ಕೇರಳ ಸಂತ್ರಸ್ತರ ನೆರವಿಗೆ ಧಾವಿಸಿದ ಮರ್ಸಿಡಿಸ್ ಬೆಂಝ್

By Web DeskFirst Published Aug 17, 2018, 6:08 PM IST
Highlights

ಮಹಾ ಮಳೆಗೆ ಕೇರಳ ಜನರು ತತ್ತರಿಸಿದ್ದಾರೆ. ಮಳೆಯಿಂದಾಗಿ ಕೇರಳ ಹಲವು ಭಾಗಗಳು ಜಲಾವೃತವಾಗಿದೆ. ಮನೆ, ಮರ, ಗುಡ್ಡ ಧರೆಗುರುಳಿದೆ. ಜನರನ್ನ ಸುರಕ್ಷಿತ ಪ್ರದೇಶಗಳಿಗೆ ರವಾನಿಸೋ ರಕ್ಷಣ ಕಾರ್ಯ ನಡೆಯುತ್ತಿದೆ. ಆದರೆ ಸಾವಿನ ಸಂಖ್ಯೆ ಮಾತ್ರ ನಿಲ್ಲುತ್ತಿಲ್ಲ.  ಇದೀಗ ದೇಶದ ವಿವಿದೆಡೆಗಳಿಂದ ಕೇರಳ ಸಂತ್ರಸ್ತರಿಗೆ ನೆರವು ನೀಡುತ್ತಿದ್ದಾರೆ. ಇದೀಗ ಭಾರತದ ಮರ್ಸಿಡೀಸ್ ಬೆಂಝ್ ಕಾರು ಘಟಕ ಕೇರಳ ಸಂತ್ರಸ್ತರ ನೆರವಿಗೆ ಧಾವಿಸಿದೆ. 

ಮುಂಬೈ (ಆ.17): ಕೇರಳದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಗೆ ಬಲಿಯಾದವರ ಸಂಖ್ಯೆ 167ಕ್ಕೇರಿದೆ. ಕೇರಳ ರಾಜ್ಯದ ಬಹುತೇಕ ಭಾಗಗಳು ಸಂಪೂರ್ಣ ಜಲಾವೃತಗೊಂಡಿದ್ದು, ಗುಡ್ಡೆ ಹಾಗೂ ಭೂಕುಸಿತದಿಂದ ಜನರ ಪರಿಸ್ಥಿತಿ ಹೇಳತೀರದು.

ಸಂತ್ರಸ್ಥರ ನೆರವಿಗಾಗಿ ಕೇರಳಸರ್ಕಾರ ಹಾಗೂ ಕೇಂದ್ರ ಸರ್ಕಾರ ಕೂಡ ಅವಿರತ ಪ್ರಯತ್ನಿಸುತ್ತಿದೆ. ಕೇರಳಾ ಬೀಕರ ಮಳೆ ಪರಿಹಾರಕ್ಕೆ ಕೇರಳ ಸಿಎಂ ನಿಧಿ ಖಾತೆ ಭಾರತದ ಮರ್ಸಿಡಿಸ್ ಬೆಂಝ್ ಕಾರು ಘಟಕ 30 ಲಕ್ಷ ರೂಪಾಯಿ ದೇಣಿಗೆ ನೀಡಿದೆ.

ಕೇರಳ ಮಳೆಗೆ ತುತ್ತಾಗಿರುವ ಮರ್ಸಿಡಿಸ್ ಬೆಂಝ್ ಕಾರುಗಳಿಗೆ ಉಚಿತ ಸರ್ವೀಸ್ ನೀಡುವುದಾಗಿ ಬೆಂಝ್ ಕಂಪೆನಿ ಘೋಷಿಸಿದೆ. ಈ ಮೂಲಕ ಕೇರಳ ಸಂತ್ರಸ್ತರ ನೆರವಿಗೆ ನಿಂತಿರೋದು ಎಲ್ಲರ ಮೆಚ್ಚಿಗೆಗೆ ಪಾತ್ರವಾಗಿದೆ.

ಇದನ್ನೂ ಓದಿ: ಕೇರಳಕ್ಕೆ ಪ್ರಧಾನಿ ಭೇಟಿ.. ನೀವು ನೆರವು ನೀಡಬಹುದು

ಇದನ್ನೂ ಓದಿ: ಕೇರಳ ನೆರೆ ಸಂತ್ರಸ್ತರಿಗೆ ಪುನೀತ್ ನೆರವು
click me!