ಎಲೆಕ್ಟ್ರಿಕಲ್ ಕಾರು ಖರೀದಿಸುವವರಿಗೆ ಬಂಪರ್ ಆಫರ್

By Web DeskFirst Published Aug 29, 2018, 8:05 PM IST
Highlights

ಭಾರತದಲ್ಲಿ ಎಲೆಕ್ಟ್ರಿಕಲ್ ವಾಹನಗಳನ್ನ ಉತ್ತೇಜಿಸಲು ಕೇಂದ್ರ ಸರ್ಕಾರ ಹಲವು ಯೋಜನೆ ರೂಪಿಸಿದೆ. ಇದೀಗ ಎಲೆಕ್ಟ್ರಿಕಲ್ ಕಾರು ಖರೀದಿಸೋ ಗ್ರಾಹಕರಿಗೆ ಸರ್ಕಾರ ಬಂಪರ್ ಆಫರ್ ನೀಡಿದೆ.
 

ಬೆಂಗಳೂರು(ಆ.29): ಎಲೆಕ್ಟ್ರಿಕಲ್ ಕಾರು ಖರೀದಿಸುವ ಗ್ರಾಹಕರಿಗೆ ನರೇಂದ್ರ ಮೋದಿ ಸರ್ಕಾರ ಬಂಪರ್ ಆಫರ್ ನೀಡಿದೆ. ಪ್ರತಿ ಎಲೆಕ್ಟ್ರಿಕಲ್ ಕಾರಿನ ಮೇಲೆ ಕನಿಷ್ಠ 1.4 ಲಕ್ಷ ರೂಪಾಯಿ ಸಬ್ಸಡಿ ಸಿಗಲಿದೆ.

ಕಾರಿನ ಬ್ಯಾಟರಿ ಸಾಮರ್ಥ್ಯದ ಮೇಲೆ ಸಬ್ಸಡಿ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಪ್ರತಿ ಕಿಲೋವ್ಯಾಟ್‌ಗೆ 10000 ರೂಪಾಯಿ ಸಬ್ಸಡಿ ನೀಡಲಿದೆ. ಸದ್ಯ  14 ಕಿಲೋವ್ಯಾಟ್ ಬ್ಯಾಟರಿ ಕಾರುಗಳು ಮಾರುಕಟ್ಟೆ ಪ್ರವೇಶಿಸಲು ರೆಡಿಯಾಗಿದೆ. ಹೀಗಾಗಿ ಪ್ರತಿ ಕಾರಿನ ಮೇಲೆ 1.4 ಲಕ್ಷ ರೂಪಾಯಿ ಸಬ್ಸಡಿ ಸಿಗಲಿದೆ.

ಹೈಎಂಡ್ ಎಲೆಕ್ಟ್ರಿಕಲ್ ಕಾರಿನಲ್ಲಿ ಹೆಚ್ಚು ಕಿಲೋವ್ಯಾಟ್ ಬ್ಯಾಟರಿಗಳನ್ನ ಬಳಸಲಾಗುತ್ತದೆ. ಹೀಗಾಗಿ ಈ ಕಾರುಗಳಿಗೆ ಗರಿಷ್ಠ 4 ಲಕ್ಷ ರೂಪಾಯಿ ಸಬ್ಸಡಿ ಸಿಗಲಿದೆ. ಈ ಸಬ್ಸಡಿ ದ್ವಿಚಕ್ರ ವಾಹನಗಳಿಗೂ ಅನ್ವಯಿಸಲಿದೆ. 

ಸದ್ಯ ಎಲೆಕ್ಟ್ರಿಕಲ್ ದ್ವಿಚಕ್ರ ವಾಹನಗಳಲ್ಲಿ 2 ಕಿಲೋವ್ಯಾಟ್ ಬ್ಯಾಟರಿ ಬಳಸಲಾಗುತ್ತಿದೆ. ಹೀಗಾಗಿ ದ್ವಿಚಕ್ರ ವಾಹನಗಳಿಗೆ ಕನಿಷ್ಠ 20000 ರೂಪಾಯಿ ಸಬ್ಸಡಿ ಸಿಗಲಿದೆ.  ಆದರೆ ಎಲ್ಲಾ ಎಲೆಕ್ಟ್ರಿಕಲ್ ಕಾರು ಹಾಗೂ ದ್ವಿಚಕ್ರ ವಾಹನಗಳಿಗೆ ಈ ಸಬ್ಸಡಿ ಅನ್ವಯವಾಗುವುದಿಲ್ಲ. 

ಕೇಂದ್ರ ಸರ್ಕಾರ ನಿಗಧಿ ಪಡಿಸಿದ ಎಲೆಕ್ಟ್ರಿಕಲ್ ವಾಹನಗಳಿಗೆ ಸಬ್ಸಡಿ ಸಿಗಲಿದೆ. ಆದರೆ ಇನ್ನು ಈ ಕುರಿತು ಕೇಂದ್ರ ಸರ್ಕಾರ ಸಬ್ಸಡಿ ವಾಹನಗಳನ್ನ ನಿಗಧಿಪಡಿಸಿಲ್ಲ. ಭಾರತದಲ್ಲಿ ಎಲೆಕ್ಟ್ರಿಕಲ್ ವಾಹನಗಳನ್ನ ಉತ್ತೇಜಿಸಲು 4 ಸಾವಿರ ಕೋಟಿ ರೂಪಾಯಿ ಮೀಸಲಿಡಲಾಗಿತ್ತು. ಇದೀಗ ಈ ಮೊತ್ತವನ್ನ 5,500 ಕೋಟಿ ರೂಪಾಯಿಗೆ ಏರಿಸಲಾಗಿದೆ.

click me!