ಈ ಬಸ್ ನೋಡಿ ಹೆಂಗೈತೆ: ನಿಮ್ಮೂರಿಗೂ ಬರ್ತೈತೆ!

By Web DeskFirst Published Aug 31, 2018, 12:02 PM IST
Highlights

ಸಂಪೂರ್ಣ ಬ್ಯಾಟರಿ ಚಾಲಿತ ಮಿನಿ ಬಸ್! ದೇಶದ ಮೊಟ್ಟ ಮೊದಲ ಎಲೆಕ್ಟ್ರಿಕ್ ಮಿನಿ ಬಸ್! ಒಲೆಕ್ಟ್ರಾ ಗ್ರೀನ್‌ಟೆಕ್‌ ಕಂಪನಿ ನಿರ್ಮಿತ ಬಸ್! ಆಧುನಿಕ ತಂತ್ರಜ್ಞಾನ, ಅತ್ಯಾಧುನಿಕ ಸೌಲಭ್ಯ

ಹೈದರಾಬಾದ್(ಆ.31): ಎಲೆಕ್ಟ್ರಿಕ್‌ ಬಸ್‌ಗಳ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಒಲೆಕ್ಟ್ರಾ ಗ್ರೀನ್‌ಟೆಕ್‌ ಲಿಮಿಟೆಡ್‌ ಕಂಪನಿ, ದೇಶದ ಮೊಟ್ಟ ಮೊದಲ ಮಾಲಿನ್ಯ ರಹಿತ ಐಷಾರಾಮಿ ಮಿನಿ ಬಸ್‌ ಪರಿಚಯಿಸಿದೆ. ಲಿಯಾನ್‌ ಬ್ಯಾಟರಿ ಚಾಲಿತ ಈ ಬಸ್ ಗಂಟೆಗೆ 80 ಕಿ.ಮೀ ವೇಗದಲ್ಲಿ ಚಲಿಸಬಲ್ಲ ಸಾಮರ್ಥ್ಯ ಹೊಂದಿದೆ.

eBuzz K6 LuXe ಎಂಬ ಹೆಸರಿನ ಈ ಮಿನಿ ಬಸ್, 7 ಮೀಟರ್‌ ಉದ್ದದ ಅತ್ಯಾಧುನಿಕ ತಂತ್ರಜ್ಞಾನ ಹಾಗೂ ಆಧುನಿಕ ಸೌಕರ್ಯಗಳನ್ನು ಒಳಗೊಂಡಿರುವ 11 ಆಸನಗಳ ಬಸ್‌ ಇದಾಗಿದ್ದು, ಒಮ್ಮೆ ಬ್ಯಾಟರಿ ಜಾರ್ಚ್‌ ಮಾಡಿದರೆ 200 ಕಿ.ಮೀ. ದೂರ ಕ್ರಮಿಸಬಲ್ಲದು ಎಂದು ಸಂಸ್ಥೆ ತಿಳಿಸಿದೆ.

ಬಿವೈಡಿ ಆಟೋ ಇಂಡಸ್ಟ್ರಿ ಕಂಪನಿ ಲಿಮಿಟೆಡ್‌ ಪಾಲುದಾರಿಕೆಯಲ್ಲಿ ಒಲೆಕ್ಟ್ರಾ ಗ್ರೀನ್‌ಟೆಕ್‌ ಕಂಪನಿ ಈ ಎಲೆಕ್ಟ್ರಿಕ್ ಬಸ್ ಗಳನ್ನು ಭಾರತದಲ್ಲೇ ಉತ್ಪಾದಿಸಲಿದೆ. ಡಿಸ್ಕ್‌ ಬ್ರೇಕ್‌, ಎಬಿಎಸ್‌ ತಂತ್ರಜಾನ, ಶಾರ್ಟ್‌ ಸಕ್ರ್ಯೂಟ್‌ ರಕ್ಷಣಾ ವ್ಯವಸ್ಥೆ, ಸಿಸಿಟಿವಿ ಕ್ಯಾಮೆರಾ, ಸೀಟ್‌ಬೆಲ್ಟ್‌, ರಿಯಲ್‌ ಟೈಮ್‌ ಟ್ರ್ಯಾಕಿಂಗ್‌, ಪ್ರಯಾಣಿಕ ಮಾಹಿತಿ ಫಲಕ, ಐಶಾರಾಮಿ ಸೀಟು ಹಾಗೂ ಹವಾ ನಿಯಂತ್ರಿತ ವ್ಯವಸ್ಥೆಯನ್ನು ಈ ಬಸ್ ಒಳಗೊಂಡಿದೆ.

click me!