
ನವದೆಹಲಿ : ದಿನದಿನಕ್ಕೂ ಯೂಸರ್ ಫ್ರೆಂಡ್ಲಿ ಆಗುತ್ತಿರುವ ವಾಟ್ಸಾಪ್ ಹೊಸ ಹೊಸ ಫೀಚರ್’ಗಳನ್ನು ತನ್ನ ಬಳಕೆದಾರರಿಗೆ ನೀಡುತ್ತಿದೆ. ಅದು ಪ್ರಮುಖವಾಗಿ ತನ್ನ ಬಳಕೆದಾರರಿಗೆ ನೀಡಿರುವಂತಹ ಆಪ್ಶನ್’ಗಳು ಜನರಲ್ಲಿ ಮೆಚ್ಚುಗೆಯನ್ನು ಪಡೆದುಕೊಳ್ಳುತ್ತಿದೆ. ಅಲ್ಲದೇ ದಿನದಿನಕ್ಕೆ ವಾಟ್ಸಾಪ್ ಬಳಕೆದಾರರ ಸಂಖ್ಯೆಯಲ್ಲಿಯೂ ಕೂಡ ಏರಿಕೆ ಕಂಡು ಬರುತ್ತಿದೆ. ಸದ್ಯ 1.5 ಬಿಲಿಯನ್ ವಾಟ್ಸಾಪ್ ಸಕ್ರೀಯ ಬಳಕೆದಾರರಿದ್ದಾರೆ ಎಂದು ಘೋಷಣೆ ಮಾಡಿದೆ.
ಮಿಲಿಯನ್ ಗಟ್ಟಲೆ ಡಿವೈಸ್’ಗಳಲ್ಲಿ ವಾಡ್ಸಾಪ್ ಇನ್’ಸ್ಟಾಲ್ ಆಗುತ್ತಿದೆ. ಪ್ರತೀ ದಿನ 60 ಬಿಲಿಯನ್’ಗೂ ಅಧಿಕ ಮೆಸೇಜ್’ಗಳು ವಾಟ್ಸಾಪ್ ಮೂಲಕ ಸೆಂಡ್ ಆಗುತ್ತಿವೆ. ಹೊಸ ವರ್ಷದಂದು ಒಂದೇ ದಿನ 75 ಬಿಲಿಯನ್ ಮೆಸೇಜ್ ಸೆಂಡ್ ಆಗಿದ್ದಾಗಿ ವಾಟ್ಸಾಪ್ ಹೇಳಿಕೊಂಡಿದೆ.
ಇದೀಗ ವಾಟ್ಸಾಪ್ ಬಳಕೆದಾರರು ತಿಳಿದುಕೊಂಡಿರಲೇಬೇಕಾದ 5 ಸೀಕ್ರೇಟ್’ಗಳ ಬಗ್ಗೆ ತಿಳಿಯೋಣ
*ನಿಮಗೆ ಗೊತ್ತಾ , ವಾಟ್ಸಾಪ್’ನಲ್ಲಿ ನೀವು ಯೂ ಟ್ಯೂಬ್ ವಿಡಿಯೋಗಳನ್ನು ನೋಡಬಹುದು.
*ವಿಡಿಯೋ ಹಾಗೂ ಫೊಟೊಗಳ ಮೇಲೆ ಸ್ಟಿಕರ್’ಗಳನ್ನು ಹಾಕಬಹುದು
*ಸ್ನೇಹಿತರಿಗೆ ವಾಟ್ಸಾಪ್ ಮೂಲಕ ಹಣವನ್ನು ಕಳುಹಿಸಬಹುದು
*ನೀವು ಕಳಿಸಿದ ಮೆಸೇಜ್’ಗಳನ್ನು ಡಿಲೀಟ್ ಮಾಡಲೂ ಬಹುದು
*ನೀವು ಯಾವಾಗ ಕೊನೆಯ ಬಾರಿ ನೋಡಿದ್ದೀರಿ ಎನ್ನುವುದನ್ನು ಹೈಡ್ ಮಾಡಬಹುದು.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.