
ಮುಂಬೈ(ಜು.07): ರಿಲಯನ್ಸ್ ಜಿಯೋದ ಉಚಿತ ಆಫರ್'ಗಳೆಲ್ಲವೂ ಬಹುತೇಕ ಈ ತಿಂಗಳು ಕೊನೆಗೊಳ್ಳಲಿದ್ದು, ಚಂದಾದಾರಿಗೆ ಸಂಸ್ಥೆಯು ಮತ್ತಷ್ಟು ಸೌಲಭ್ಯಗಳನ್ನು ಒಳಗೊಂಡ ಹೊಸ ಆಫರ್'ಅನ್ನು ಪ್ರಕಟಿಸಿದೆ.
ಈ ಆಫರ್ ಕಡಿಮೆ ಬೆಲೆಯಲ್ಲಿ ಹಲವು ಉತ್ತಮ ಸೌಲಭ್ಯಗಳನ್ನು ನೀಡಲಿದ್ದು, ಕೇವಲ 2,27 ರೂ.ಗಳಿಗೆ 4ಜಿ ಡಾಟಾ 1ಜಿಬಿ ಡಾಟಾ ಪಡೆದುಕೊಳ್ಳಬಹುದು. ಹೊಸ ಸೌಲಭ್ಯವನ್ನು ಪಡೆಯಬೇಕಾದರೆ ನೀವು 1999 ರೂ.ನೂತನ ಜಿಯೋ ವೈಫೈ ಡಿವೈಸ್'ಅನ್ನು ಖರೀದಿಸಬೇಕು. ಅಲ್ಲದೆ ಇದು ನಿಮಗೆ ಶಾಶ್ವತವಾಗಿರುತ್ತದೆ. ಈ ಡಿವೈಸ್ 4ಜಿ ಜೊತೆಗೆ 3ಜಿ ಹಾಗೂ 2ಜಿ ಸ್ಮಾರ್ಟ್ ಫೋನ್'ಗಳಿಗೂ ಸಂಪರ್ಕ ಕಲ್ಪಿಸಲಿದ್ದು, ಈ ಮೊಬೈಲ್'ಗಳಲ್ಲಿಯೂ ವೇಗದ ಇಂಟರ್'ನೆಟ್ ಪಡೆದುಕೊಳ್ಳಬಹುದು.
ನೂತನ ಆಫರ್ ಪಡೆಯುವ ಬಗೆ
ನೂತನ ಡಿವೈಸ್ ಖರೀದಿಸಿದವರಿಗೆ ಹೊಸ ಸಿಮ್ ಕೂಡ ನೀಡಲಾಗುತ್ತದೆ.ಜಿಯೋ ಸಿಮ್'ಗೆ ಆಕ್ಟಿವೇಟ್ ಆದ ಪ್ರಾರಂಭದಲ್ಲಿ ಒಂದು ಬಾರಿಗೆ ಮಾತ್ರವಿರುವ 99 ರೂ.ಗಳ ರಿಚಾರ್ಜ್ ಮಾಡಿಸಬೇಕು. ಒಮ್ಮೆ ಈ ರೀಚಾರ್ಜ್ ಮಾಡಿಸಿದ ನಂತರ ನಿಮಗೆ 4 ಡಾಟಾ ಸೌಲಭ್ಯಗಳ ಅನುಕೂಲಗಳಿರುತ್ತವೆ.
1) 509 ರೂ.: ಈ ಆಫರ್'ನಲ್ಲಿ ನಿತ್ಯ 2ಜಿಬಿ ಡಾಟಾ(28 ದಿನಗಳ ಅವಧಿ)ಗಳೊಂದಿಗೆ 4 ತಿಂಗಳ ಕಾಲಾವಧಿಯ 224 ಡಾಟಾ ಸೌಲಭ್ಯವಿರುತ್ತದೆ. ಜೊತೆಗೆ ಅನಿಯಮಿತ ಉಚಿತ ಕರೆಗಳು.
2) 149 ರೂ: ಪ್ರತಿ ತಿಂಗಳು 2 ಜಿಬಿ ಡಾಟಾ, 12 ತಿಂಗಳ ಅವಧಿವರೆಗೆ ಇಟ್ಟು 24 ಜಿಬಿ ವರೆಗೂ ಇರುತ್ತದೆ.
3) 309 ರೂ.: ನಿತ್ಯ 1ಜಿಬಿ ಡಾಟಾ 28 ದಿನಗಳ ಅವಧಿವರೆಗೆ ಒಟ್ಟು 168 ಜಿಬಿಗಳು. 12 ತಿಂಗಳವರೆಗೆ ಇರುತ್ತದೆ.
4) 999 ರೂ.: ಈ ಸೌಲಭ್ಯದಿಂದ ಪ್ರತಿ ತಿಂಗಳು 60 ಜಿಬಿ ಡಾಟಾ ಪಡೆಯುತ್ತೀರಿ. ನಿತ್ಯದ ಡಾಟಾ ಮಿತಿ ಇರುವುದಿಲ್ಲ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.