ಕ್ಯೂಬ್ ಸ್ಯಾಟ್ ಗೆ ಸೆರೆ ಸಿಕ್ಕ ಮಂಗಳ: ನೋಡದಿದ್ರೆ ಅಳ್ತೀರಾ ಗಳಗಳ!

By nikhil vkFirst Published Oct 23, 2018, 4:22 PM IST
Highlights

ನಾಸಾದ ಕ್ಯೂಬ್ ಸ್ಯಾಟ್ ನೌಕೆ ಕ್ಲಿಕ್ಕಿಸಿದ ಮಂಗಳ ಗ್ರಹದ ಫೋಟೋ! 12.8 ಮಿಲಿಯನ್ ಕಿ.ಮೀ ದೂರದಿಂದ ಮಂಗಳ ಗ್ರಹದ ಫೋಟೋ! ವಿಶ್ವ ಪರ್ಯಟನೆಯಲ್ಲಿರುವ ನಾಸಾದ ಕ್ಯೂಬ್ ಸ್ಯಾಟ್ ಯಂತ್ರ!ಈಗಾಗಲೇ 399 ಮಿಲಿಯನ್ ಕಿ.ಮೀ. ಕ್ರಮಿಸಿರುವ ಕ್ಯೂಬ್ ಸ್ಯಾಟ್ ಯಂತ್ರ

ವಾಷಿಂಗ್ಟನ್(ಅ.23): ವಿಶ್ವದ ಅಧ್ಯಯನಕ್ಕೆ ನಾಸಾದಿಂದ ಉಡಾವಣೆಗೊಂಡಿರುವ ಸೂಟ್‌ಕೇಸ್ ಗಾತ್ರದ ಕ್ಯೂಬ್ ಸ್ಯಾಟ್ ಮಾರ್ಕೋ ಮಿಶನ್ ತನ್ನ ಪ್ರಯಾಣದ ವೇಳೆ ಮಂಗಳ ಗ್ರಹದ ಅಪರೂಪದ ಫೋಟೋ ಕ್ಲಿಕ್ಕಿಸಿದೆ.

ಮಾರ್ಕೋ ಮಿಶನ್ ನೌಕೆಯಲ್ಲಿ ಎರಡು ಪುಟ್ಟ ಗಾತ್ರದ ಯಂತ್ರಗಳಿದ್ದು, ಅದರಲ್ಲಿ ಅಳವಡಿಸಿರುವ ಕ್ಯಾಮರಾ ಮಂಗಳ ಗ್ರಹದ ಫೋಟೋ ಸೆರೆ ಹಿಡಿದಿದೆ. ವಿಶ್ವ ಪರ್ಯಟನೆಯಲ್ಲಿರುವ ಕ್ಯೂಬ್ ಸ್ಯಾಟ್ ಯಂತ್ರ ಸುಮಾರು 12.8 ಮಿಲಿಯನ್ ಕಿ.ಮೀ ದೂರದಿಂದ ಮಂಗಳ ಗ್ರಹದ ಫೋಟೋ ಸೆರೆ ಹಿಡಿದಿದೆ.

ಕಳೆದ ಅಕ್ಟೋಬರ್ 3 ರಂದು ಈ ಫೋಟೋ ಕ್ಲಿಕ್ಕಿಸಲಾಗಿದ್ದು, ಕೆಂಪು ಬಣ್ಣದ ಮಂಗಳ ಗ್ರಹ ಅತ್ಯಂತ ಸ್ಪಷ್ಟವಾಗಿ ಕಾಣಬಹುದಾಗಿದೆ. ಈಗಾಗಲೇ 399 ಮಿಲಿಯನ್ ಕಿ.ಮೀ. ಕ್ರಮಿಸಿರುವ ಕ್ಯೂಬ್ ಸ್ಯಾಟ್ ಯಂತ್ರ ಮಂಗಳ ಗ್ರಹ ಸೂರ್ಯನನ್ನು ಸುತ್ತು ಹೊಡೆಯುವ ಅಕ್ಷಾಂಶದಲ್ಲೇ ಗ್ರಹವನ್ನು ಹಿಂಬಾಲಿಸಲಿದೆ.

click me!