
ಲಂಡನ್: ಫೇಸ್‌ಬುಕ್ ಕಂಪನಿಯ ರಹಸ್ಯ ಮಾಹಿತಿ ಸೋರಿಕೆ ಮಾಡುವವರನ್ನು ಪತ್ತೆ ಹಚ್ಚಿ, ಅವರ ವಿರುದ್ಧದ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ರಹಸ್ಯ ಸಿಬ್ಬಂದಿಗಳ ತಂಡವೊಂದನ್ನು ಕಂಪನಿಯ ಮುಖ್ಯಸ್ಥ ಮಾರ್ಕ್ಸ್ ಜುಕರ್‌ಬರ್ಗ್ ರಚಿಸಿದ್ದಾರೆ.
ಇತ್ತೀಚೆಗೆ ಕಂಪನಿಯ ಸಿಬ್ಬಂದಿಯೊಬ್ಬರನ್ನು ಯಾವುದೋ ವಿಚಾರದ ಪ್ರಮೋಷನ್‌ಗೆ ಎಂಬ ರೀತಿಯಲ್ಲಿ ಸಭೆಗೆ ಆಹ್ವಾನಿಸಲಾಗಿತ್ತು. ಹೀಗೆ ಸಭೆಗೆ ಹಾಜರಾದ ಸಿಬ್ಬಂದಿಯನ್ನು ಕಂಪನಿಯ ತನಿಖೆಯ ಮುಖ್ಯಸ್ಥರಾದ ಸೋನ್ಯಾ ಅಹುಜಾ ನೇತೃತ್ವದ ತಂಡ ವಿಚಾರಣೆ ನಡೆಸಿತು.
ಕಂಪನಿಯ ಮಾಹಿತಿಯನ್ನು ಸೋರಿಕೆ ಮಾಡಿದ್ದರ ಬಗ್ಗೆ ಸಭೆಯಲ್ಲಿ ವಿಚಾರಿಸಲಾಯಿತು. ಅಲ್ಲಿ ಸಿಬ್ಬಂದಿ ಸುಳ್ಳು ಹೇಳಿ ತಪ್ಪಿಸಕೊಳ್ಳದ ರೀತಿಯಲ್ಲಿ, ಆತನ ಕಂಪ್ಯೂಟರ್‌ನಲ್ಲಿ ಇದ್ದ ಸ್ಕ್ರೀನ್‌ಶಾಟ್‌ಗಳು, ಕಂಪನಿಗೆ ಸೇರಿಕೊಳ್ಳುವ ಮುನ್ನ ಪತ್ರಕರ್ತರೊಬ್ಬರ ಜತೆಗೆ ಮಾಡಲಾದ ಸಂದೇಶಗಳನ್ನು ಅಹುಜಾ ನೇತೃತ್ವದ ತನಿಖಾ ತಂಡ ಹಾಜರುಪಡಿಸಿತು ಎಂದು ಮೂಲಗಳು ತಿಳಿಸಿವೆ.
ಪ್ರತಿ ವಾರವೂ ನೌಕರರ ಜತೆ ಸಭೆ ನಡೆಸುವ ಜುಕರ್ ಬರ್ಗ್, ಸಾವಿರಾರು ನೌಕರರಿಗೆ ನೂತನ ಪ್ರಾಡಕ್ಟ್ಗಳು ಮತ್ತು ತಮ್ಮ ತಂತ್ರಗಾರಿಕೆ ಬಗ್ಗೆ ಮಾಹಿತಿ ನೀಡುತ್ತಾರೆ. ಆದರೆ ಇವುಗಳನ್ನು ಅವರು ಬಯಲು ಮಾಡುವಂತಿಲ್ಲ. ಇದರ ಹೊರತಾಗಿಯೂ ಅಂಥ ಮಾಹಿತಿ ಹೊರಹಾಕುವವರ ವಿರುದ್ಧ ಕ್ರಮ ಕೈಗೊಳ್ಳಲೆಂದೇ ಇದೀಗ ತನಿಖಾ ತಂಡವನ್ನು ರಚಿಸಲಾಗಿದೆ ಎಂದು ವರದಿಗಳು ತಿಳಿಸಿವೆ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.