AI Trust Paradox: ಜನರಿಗೆ ಎಐ ಮೇಲೆ ನಂಬಿಕೆ ಇಲ್ಲ… ಆದ್ರೂ ಶಾಪಿಂಗ್‌ಗೆ ಮಾತ್ರ ಅದನ್ನೇ ಬಳಸ್ತಾರೆ! ಏನಿದು ವಿಚಿತ್ರ?

Published : Aug 30, 2026, 10:53 AM IST
McKinsey Study Reveals AI Trust Paradox in Consumer Shopping Habits

ಸಾರಾಂಶ

ಎಐ ಸಲಹೆಗಳ ಮೇಲೆ ಗ್ರಾಹಕರ ನಂಬಿಕೆ 40% ಕ್ಕಿಂತ ಕಡಿಮೆ ಇದ್ದರೂ, ಶಾಪಿಂಗ್ ಮಾಡಲು ಮಾತ್ರ ಅದನ್ನೇ ಹೆಚ್ಚಾಗಿ ಬಳಸುತ್ತಿದ್ದಾರೆ ಎಂದು ಮೆಕಿನ್ಸೆ ಸಂಶೋಧನೆ ತಿಳಿಸಿದೆ. ಗ್ರಾಹಕರ ವಿಚಿತ್ರ ನಡೆವಳಿಕೆಯು ಬ್ರ್ಯಾಂಡ್‌ಗಳಿಗೆ ಹೊಸ ಸವಾಲುಗಳನ್ನು ಒಡ್ಡಿದೆ.

ಕೃತಕ ಬುದ್ಧಿಮತ್ತೆ (AI) ಕೊಡುವ ಸಲಹೆಗಳ ಮೇಲೆ ಗ್ರಾಹಕರಿಗೆ ಅಷ್ಟಾಗಿ ನಂಬಿಕೆ ಇಲ್ಲ. ಅದರ ಮೇಲಿನ ಜನರ ನಂಬಿಕೆಯ ಮಟ್ಟ ಶೇ. 40ಕ್ಕಿಂತ ಕಡಿಮೆ ಇದೆ. ಆದರೂ, ವಿಚಿತ್ರ ಅಂದ್ರೆ ಜನ ಶಾಪಿಂಗ್ ಮಾಡಲು ಮಾತ್ರ ಅದನ್ನೇ ನೆಚ್ಚಿಕೊಂಡಿದ್ದಾರೆ!

ಹೌದು 'ದಿ ಮೆಕಿನ್ಸೆ ಪಾಡ್‌ಕ್ಯಾಸ್ಟ್'ನಲ್ಲಿ ಚರ್ಚೆಯಾದ ಈ ಒಂದು ಹೊಸ ಸಂಶೋಧನೆ ಈ ಅಚ್ಚರಿಯ ವಿಷಯ ಬಯಲು ಮಾಡಿದೆ. ಗ್ರಾಹಕರ ವರ್ತನೆಯಲ್ಲಿ ಒಂದು ದೊಡ್ಡ ವಿರೋಧಾಭಾಸ ಬೆಳಕಿಗೆ ಬಂದಿದೆ. ವಸ್ತುಗಳನ್ನು ಖರೀದಿಸುವಾಗ, ಅವುಗಳ ಬಗ್ಗೆ ಮಾಹಿತಿ ಪಡೆಯಲು ಜನ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳು ಮತ್ತು ಅಲ್ಗಾರಿದಮ್‌ಗಳನ್ನು ಹೆಚ್ಚಾಗಿ ಬಳಸುತ್ತಿದ್ದಾರೆ, ಆದರೆ ಅವುಗಳ ಮೇಲೆ ಅವರಿಗೆ ಅಪನಂಬಿಕೆಯೂ ಇದೆ.

ಗ್ರಾಹಕರ ಏಕೆ ಇಷ್ಟೊಂದು ವಿಚಿತ್ರ?

ಸೋಶಿಯಲ್ ಮೀಡಿಯಾದಂತಹ ಅಲ್ಗಾರಿದಮ್ ಆಧಾರಿತ ಚಾನೆಲ್‌ಗಳ ಬಗ್ಗೆ ಜನರಲ್ಲಿ ಸಾಕಷ್ಟು ಅನುಮಾನಗಳಿವೆ. ಅದರಲ್ಲೂ ಜನರೇಟಿವ್ ಎಐ ವಿಚಾರದಲ್ಲಿ ನಂಬಿಕೆಯ ಮಟ್ಟ ಶೇ. 40ಕ್ಕಿಂತ ಕಡಿಮೆ ಇದೆ ಅನ್ನೋದು ಅಧ್ಯಯನದಲ್ಲಿ ತಿಳಿದುಬಂದಿದೆ' ಎಂದು ಮೆಕಿನ್ಸೆಯ ರಿಟೇಲ್ ಮತ್ತು ಕನ್ಸ್ಯೂಮರ್ ಪ್ಯಾಕೇಜ್ಡ್ ಗೂಡ್ಸ್ ಪ್ರಾಕ್ಟೀಸಸ್‌ನ ಜಾಗತಿಕ ಮುಖ್ಯಸ್ಥೆ ಡ್ಯಾನಿಯೆಲ್ ಬೊಜಾರ್ತ್ 'ದಿ ಮೆಕಿನ್ಸೆ ಪಾಡ್‌ಕ್ಯಾಸ್ಟ್' ಸಂಚಿಕೆಯಲ್ಲಿ ಹೇಳಿದ್ದಾರೆ.

ಈ ಅಪನಂಬಿಕೆ ಕೇವಲ ಡಿಜಿಟಲ್ ಮಾಧ್ಯಮಗಳಿಗೆ ಸೀಮಿತವಾಗಿಲ್ಲ. ಯುವ ಪೀಳಿಗೆಯಲ್ಲಿ, ಕುಟುಂಬದವರು, ಸ್ನೇಹಿತರು ಕೊಡುವ ಸಲಹೆಗಳ ಮೇಲೂ ಹೆಚ್ಚು ನಂಬಿಕೆ ಇಲ್ಲ ಎನ್ನುವುದು ಡೇಟಾದಿಂದ ತಿಳಿದುಬಂದಿದೆ. 'ಈ ಗ್ರಾಹಕರು ಮಾಹಿತಿ ಪಡೆಯಲು ಹೆಚ್ಚು ಮೂಲಗಳನ್ನು ಪರಿಗಣಿಸುತ್ತಿದ್ದರೂ, ಆ ಮೂಲಗಳ ಮೇಲೆ ಅವರ ನಂಬಿಕೆ ಗಣನೀಯವಾಗಿ ಕಡಿಮೆಯಾಗಿದೆ' ಎಂದು ಬೊಜಾರ್ತ್ ಹೇಳುತ್ತಾರೆ. 'ಇದು ಬ್ರ್ಯಾಂಡ್‌ಗಳಿಗೆ ಮತ್ತು ಇನ್‌ಫ್ಲುಯೆನ್ಸರ್‌ಗಳಿಗೆ ಗ್ರಾಹಕರ ನಿರ್ಧಾರದ ಮೇಲೆ ಪ್ರಭಾವ ಬೀರಲು ದೊಡ್ಡ ಸವಾಲನ್ನು ಸೃಷ್ಟಿಸಿದೆ.

ಹಾಗಾದರೆ ಬ್ರ್ಯಾಂಡ್‌ಗಳಿಗೆ ಹೊಸ ಕಾರ್ಯತಂತ್ರ ಅಗತ್ಯವಿದೆಯೇ?

ಎಐ ನೀಡುವ ಉತ್ತರಗಳಲ್ಲಿ ಬ್ರ್ಯಾಂಡ್‌ಗಳ ಸ್ವಂತ ವೆಬ್‌ಸೈಟ್‌ಗಳ ನೇರ ಉಲ್ಲೇಖ ತೀರಾ ಕಡಿಮೆ ಎಂದು ಸಂಶೋಧನೆ ಬಹಿರಂಗಪಡಿಸಿದೆ. ಈ ಬದಲಾವಣೆಯಿಂದಾಗಿ, ಕಂಪನಿಗಳು ಈಗ 'ಜನರೇಟಿವ್ ಇಂಜಿನ್ ಆಪ್ಟಿಮೈಸೇಶನ್' ತಂತ್ರಗಳನ್ನು ಅಳವಡಿಸಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ. ಅಂದರೆ, ತಮ್ಮ ಉತ್ಪನ್ನಗಳ ವಿವರಗಳು, ವಿಶೇಷಣಗಳು ಮತ್ತು ಪದೇ ಪದೇ ಕೇಳಲಾಗುವ ಪ್ರಶ್ನೆಗಳನ್ನು ಎಐ ಅಲ್ಗಾರಿದಮ್‌ಗಳು ಸುಲಭವಾಗಿ ಅರ್ಥಮಾಡಿಕೊಳ್ಳುವಂತೆ ಮಾಡಬೇಕಿದೆ.

ಜನರ ವರ್ತನೆ ಬದಲಾಗಲು ಕಾರಣ ಈ ನಾಲ್ಕು ಟ್ರೆಂಡ್‌ಗಳು

ಜನರ ವರ್ತನೆ ಬದಲಾಗಲು ಕಾರಣವಾದ ಈ ನಾಲ್ಕು ಪ್ರಮುಖ ಟ್ರೆಂಡ್‌ಗಳನ್ನು ಈ ಪಾಡ್‌ಕ್ಯಾಸ್ಟ್‌ನಲ್ಲಿ ವಿವರಿಸಲಾಗಿದೆ. ತಂತ್ರಜ್ಞಾನದ ಮೂಲಕವೇ ಖರೀದಿ, ಆರೋಗ್ಯದ ಬಗ್ಗೆ ಹೆಚ್ಚಿದ ಜಾಗೃತಿ, ಅನುಭವಕ್ಕೆ ಹೆಚ್ಚು ಬೆಲೆ ಕೊಡಲಾಗುತ್ತಿದೆ.

ಮೆಕಿನ್ಸೆಯ ಹಿರಿಯ ಪಾಲುದಾರೆ ಕ್ಲಾರಿಸ್ ಮ್ಯಾಗ್ನಿನ್ ಪ್ರಕಾರ, ಜನರು ಈಗ ಕೇವಲ ಬೆಲೆ ನೋಡಿ ವಸ್ತುಗಳನ್ನು ಖರೀದಿಸುತ್ತಿಲ್ಲ. ಬದಲಾಗಿ, ಅದರ ಬಾಳಿಕೆ, ಉಪಯೋಗ, ಗುಣಮಟ್ಟವನ್ನು ನೋಡುತ್ತಿದ್ದಾರೆ.ಈಗ ಜನರು ತುಂಬಾ ಬುದ್ಧಿವಂತರಾಗಿದ್ದಾರೆ. ತಮ್ಮ ಹಣಕ್ಕೆ ಮೋಸವಿಲ್ಲದಂತಹ ಗುಣಮಟ್ಟದ ಉತ್ಪನ್ನ ಖರೀದಿಸುವಲ್ಲಿ ಜಾಗ್ರತೆ ಹೆಚ್ಚಿದೆ ಎಂದು ಹೇಳಿದ್ದಾರೆ.

ದೊಡ್ಡ ಖರೀದಿಗಳ ಮೇಲೆ ಪರಿಣಾಮ

ಪ್ರಯಾಣ, ಸೌಂದರ್ಯವರ್ಧಕ ಮತ್ತು ಫ್ಯಾಷನ್‌ನಂತಹ ಹೆಚ್ಚು ಯೋಚಿಸಿ ಮಾಡುವ ಖರೀದಿಗಳಲ್ಲಿ ಜನರೇಟಿವ್ ಎಐ ಪರಿಕರಗಳ ಬಳಕೆ ಹೆಚ್ಚಾಗಿದೆ ಎಂದು ಸಂಶೋಧನೆ ಹೇಳಿದೆ. ಇದು ಉದ್ಯಮಗಳು ತಮ್ಮ ಕಾರ್ಯಾಚರಣೆ ಮತ್ತು ಮಾರುಕಟ್ಟೆ ತಂತ್ರಗಳನ್ನು ವೇಗವಾಗಿ ಬದಲಾಯಿಸಿಕೊಳ್ಳುವಂತೆ ಒತ್ತಡ ಹೇರುತ್ತಿದೆ. (ANI)

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

Read more Articles on
click me!

Recommended Stories

ಮಧ್ಯರಾತ್ರಿಯಿಂದ ಇನ್​ಸ್ಟಾ, ಫೇಸ್​ಬುಕ್​ ಸ್ಟಾಪ್​! ಹಗಲಲ್ಲೂ ಟೈಮ್​ ಲಿಮಿಟ್​: ಯಾವಾಗಿಂದ ಜಾರಿ- ಏನಿದು ರೂಲ್ಸ್​
ಶೀಘ್ರವೇ ಆಗಸಕ್ಕೆ ಚಿಮ್ಮಲಿದೆ ಇಸ್ರೋದ GSLV-F17 ರಾಕೆಟ್, ಬಾಹ್ಯಾಕಾಶದಲ್ಲಿದ್ದು ಭಾರತ ಕಾಯಲಿದೆ EOS-5!