
ಸ್ಮಾರ್ಟ್ಫೋನ್ (Smartphone) ಯೂಸ್ ಮಾಡೋರಿಗೆ ವಾಟ್ಸ್ ಅಪ್ ಬಳಕೆ ತಿಳಿದಿರ್ಲೇಬೇಕು. ಪ್ರತಿ ದಿನ ಗುಡ್ ಮಾರ್ನಿಂಗ್, ಗುಡ್ ನೈಟ್ ಮೆಸ್ಸೇಜ್ ವಾಟ್ಸ್ ಅಪ್ ನಲ್ಲಿ ಸೆಂಡ್ ಆಗೋದು ಕಡ್ಡಾಯ. ಒಬ್ಬರನ್ನೊಬ್ಬರು ಕನೆಕ್ಟ್ ಮಾಡೋಕೆ ಈ ವಾಟ್ಸ್ ಅಪ್ ಸಾಕಷ್ಟು ಸಹಾಯ ಮಾಡಿದೆ. ಪ್ರತಿ ಬಾರಿ ಫೋನ್ ಮಾಡಿ ವಿಚಾರಿಸ್ಬೇಕಾಗಿಲ್ಲ. ವಾಟ್ಸ್ ಅಪ್ ನಲ್ಲಿ ಒಂದು ಮೆಸ್ಸೇಜ್ ಹಾಕಿದ್ರೆ ಸಾಕು. ಜನರ ಬಳಕೆ ಹೆಚ್ಚಾಗ್ತಿದ್ದಂತೆ ವಾಟ್ಸ್ ಅಪ್ (WhatsApp) ತನ್ನ ಫೀಚರ್ ನಲ್ಲಿ ಅನೇಕ ಬದಲಾವಣೆ ಮಾಡ್ಕೊಂಡಿದೆ. ಮೊದಲು ಬರೀ ಚಾಟ್ ಗೆ ಸೀಮಿತವಾಗಿದ್ದ ವಾಟ್ಸ್ ಅಪ್ ನಲ್ಲಿ ಈವ ಆಡಿಯೋ ಕಾಲ್ ಮಾಡ್ಬಹುದು. ವಿಡಿಯೋ ಕಾಲ್ ಮಾಡ್ಬಹುದು. ಗ್ರೂಪ್ ಕಾಲ್, ಗ್ರೂಪ್ ವಿಡಿಯೋ ಕಾಲ್ ಮಾಡೋದಲ್ದೆ ಬ್ಯುಸಿನೆಸ್ ಗೆ ಇದನ್ನು ಬಳಕೆ ಮಾಡ್ಕೊಳ್ಬಹುದು. ವಾಟ್ಸ್ ಅಪ್ ನಲ್ಲಿ ಸ್ಟೇಟಸ್ ಅತಿ ಹೆಚ್ಚು ಜನರು ಬಳಸೋ ಒಂದು ಫೀಚರ್. ಈಗ ವಾಟ್ಸ್ ಅಪ್ ಬಳಕೆದಾರರಿಗೆ ಕಂಪನಿ ಮತ್ತೊಂದು ಖುಷಿ ಸುದ್ದಿ ನೀಡಿದೆ. ಕೈನಲ್ಲಿ ಎರಡೆರಡು ಮೊಬೈಲ್ ಇದೆ, ಆದ್ರೆ ಎರಡಕ್ಕೂ ಒಂದೇ ವಾಟ್ಸ್ ಅಪ್ ನಂಬರ್ ಯೂಸ್ ಮಾಡೋಕೆ ಆಗ್ತಿಲ್ಲ, ವಾಟ್ಸ್ ಅಪ್ಗಾಗಿ ಹೊಸ ಫೋನ್ ನಂಬರ್ ಪಡೀಬೇಕು ಅಂತಿದ್ದವರು ನಿರಾಳ ಆಗ್ಬಹುದು.
ಎರಡು ಮೊಬೈಲ್ ನಲ್ಲೂ ಒಂದೇ ಅಕೌಂಟ್ : ಯಸ್, ನಿಮ್ಮ ಕೈನಲ್ಲಿ ಎರಡು ಮೊಬೈಲ್ ಇದೆ ಅಂದ್ಕೊಳ್ಳಿ. ಒಂದಕ್ಕೆ ನಿಮ್ಮ ಮೊಬೈಲ್ ನಂಬರ್ ಹಾಕಿ ವಾಟ್ಸ್ ಅಪ್ ಅಕೌಂಟ್ ಓಪನ್ ಮಾಡಿದ್ದೀರಿ. ಇನ್ನೊಂದು ಮೊಬೈಲ್ ಗೆ ಈ ಹಿಂದೆ ಅದೇ ನಂಬರ್ ನಿಂದ ವಾಟ್ಸ್ ಅಪ್ ಓಪನ್ ಮಾಡೋಕೆ ಬರ್ತಿರಲಿಲ್ಲ. ಆದ್ರೀಗ ಕಂಪನಿ ನೀವು ಎರಡೂ ಮೊಬೈಲ್ ನಲ್ಲಿ ಒಂದೇ ಅಕೌಂಟ್ ಓಪನ್ ಮಾಡುವ ವ್ಯವಸ್ಥೆ ನೀಡಿದೆ. ಏಕ ಕಾಲದಲ್ಲಿ ನೀವು ನಾಲ್ಕು ಡಿವೈಸ್ನಲ್ಲಿ ವಾಟ್ಸ್ ಅಪ್ ಓಪನ್ ಮಾಡ್ಬಹುದು.
ಎರಡೂ ಫೋನ್ ನಲ್ಲಿ ಒಂದೇ ವಾಟ್ಸ್ ಅಪ್ ಖಾತೆ ತೆರೆಯೋದು ಹೇಗೆ? :
• ನಿಮ್ಮ ಎರಡನೇ ಮೊಬೈಲ್ ನ ಗೂಗಲ್ ಪ್ಲೇ ಸ್ಟೋರ್ ಗೆ ಹೋಗಿ ವಾಟ್ಸ್ ಅಪ್ ಡೌನ್ಲೋಡ್ ಮಾಡಿ.
• Link to Existing Account ಆಯ್ಕೆ ಮಾಡಿ. ನಿಮಗೆ ವಾಟ್ಸ್ ಅಪ್ ಅಪ್ಲಿಕೇಷನ್ ವೆಲ್ ಕಂ ಸ್ಕ್ರೀನ್ ಮೇಲೆಯೇ ಈ ಆಯ್ಕೆ ಕಾಣಿಸುತ್ತದೆ. ಅದನ್ನು ಟ್ಯಾಪ್ ಮಾಡಿ. ಅಲ್ಲೆಲ್ಲೂ ಅಪ್ಪಿತಪ್ಪಿಯೂ ನಿಮ್ಮ ಮೊಬೈಲ್ ನಂಬರ್ ಟೈಪ್ ಮಾಡ್ಬೇಡಿ.
• ಇದಾದ್ಮೇಲೆ ನಿಮ್ಮ ಸ್ಕ್ರೀನ್ ಮೇಲೆ ಕ್ಯೂ ಆರ್ ಕೋಡ್ ಕಾಣಿಸುತ್ತದೆ. ಈ ಕ್ಯೂ ಆರ್ ಕೋಡನ್ನು ಸ್ಕ್ಯಾನ್ ಮಾಡಿ. ಮೊದಲೇ ವಾಟ್ಸ್ ಅಪ್ ಚಾಲ್ತಿಯಲ್ಲಿರುವ ಫೋನ್ ನಿಂದ ನೀವು ಸ್ಕ್ಯಾನ್ ಮಾಡ್ಬೇಕು. ಅದಕ್ಕಿಂತ ಮೊದ್ಲು ಒಂದೆರಡು ಕೆಲ್ಸ ಮಾಡ್ಬೇಕು.
• ಮೊದಲ ಫೋನ್ ವಾಟ್ಸ್ ಅಪ್ ಸೆಟ್ಟಿಂಗ್ ಗೆ ಹೋಗ್ಬೇಕು. ಅಲ್ಲಿ Linked Devices ಆಯ್ಕೆ ಮೇಲೆ ಕ್ಲಿಕ್ ಮಾಡಿ. ಇದಾದ್ಮೇಲೆ ಕ್ಯೂಆರ್ ಕೂಡ್ ಸ್ಕ್ಯಾನ್ ಮಾಡಿ.
ಹೀಗೆ ಮಾಡಿದ್ರೆ ನಿಮ್ಮ ಎರಡೂ ಮೊಬೈಲ್ ನಲ್ಲಿ ವಾಟ್ಸ್ ಅಪ್ ಸಕ್ರಿಯಗೊಳ್ಳುತ್ತದೆ. ಎಲ್ಲ ಚಾಟ್ಸ್, ಮೆಸ್ಸೇಜ್, ಫೋಟೋಗಳು ಎರಡೂ ಮೊಬೈಲ್ ನಲ್ಲಿ ನಿಮಗೆ ಸಿಗುತ್ವೆ.
ಒಂದ್ವೇಳೆ ಕ್ಯೂ ಆರ್ ಕೋಡ್ ಸ್ಕ್ಯಾನ್ ಕಾಣಿಸಿಲ್ಲ ಎಂದಾದ್ರೆ ವಾಟ್ಸ್ ಅಪ್ ವೆಬ್ ಮೂಲಕ ನೀವು ಲಾಗಿನ್ ಆಗ್ಬಹುದು. ಮಲ್ಟಿ-ಡಿವೈಸ್ ಫೀಚರ್ ಎಂಡ್-ಟು-ಎಂಡ್ ಎನ್ಕ್ರಿಪ್ಶನ್ನೊಂದಿಗೆ ಬರುತ್ತದೆ. ನಿಮ್ಮ ವೈಯಕ್ತಿಕ ಚಾಟ್ ಮತ್ತು ಕರೆ ಸಂಪೂರ್ಣವಾಗಿ ಸುರಕ್ಷಿತವಾಗಿರುತ್ತವೆ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.