ನಿಮ್ಮ ಸ್ಕೂಟಿ 100 ಕೀಮಿ ಮೈಲೇಜ್ ನೀಡಬೇಕೆ? ಈ ಕಿಟ್ ಅಳವಡಿಸಿ!

By Web DeskFirst Published Aug 30, 2018, 2:01 PM IST
Highlights

ಪೆಟ್ರೋಲ್ ಬೆಲೆ ಇದೀಗ 80  ರೂಪಾಯಿ ದಾಟಿದೆ. ಈ ದುಬಾರಿ ಬೆಲೆಯಲ್ಲಿ ಕಡಿಮೆ ಮೈಲೇಜ್ ಸ್ಕೂಟರ್ ಕೂಡ ನಮಗೆ ಭಾರವಾಗಗುತ್ತಿದೆ. ಹೀಗಾಗಿ ನಿಮ್ಮ ಸ್ಕೂಟರ್ ಮೈಲೇಜ್ ಹೆಚ್ಚಿಸಿಕೊಳ್ಳಲು ಇಲ್ಲಿದೆ ಪರಿಹಾರ.

ಬೆಂಗಳೂರು(ಆ.30): ಯಾವುದೇ ವಾಹನ ಖರೀದಿಸುವವರ ಮೊದಲ ಪ್ರಶ್ನೆ ಮೈಲೇಜ್ ಎಷ್ಟು? ಕಾರಣ ಇದೀಗ ಪೆಟ್ರೋಲ್ ಬೆಲೆ ಗಗನಕ್ಕೇರಿದೆ. ಪ್ರತಿ ದಿನ ಪೆಟ್ರೋಲ್ ಬೆಲೆ ಏರಿಕೆಯಾಗುತ್ತಿದೆ ಹೊರತು ಇಳಿಯುತ್ತಿಲ್ಲ. ಹೀಗಾಗಿ ಮೈಲೇಜ್ ಎಲ್ಲಕ್ಕಿಂತ ಮುಖ್ಯ ವಿಚಾರ.

ಆಕ್ಟಿವಾ, ಜುಪಿಟರ್ ಸೇರಿದಂತೆ ಬಹುತೇಕ ಸ್ಕೂಟರ್‌ಗಳ ಮೈಲೇಜ್ ಸರಾಸರಿ 50. ಸದ್ಯದ ಪೆಟ್ರೋಲ್ ಬೆಲೆ ಇದಕ್ಕೆ ಪೂರಕವಾಗಿಲ್ಲ. ಆದರೆ ಇದೀಗ ನಿಮ್ಮ ಸ್ಕೂಟರ್ ಮೈಲೇಜ್‌ನ್ನ 100 ಕೀಮಿಗೆ ಹೆಚ್ಚಿಸಿಕೊಳ್ಳಬಹುದು. 

ಮೈಲೇಜ್ ಹೆಚ್ಚಿಸಿಕೊಳ್ಳಲು ಇಲ್ಲಿದೆ ಸುಲಭ ವಿದಾಯ. ನಿಮ್ಮ ಸ್ಕೂಟರ್‌ಗೆ ಸಿಎನ್‌ಜಿ ಗ್ಯಾಸ್ ಕಿಟ್ ಅಳವಡಿಸಿಕೊಂಡರೆ ಮೈಲೇಜ್ 100 ಕೀಮಿ ನೀಡಲಿದೆ. ಪೆಟ್ರೋಲ್ ಇಂಜಿನ್ ಸ್ಕೂಟರ್‌ಗಳಿಗೆ ಸಿಎನ್‌ಜಿ ಗ್ಯಾಸ್ ಗಿಟ್ ಅಳವಡಿಸಿಕೊಂಡರೆ ಸಾಕು. ಮೈಲೇಜ್ ದುಪ್ಪಟ್ಟು ಆಗಲಿದೆ.

 ಸಿಎನ್‌ಜಿ ಗ್ಯಾಸ್ ಮೆಕಾನಿಕ್ ಶಾಪ್ ಅಥವಾ ಅನ್ ಲೈನ್ ಮೂಲಕ  ಕಿಟ್ ದೊರೆಯಲಿದೆ. ಯಾವುದೇ ಸ್ಕೂಟರ್ ಮೆಕಾನಿಕ್ ಶಾಪ್‌ಗಳಲ್ಲಿ ಇದನ್ನ ಸುಲಭವಾಗಿ  ಅಳವಡಿಸಲಾಗುತ್ತೆ. ಈ ಮೂಲಕ ನಿಮ್ಮ ಸ್ಕೂಟರ್ ಮೈಲೇಜ್ ಹೆಚ್ಚಿಸಿ, ಪೆಟ್ರೋಲ್ ಬೆಲೆ ಏರಿಕೆ ಬಿಸಿಯಿಂದ ದೂರವಿರಿ.

click me!