ಇಂದು ಪಾಕ್‌ನಿಂದ ಕ್ಷಿಪಣಿ ಪರೀಕ್ಷೆ?| ಪಾಕ್ ರೈಲ್ವೇ ಸಚಿವನಿಂದ ಯುದ್ಧ ವಿಚಾರ ಪ್ರಸ್ತಾಪವಾದ ಕೆಲವೇ ಗಂಟೆಗಳಲ್ಲಿ, ಪಾಕಿಸ್ತಾನ ಕ್ಷಿಪಣಿ ಪರೀಕ್ಷೆಗೆ ರೆಡಿ
ಇಸ್ಲಮಾಬಾದ್[ಆ.29]: ಕಾಶ್ಮೀರಕ್ಕಿದ್ದ ವಿಶೇಷ ಸ್ಥಾನಮಾನ ರದ್ದಾದ ಬಳಿಕ ಭಾರತದ ವಿರುದ್ಧ ಕತ್ತಿ ಮಸೆಯುತ್ತಿರುವ ಪಾಕಿಸ್ತಾನ, ಈಗ ಮತ್ತೊಂದು ಹೆಜ್ಜೆ ಮುಂದೆ ಹೋಗಿದೆ.
ಪಾಕ್ ರೈಲ್ವೇ ಸಚಿವನಿಂದ ಯುದ್ಧ ವಿಚಾರ ಪ್ರಸ್ತಾಪವಾದ ಕೆಲವೇ ಗಂಟೆಗಳಲ್ಲಿ, ಪಾಕಿಸ್ತಾನ ಕ್ಷಿಪಣಿ ಪರೀಕ್ಷೆಗೆ ಮುಂದಾಗಿದೆ ಎನ್ನುವ ಮಾಹಿತಿ ಲಭಿಸಿದೆ. ಆಗಸ್ಟ್ 28 ಹಾಗೂ 31 ರಂದು ಪಾಕ್ ಸೇನೆ ತಾಲೀಮು ನಡೆಯಲಿದ್ದು, ಈ ವೇಳೆ ಕರಾಚಿಯ ಸೋನ್‌ಮೈನಿಯಲ್ಲಿ ಕ್ಷಿಪಣಿ ಪರೀಕ್ಷೆ ಮಾಡುವ ಸಾಧ್ಯತೆ ಇದೆ.
ಈ ಬಗ್ಗೆ ಈಗಾಗಲೇ ವಾಯು ಹಾಗೂ ನೌಕಾ ಸೇನೆಗೆ ಪಾಕ್ ಸರ್ಕಾರ ನೋಟಿಸ್ ಜಾರಿ ಮಾಡಿದೆ. ಭಾರತದ ವಿರುದ್ಧ ದಾಳಿ ಮಾಡಲು ಪಾಕಿಸ್ತಾನ ಎಲ್ಲಾ ರೀತಿಯ ಕ್ಷಿಪಣಿಗಳನ್ನು ಅಭಿವೃದ್ಧಿ ಪಡಿಸಿದ್ದು, ಭಾರತದತ್ತ ಅಣು ಕ್ಷಿಪಣಿಗಳನ್ನು ಗುರಿ ಮಾಡಿ ಇಡಲಾಗಿದೆ ಎಂದು ತಿಳಿದು ಬಂದಿದೆ.