ರಾಯಲ್ ಎನ್‌ಫೀಲ್ಡ್‌ಗೆ ಸೆಡ್ಡು ಹೊಡೆಯುತ್ತಾ ಬೆನೇಲ್ಲಿ 400 ಬೈಕ್?

By Web DeskFirst Published Aug 13, 2018, 4:15 PM IST
Highlights

ಭಾರತದಲ್ಲಿ ರಾಯಲ್ ಎನ್‌ಫೀಲ್ಡ್ ಬೈಕ್‌ ಮಾರುಕಟ್ಟೆಯನ್ನ ಆಕ್ರಮಿಸಿಕೊಳ್ಳಲು ಹಲವು ಬೈಕ್ ಕಂಪೆನಿಗಳು ಪ್ರಯತ್ನಿಸಿದೆ. ಆದರೆ ಸಾಧ್ಯವಾಗಿಲ್ಲ. ಇದೀಗ ನೂತ ಬನೇಲ್ಲಿ ಬೈಕ್ ಬಿಡುಗಡೆಯಾಗುತ್ತಿದೆ.  ಇದು ರಾಯಲ್ ಎನ್‌ಫೀಲ್ಡ್ ಬೈಕ್‌ಗೆ ಭಾರಿ ಪೈಪೋಟಿ ನೀಡಲಿದೆ ಅನ್ನೋ ಮಾತು ಕೇಳಿಬರುತ್ತಿದೆ. 
 

ಬೆಂಗಳೂರು(ಆ.13): ರಾಯಲ್ ಎನ್‌ಫೀಲ್ಡ್ ಬೈಕ್ ಶಬ್ದ ಕೇಳಿದರೆ ಸಾಕು ಬೈಕ್ ಪ್ರಿಯರ ಕಿವಿ ನೆಟ್ಟಗಾಗುತ್ತೆ.  ಇತರ ಯಾವುದೇ ಸ್ಪೋರ್ಟ್ಸ್ ಭಾರತದ ಮಾರುಕಟ್ಟೆ ಪ್ರವೇಶಿಸಿದರೂ, ರಾಯಲ್ ಎನ್‌ಫೀಲ್ಡ್ ಬೈಕ್ ಮಾತ್ರ ತನ್ನ ಘನತೆಯನ್ನ ಉಳಿಸಿಕೊಂಡಿದೆ.

ಇದೀಗ ಭಾರತದಲ್ಲಿ ರಾಯಲ್ ಎನ್‌ಫೀಲ್ಡ್ ಬೈಕ್‌ಗೆ ಸೆಡ್ಡು ಹೊಡೆಯಲು ಬನೇಲ್ಲಿ ಬೈಕ್ ಮಾರುಕಟ್ಟೆ ಪ್ರವೇಶಿಸಲು ಸಜ್ಜಾಗಿದೆ. ನೂತನ ಬನೇಲ್ಲಿ 400 ಬೈಕ್ , ರಾಯಲ್ ಎನ್‌ಫೀಲ್ಡ್‌ಗೆ ಭಾರಿ ಪೈಪೋಟಿ ನೀಡಲಿದೆ ಎಂದು ಹೇಳಲಾಗುತ್ತಿದೆ.

373 ಸಿಸಿ ಇಂಜಿನ್ ಹೊಂದಿರುವ ಬನೇಲ್ಲಿ, 1950 ರೆಟ್ರೋ ಸ್ಟೈಲ್‌ನಲ್ಲಿ ನೂತನ ಬೈಕ್‌ನ್ನ ವಿನ್ಯಾಸಗೊಳಿಸಿದೆ. ಹೆಡ್‌ಲೈಟ್, ಮಿರರ್ ಸೇರಿದಂತೆ ಪ್ರತಿ ಅಂಶಗಳಲ್ಲೂ ರೆಟ್ರೋ ಸ್ಟೈಲ್ ಅನುಕರಣೆ ಮಾಡಿದೆ. 

ಏರ್ ಕೂಲ್, ಸಿಂಗಲ್ ಸಿಲಿಂಡರ್ ಇಂಜಿನ್ ಹೊಂದಿರು ಬನೇಲ್ಲಿ 400 ಬೈಕ್ , 19.7 ಬಿಹೆಚ್ ಪವರ್ ಹಾಗೂ 28 ಎನ್‌ಎಮ್ ಟಾರ್ಕ್ಯೂೂ ಉತ್ವಾದಿಸಲಿದೆ. 5 ಸ್ವೀಡ್ ಗೇರ್ ಬಾಕ್ಸ್ ಹೊಂದಿರುವ ಬನೇಲ್ಲ, ಪ್ರತಿಸ್ಪರ್ಧಿ ರಾಯಲ್ ಎನ್‌ಫೀಲ್ಡ್‌ಗೆ ಸೆಡ್ಡು ಹೊಡೆಯಲು ಸಜ್ಜಾಗಿದೆ.

ಬನೇಲ್ಲಿ 400 ಬೈಕ್ 200 ಕೆಜಿ ತೂಕ ಹೊಂದಿದೆ. ಇದು ರಾಯಲ್ ಎನ್‌ಫೀಲ್ಡ್ 350 ಕ್ಲಾಸಿಕ್ ಬೈಕ್‌ಗಿಂತ 8 ಕೆಜಿ ಹೆಚ್ಚಿಗೆ ತೂಕ ಹೊಂದಿದೆ. 300 ಎಂಎಂ ಫ್ರಂಟ್ ಡಿಸ್ಕ್ ಹಾಗೂ 240 ಎಂಎಂ ರೇರ್ ಡಿಸ್ಕ್ ಬ್ರೇಕ್ ಹೊಂದಿರು ಬನೇಲ್ಲಿ ಎಬಿಎಸ್ ಹೊಂದಿದೆ. ಬನೇಲ್ಲಿ 400 ಬೈಕ್ ಬೆಲೆ 2 ಲಕ್ಷ ರೂಪಾಯಿ(ಎಕ್ಸ್ ಶೋರೂಂ). 2019ರಲ್ಲಿ ಬನೇಲ್ಲಿ ಭಾರತದ ಮಾರುಕಟ್ಟೆ ಪ್ರವೇಶಿಸಲಿದೆ.
ಇದನ್ನೂ ಓದಿ: ಬೆಂಗಳೂರಿನಲ್ಲಿದೆ ಭಾರತದ ಮೊದಲ ಪೊರ್ಶೆ 911ಜಿಟಿ2 RS ಕಾರು!

ಇದನ್ನೂ ಓದಿ: ಜೂನ್ ತಿಂಗಳಲ್ಲಿ ಗರಿಷ್ಠ ಮಾರಾಟವಾದ ಬೈಕ್ ಯಾವುದು?

click me!