ಜಿಯೋ ಮುಂದಿನ ಗುರಿ ‘ಸಿಮ್‌ ಇರುವ ಲ್ಯಾಪ್‌ಟಾಪ್‌’!

By Suvarna Web DeskFirst Published Apr 13, 2018, 7:49 AM IST
Highlights

4ಜಿ ಇಂಟರ್ನೆಟ್‌, 4ಜಿ ಸ್ಮಾರ್ಟ್‌ಫೋನ್‌ ಹಾಗೂ ಅಗ್ಗದ ಮೊಬೈಲ್‌ ಫೋನ್‌ಗಳ ಮೂಲಕ ಭಾರತದ ದೂರಸಂಪರ್ಕ ಕ್ಷೇತ್ರದಲ್ಲಿ ಕ್ರಾಂತಿ ಮಾಡಿರುವ ಮುಖೇಶ್‌ ಅಂಬಾನಿ ನೇತೃತ್ವದ ರಿಲಯನ್ಸ್‌ ಜಿಯೋ ಕಂಪನಿಯ ಮುಂದಿನ ಉತ್ಪನ್ನ ಏನು ಗೊತ್ತೆ? ಸಿಮ್‌ ಇರುವ ಲ್ಯಾಪ್‌ಟಾಪ್‌.

ನವದೆಹಲಿ: 4ಜಿ ಇಂಟರ್ನೆಟ್‌, 4ಜಿ ಸ್ಮಾರ್ಟ್‌ಫೋನ್‌ ಹಾಗೂ ಅಗ್ಗದ ಮೊಬೈಲ್‌ ಫೋನ್‌ಗಳ ಮೂಲಕ ಭಾರತದ ದೂರಸಂಪರ್ಕ ಕ್ಷೇತ್ರದಲ್ಲಿ ಕ್ರಾಂತಿ ಮಾಡಿರುವ ಮುಖೇಶ್‌ ಅಂಬಾನಿ ನೇತೃತ್ವದ ರಿಲಯನ್ಸ್‌ ಜಿಯೋ ಕಂಪನಿಯ ಮುಂದಿನ ಉತ್ಪನ್ನ ಏನು ಗೊತ್ತೆ? ಸಿಮ್‌ ಇರುವ ಲ್ಯಾಪ್‌ಟಾಪ್‌.

ಇನ್‌ಬಿಲ್ಟ್‌ ಅಂತರ್ಜಾಲ ಸಂಪರ್ಕ ಹಾಗೂ ದೂರಸಂಪರ್ಕ ಹೊಂದಿರುವ ಲ್ಯಾಪ್‌ಟಾಪ್‌ಗಳನ್ನು ಮಾರುಕಟ್ಟೆಗೆ ಬಿಡಲು ಜಿಯೋ ಕಂಪನಿ ಸಿದ್ಧತೆ ನಡೆಸಿದೆ. ಇದಕ್ಕಾಗಿ ಅಮೆರಿಕದ ಕ್ವಾಲ್ಕಮ್‌ ಚಿಪ್‌ ತಯಾರಿಕಾ ಕಂಪನಿಯ ಜೊತೆ ಮಾತುಕತೆ ನಡೆಸಿದ್ದು, ಭಾರತದ ಮಾರುಕಟ್ಟೆಗೆ ಹೊಂದುವ ಹಾಗೂ ವಿಂಡೋಸ್‌ 10 ಹೊಂದಿರುವ ‘ಸಿಮ್‌ ಲ್ಯಾಪ್‌ಟಾಪ್‌’ ತಯಾರಿಸಿ ಕೊಡುವಂತೆ ಕೇಳಿದೆ.

ಜಾಗತಿಕ ಮಟ್ಟದಲ್ಲಿ ಎಚ್‌ಪಿ, ಆಸುಸ್‌, ಲೆನೋವೋ ಮುಂತಾದ ಲ್ಯಾಪ್‌ಟಾಪ್‌ ಕಂಪನಿಗಳು ಸಿಮ್‌ ಇರುವ ಲ್ಯಾಪ್‌ಟಾಪ್‌ ಬಿಡುಗಡೆ ಮಾಡಲು ಈಗಾಗಲೇ ಕ್ವಾಲ್ಕಮ್‌ ಜತೆ ಒಪ್ಪಂದ ಮಾಡಿಕೊಂಡಿವೆ. ವರ್ಷಕ್ಕೆ 50 ಲಕ್ಷ ಲ್ಯಾಪ್‌ಟಾಪ್‌ಗಳು ಮಾರಾಟವಾಗುವ ಭಾರತದ ಮಾರುಕಟ್ಟೆಗೆ ಈ ಮಾದರಿಯ ಸೋವಿ ಲ್ಯಾಪ್‌ಟಾಪ್‌ ಬಿಡುಗಡೆ ಮಾಡಲು ಜಿಯೋ ಮುಂದಾಗಿದೆ. ಸಿಮ್‌ ಇರುವ ಲ್ಯಾಪ್‌ಟಾಪ್‌ ಮಾರುಕಟ್ಟೆಗೆ ಬಂದರೆ ಅದಕ್ಕೆ ವೈಫೈ, ಮೊಬೈಲ್‌ ಹಾಟ್‌ಸ್ಪಾಟ್‌, ಇಂಟರ್ನೆಟ್‌ ಡಾಂಗಲ್‌ ಮುಂತಾದವುಗಳ ಮೂಲಕ ಇಂಟರ್ನೆಟ್‌ ಸಂಪರ್ಕ ನೀಡುವ ಅಗತ್ಯವಿರುವುದಿಲ್ಲ. ಜೊತೆಗೆ, ಲ್ಯಾಪ್‌ಟಾಪ್‌ನಲ್ಲಿ ಫೋನ್‌ನ ಸೌಕರ್ಯಗಳನ್ನೂ ಪಡೆಯಬಹುದು.

click me!