ಮಾರುತಿ ಸುಜುಕಿ ಕಾರು ಸುರಕ್ಷತಾ ಫಲಿತಾಂಶ ಪ್ರಕಟ!

By Suvarna NewsFirst Published Jul 29, 2018, 4:07 PM IST
Highlights

ಮಾರುತಿ ಸುಜುಕಿ ಸಂಸ್ಥೆಯ 15 ಕಾರುಗಳ ಪೈಕಿ 9 ಕಾರುಗಳು ಸುರಕ್ಷತಾ ಪರೀಕ್ಷೆಯಲ್ಲಿ ಪಾಸ್ ಆಗಿದೆ. ಹಾಗಾದರೆ ಸುರಕ್ಷತಾ ಪರೀಕ್ಷೆಯಲ್ಲಿ ಪಾಸ್ ಆಗಿರೋ ಹಾಗೂ ಫೇಲ್ ಆಗಿರೋ ಕಾರುಗಳು ಯಾವುದು? ಇಲ್ಲಿದೆ ವಿವರ.

ಬೆಂಗಳೂರು(ಜು.29): ಕಾರು ತಯಾರಿಕಾ ಕಂಪೆನಿಗಳಿಗೆ ಅಗ್ನಿಪರೀಕ್ಷೆ ಎದುರಾಗೋದು ಸುರಕ್ಷತಾ ಪರೀಕ್ಷೆ ವೇಳೆ. ಭಾರತದಲ್ಲಿ ಸುರಕ್ಷತಾ ಪರೀಕ್ಷೆಗಳ ಫಲಿತಾಂಶ ಬೆಳಕಿಗೆ ಬರುವುದೇ ಇಲ್ಲ. ಗ್ರಾಹಕರಿಗೆ ಕಡಿಮೆ ಬೆಲೆಯಲ್ಲಿ ಕಾರು ನೀಡಲು ಹಾಗೂ ಹೆಚ್ಚಿನ ಲಾಭಕ್ಕಾಗಿ ಸುರಕ್ಷತೆಯನ್ನ ಗಂಭೀರವಾಗಿ ಪರಿಗಣಿಸುವುದಿಲ್ಲ.

ಭಾರತದ ಕಾರು ಮಾರುಕಟ್ಟೆಯನ್ನ ಆಕ್ರಮಿಸಿಕೊಂಡಿರುವ ಮಾರುತಿ ಸುಜುಕಿ ಕಂಪೆನಿಯ 15 ಕಾರುಗಳ ಪೈಕಿ 9 ಕಾರುಗಳು ಸಂಪೂರ್ಣ ಸುರಕ್ಷತೆ ಒದಗಿಸುವಲ್ಲಿ ವಿಫಲವಾಗಿದೆ. ಉಳಿದ 6 ಕಾರುಗಳು ಸುರಕ್ಷತೆ ಪರೀಕ್ಷೆಯಲ್ಲಿ ಪಾಸ್ ಆಗಿದೆ.

ಮಾರುತಿ ಸುಜುಕಿ ಸಂಸ್ಥೆಯ ಎಸ್ ಕ್ರಾಸ್, ಸಿಯಾಜ್, ಎರ್ಟಿಗಾ, ವಿಟಾರ ಬ್ರೀಜಾ, ಬಲೇನೋ, ಡಿಸೈರ್, ಸ್ವಿಫ್ಟ್, ಇಗ್ನಿಸ್ ಹಾಗೂ ಸೆಲೆರಿಯೋ ಕಾರುಗಳು ಸುರಕ್ಷತಾ ಪರೀಕ್ಷೆಯಲ್ಲಿ ಪಾಸ್ ಆಗಿದೆ. ಆದರೆ ಈ 9 ಕಾರುಗಳಲ್ಲಿ ಹೆಚ್ಚಿನ ಕಾರುಗಳು ಸಮಾಧಾನಕರ ಅಂಕ ಪಡೆದಿದೆ.

ಆಲ್ಟೋ, ಓಮ್ನಿ ಜಿಪ್ಸಿ, ಇಕೋ ಹಾಗೂ ವ್ಯಾಗ್ನರ್ ಕಾರುಗಳು ಸುರತಕ್ಷಾ ಪರೀಕ್ಷೆಯಲ್ಲಿ ಹಲವು ದೂರುಗಳನ್ನ ಎದುರಿಸಿದೆ. ಫುಲ್ ಫ್ರಂಟಲ್ ಇಂಪ್ಯಾಕ್ಟ್, ಆಫ್ ಸೆಟ್ ಫ್ರಂಟಲ್ ಇಂಪ್ಯಾಕ್ಟ್ ಹಾಗೂ ಸೈಡ್ ಫ್ರಂಟಲ್ ಇಂಪ್ಯಾಕ್ಟ್ ಟೆಸ್ಟ್‌ಗಳಲ್ಲಿ ಈ ಕಾರುಗಳು ಸಂಪೂರ್ಣ ನಜ್ಜುಗುಜ್ಜಾಗಿದೆ. ಹೀಗಾಗಿ ಈ ಮೂರು ವಿಭಾಗಗಳಲ್ಲಿ ಸುರಕ್ಷತೆ ಕಡಿಮೆ.

ಇದನ್ನು ಓದಿ: ಬುಗಾಟಿ ಕಾರಿನ ಚಕ್ರ ಬದಲಾಯಿಸೋ ಹಣದಲ್ಲಿ BMW ಕಾರು ಖರೀದಿಸಬಹುದು!

ಇದನ್ನು ಓದಿ: 3 ನಿಮಿಷದಲ್ಲಿ ಎಷ್ಟು ರಾಯಲ್ ಎನ್‌ಫೀಲ್ಡ್ ಬೈಕ್ ಮಾರಾಟವಾಗಿದೆ ಗೊತ್ತಾ?

click me!