸುವಿಕೆ, ಜೊತೆಗೆ ಮಾತು, ನ್ಯಾವಿಗೇಷನ್, ಕೃತಕ ಬುದ್ಧಿಮತ್ತೆ (Artificial Intelligence) ಮತ್ತು ರೊಬೊಟಿಕ್ಸ್‌ನ ಇತರ ಕ್ಷೇತ್ರಗಳಲ್ಲಿ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುತ್ತಿದೆ. 2019 ರಿಂದ, ನಾವು ಹುಮನಾಯ್ಡ್ ರೋಬೋಟ್‌ಗಳನ್ನು‌ (humanoid robots) ಸಕ್ರಿಯವಾಗಿ ತಯಾರಿಸುತ್ತಿದ್ದೇವೆ ಮತ್ತು ಮಾರುಕಟ್ಟೆಗೆ ಸರಬರಾಜು ಮಾಡುತ್ತಿದ್ದೇವೆ" ಎಂದು ಕಂಪನಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ. 

Venkaiah Naidu:ಭಾರತ ಜಾಗತಿಕ ಡ್ರೋನ್ ಕೇಂದ್ರವಾಗುವ ಸಾಮರ್ಥ್ಯ ಹೊಂದಿದೆ; ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು!

"ನಮ್ಮ ಹೊಸ ಗ್ರಾಹಕರು ದೊಡ್ಡ-ಪ್ರಮಾಣದ ಯೋಜನೆಯನ್ನು ಪ್ರಾರಂಭಿಸಲು ಬಯಸುತ್ತಿದ್ದಾರೆ. ಹಾಗಾಗಿ ಕಾನೂನು ವಿಳಂಬಗಳನ್ನು ತಪ್ಪಿಸಲು ಅವರು ಹೊಸ ರೋಬೋಟ್‌ಗೆ ಜನರ ಮುಖದ ಹಕ್ಕುಗಳನ್ನು ಪಡೆದು ರೋಬೋಟ್‌ಗೆ ಅಳವಡಿಸಿ ಅದರ ನೋಟವನ್ನು (Robot Appearance) ಪರವಾನಗಿ ಮಾಡಬೇಕಾಗುತ್ತದೆ" ಎಂದು  ಪ್ರೊಮೊಬಾಟ್ ತಿಳಿಸಿದೆ.

ಮುಖವನ್ನು ಆಯ್ಕೆ ಮಾಡಿದ ನಂತರದ ಪ್ರಕ್ರಿಯೆ ಏನು?

*ಮೊದಲ ಹಂತದಲ್ಲಿ, ರೋಬೋಟ್‌ನ ಬಾಹ್ಯ ವೈಶಿಷ್ಟ್ಯಗಳಿಗಾಗಿ ವಿಜೇತ ಅರ್ಜಿದಾರರ  ಮುಖ ಮತ್ತು ದೇಹದ 3D ಮಾದರಿಯನ್ನು (3D Model) ತೆಗೆದುಕೊಳ್ಳಲಾಗುತ್ತದೆ.

*ಒಮ್ಮೆ ಅದು ಮುಗಿದ ನಂತರ, ಧ್ವನಿಯನ್ನು ನಕಲಿಸಲು ಅವರು 'ಕನಿಷ್ಠ 100 ಗಂಟೆಗಳ ಭಾಷಣ ಸಾಮಗ್ರಿಯನ್ನು ( Speech Material) ನೀಡಬೇಕಾಗುತ್ತೆ. ಅಂದರೇ ಸುಮಾರು 100 ಗಂಟೆಗಳ ಕಾಲ ಮಾತನಾಡಿ ಧ್ವನಿ ರೆಕಾರ್ಡ್‌ (Voice Record) ಮಾಡಬೇಕಾಗುತ್ತದೆ.

*ಕೊನೆಯ ಹಂತದಲ್ಲಿ, ಅರ್ಜಿದಾರರು 'ಅನಿಯಮಿತ ಅವಧಿಗೆ (Unlimited Period) ತಮ್ಮ ಮುಖಛಾಯೆ ಬಳಸಲು' ಅನುಮತಿಸುವ 'ಪರವಾನಗಿ ಒಪ್ಪಂದಕ್ಕೆ ಸಹಿ' ಮಾಡಬೇಕಾಗುತ್ತದೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ಅರ್ಜಿದಾರರು ತಮ್ಮ ಮುಖದ ಡಿಜಿಟಲ್ ಅಥವಾ ಪ್ರಿಂಟ್ ಬಳಕೆಯನ್ನು ಅನಿಯಮಿತ ಅವಧಿಗೆ ಮಾರಾಟ ಮಾಡಬೇಕಾಗುತ್ತದೆ. 

ಮನುಷ್ಯ ಮುಖದ ಭಾವನೆ ಅಭಿವ್ಯಕ್ತಿಸುವ ಎಐ ಆಧರಿತ ರೊಬೋಟ್ ಅಭಿವೃದ್ಧಿ

ಒಟ್ಟಿನಲ್ಲಿ ನಿಮ್ಮ ಮುಖಛಾಯೆಯ ಹಕ್ಕುಗಳನ್ನು ರೋಬೋಟ್‌ ಕಂಪನಿಗೆ ನೀಡುವ ಮೂಲಕ ಕೋಟ್ಯಧಿಪತಿಯಾಗುವ ಅವಕಾಶ ಇಲ್ಲಿದೆ. ಒಮ್ಮೆ ನಿಮ್ಮ ಮುಖದ 3D ಮಾದರಿಯನ್ನು ನೀಡಿದರೆ  ನಿಮ್ಮ ಮುಖವನ್ನೇ ಹೋಲುವ ರೋಬೋಟ್‌ ಕಂಪನಿ ತಯಾರಿಸಲಿದೆ. ಹಣ ಸಂಪಾದಿಸುವ ಜತೆಗೆ ನಿಮ್ಮ ಮುಖವನ್ನೇ ಹೋಲುವ ರೋಬೋಟ್ ನೋಡಿ ಆನಂದಪಡುವ  (Happiness) ಸುವರ್ಣವಕಾಶ  ಪ್ರೊಮೊಬಾಟ್  ನೀಡುತ್ತಿದೆ.

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

Read more Articles on
click me!

Recommended Stories

ಭಾರತದ ಶಾಶ್ವತ ಬಾಹ್ಯಾಕಾಶ ನಿವಾಸ ಬಿಎಎಸ್-01ಕ್ಕೆ ನೀಲಿ ನಕ್ಷೆ ಅಂತಿಮಗೊಳಿಸಿದ ಇಸ್ರೋ
ಆಧಾರ್​ ಕಾರ್ಡ್​ ಕಳೆದು ನಂಬರ್​ ಮರೆತಿರುವಿರಾ? ಹಾಗಿದ್ರೆ ಈ ಸ್ಟೆಪ್​ ಫಾಲೋ ಮಾಡಿ ವಾಪಸ್​ ಪಡೆಯಿರಿ